ಇಷ್ಟೇ ಇಷ್ಟು ಬಟ್ಟೆಯಲ್ಲಿ ಮಾನ ಮುಚ್ಕೊಂಡು ವಯ್ಯಾರ ಮಾಡುತ್ತಿದ್ದ ಸಮಂತಾಗೆ ನೆಟಿಜನ್ಸ್ ಕ್ಲಾಸ್ ತಗೊಂಡಿದ್ದು ಹಳೇ ಕತೆ. ’ಅಲ್ ಕಣವ್ವೋ, ಮದ್ವೆ ಆಗಿದ್ದೀಯಾ, ಕುಮಾರಿ ಆಗಿದ್ದವ್ಳು ಶ್ರೀಮತಿ ಆದ್ಮೇಲೆ ಹಿಂಗೆಲ್ಲ ಮೈ ಬಿಟ್ಕೊಂಡು ತಿರುಗಾಡೋದು ಚೆನ್ನಾಗಿರಲ್ಲ’ ಅಂತೆಲ್ಲ ಡೈರೆಕ್ಟಾಗೇ ಡೈಲಾಗ್ ಹೊಡೆದ್ರು. ಆದರೆ ಸಮಂತಾ ಅಕ್ಕಿನೇನಿ ಅನ್ನೋ ಪ್ರತಿಭಾವಂತ ನಟಿ, ತಮಿಳು, ತೆಲುಗಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋರು ಇಂಥಾ ಚಿಲ್ರೆ ಮಾತಿಗೆಲ್ಲ ಸೊಪ್ಪು ಹಾಕ್ತಾರ.. ಸೋಷಿಯಲ್ ಮೀಡಿಯಾದಲ್ಲಿ ಆಡ್ಕೊಂಡವ್ರು ಆಡ್ಕೊಂಡೇ ಬಾಕಿ, ಅವರ ಕಮೆಂಟ್ ಕಡೆಗೆ ಕಣ್ಣೆತ್ತಿಯೂ ನೋಡದೇ ನೆಗ್ಲೆಕ್ಟ್ ಮಾಡಿದ್ರು ಈ ಚೆಂದುಳ್ಳಿ ಚೆಲುವೆ. ಮೊದಲಿಂದಲೂ ಯಾವುದಕ್ಕೆ ಹೇಗೆ ರಿಯಾಕ್ಟ್ ಮಾಡಬೇಕು ಅನ್ನೋದು ಈಕೆಗೆ ಸಲೀಸು. ದೇಹ ಅನ್ನೋದನ್ನೂ ಕಲಾತ್ಮಕವಾಗಿ ನೋಡಬೇಕು ಎಂದು ನಂಬಿದವರಿಗೆ ತಮ್ಮ ದೇಹ, ಬಟ್ಟೆ ಬಗ್ಗೆ ಬೇರೆಯದೇ ನಿಲುವಿರುತ್ತೆ.

ಅದಿರಲಿ, ಈಗ ಸಮಂತಾ ಕಂಪ್ಲೀಟ್ ಗೆಟಪ್ ಚೇಂಜ್ ಮಾಡ್ಕೊಂಡಿದ್ದಾರೆ. ನೀಟಾದ ಕಾಟನ್ ಸಾರಿ ಉಟ್ಟುಕೊಂಡಿರೋ ಫೋಟೋಗಳನ್ನು ಇನ್ ಸ್ಟಾ ದಲ್ಲಿ ಅಪ್ ಲೋಡ್ ಮಾಡ್ತಿದ್ದಾರೆ. ಜೊತೆಗೆ ಮನೆಯಲ್ಲೇ ಸ್ವತಃ ತರಕಾರಿ, ಹಣ್ಣು ಬೆಳೆದು ಪ್ರಕೃತಿಯಲ್ಲಿ ಖುಷಿ ಕಾಣೋದು ಕಲಿತಿದ್ದಾರೆ. ಮಾಡ್ ಲುಕ್ ನ ಫೇಮಸ್ ಆಕ್ಟರ್ ಸಮಂತಾ ಈ ಬದಲಾವಣೆಯ ಹಿನ್ನೆಲೆ ಏನು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದೆ. ಲೇಟೆಸ್ಟಾಗಿ ಗಿಳಿ ಹಸಿರು ಬಣ್ಣದ ಗೋಲ್ಡನ್ ಬಾರ್ಡರ್ ಇರೋ ಸೀರೆಗೆ ಕಡು ಹಸಿರು ಬಣ್ಣದ ಕ್ಲೋಸ್ ಡ್ ನೆಕ್ ಡಿಸೈನ್ ಇರೋ ಬ್ಲೌಸ್ ಪೋನಿ ಹಾಕ್ಕೊಂಡು ನಿಂತಿರೋ ಸಮಂತಾರ ಕ್ಯಾಂಡಿಡ್ ಫೋಟೋಗೆ ಜನ ‘ಆಹಾ’ ಅಂತಿದ್ದಾರೆ. ಪಕ್ಕದಲ್ಲೇ ತರಲೆ ಮಾಡ್ತಾ ಪತಿ ನಾಗಚೈತನ್ಯ ಅವರೂ ಈ ಫೋಟೋದಲ್ಲಿದ್ದಾರೆ.

ಕೆಲವೇ ಗಂಟೆಗಳ ಹಿಂದೆ ಹಾಕಿದ ಈ ಕ್ಯಾಂಡಿಡ್ ಫೋಟೋವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ‘ಇದು ನನ್ನ ಮೆಚ್ಚಿನ ಫೋಟೋ’ ಎಂದಿರೋದು ಮತ್ತೊಂದು ಹೈಲೈಟ್. ಇದರಲ್ಲಿ ಸಮಂತಾ ಸೀರೆಯ ಜೊತೆಗೆ ಅವರಿಬ್ಬರ ಆಟಿಟ್ಯೂಡ್ ಕ್ಯಾಪ್ಚರ್ ಆಗಿರೋದು ಮತ್ತೊಂದು ವಿಶೇಷ. ನಾಗಚೈತನ್ಯ ಕೈಯಲ್ಲಿ ಅಕ್ಷತೆ ಕಾಳು ಹಿಡಿದು ಸಮಂತಾ ತಲೆಯ ಮೇಲೆ ಒಂದೆರಡು ಕಾಳು ಹಾಕುತ್ತಾ ತುಂಟಾಟ ಮಾಡುತ್ತಿರುವಂತೆ, ಇದರ ಪರಿವೇ ಇಲ್ಲದ ಸಮಂತಾ ಸಂಭ್ರಮದಲ್ಲಿ ನಗುತ್ತಿರುವುದು ಈ ಫೋಟೋದ ಮೂಲಕ ಗೊತ್ತಾಗುತ್ತಿದೆ. ಈ ಫೋಟೋದಲ್ಲಿ ಈ ಜೋಡಿ ಸಖತ್ ಕ್ಯೂಟ್ ಆಗಿ ಕಾಣ್ತಿದ್ದಾರೆ. ಹಲವು ಸೆಲೆಬ್ರಿಟಿಗಳು, ಸಮಂತಾ ಅಭಿಮಾನಿಗಳು ಈ ಫೋಟೋವನ್ನು ಇನ್ನಿಲ್ಲದಂತೆ ಮೆಚ್ಚಿಕೊಂಡಿದ್ದಾರೆ.

ಸ್ಯಾಡ್‌ ನ್ಯೂಸ್‌; ಕೊನೆಗೂ ಗುಡ್‌ ಬೈ ಹೇಳೇ ಬಿಟ್ರಾ ಸಮಂತಾ? 

ಇದಕ್ಕೂ ಮೊದಲು ಈ ಸೀರೆಯುಟ್ಟು ಗ್ರೂಪ್ ಫೋಟೋದಲ್ಲೂ ಸಮಂತಾ ಕಾಣಿಸಿಕೊಂಡಿದ್ದಾರೆ. ಕೈಮಗ್ಗದ ಈ ಸೀರೆಯ ಹೆಚ್ಚುಗಾರಿಕೆಯ ಬಗ್ಗೆ ಅಲ್ಲಿ ಹೇಳಿಕೊಂಡಿದ್ದಾರೆ. ಇದು ಸಮಂತಾ ಅವರಿಗೆ ಕೈಮಗ್ಗದ ಸೀರೆಯ ಬಗೆಗೆ ಇರೋ ಕಾಳಜಿಯನ್ನು ಹೇಳೋದರ ಜೊತೆಗೆ ಆಕೆಗೆ ಸೀರೆ ಹೆಣೆಯುವ ನೇಕಾರರ ಬಗೆಗೆ ಇರುವ ಗೌರವವನ್ನೂ ಸೂಚಿಸುತ್ತದೆ. ಆಂಧ್ರದ ಕೈಮಗ್ಗದ ಸೀರೆ ಹೆಣೆಯುವ ನೇಕಾರರ ಬಗೆಗೂ ಈ ಪೋಸ್ಟ್ ನಲ್ಲಿ ಸಮಂತಾ ಮೆನ್ಶನ್ ಮಾಡಿದ್ದಾರೆ.

ಪರ್ಫೆಕ್ಟ್ ಫ್ಯಾಮಿಲಿ ಪಿಕ್: ರಾಣಾ ವೈಫ್‌ಗೆ ವೆಲ್‌ಕಮ್ ಎಂದ ಸಮಂತಾ..! 
ಇದಕ್ಕೂ ಮೊದಲೇ ಕಳೆದ ವಾರವಿಡೀ ರಾಣಾ ದಗ್ಗುಬಾಟಿ ಮದುವೆಯ ಫೋಟೋಗಳನ್ನು ಸಮಂತಾ ಪೋಸ್ಟ್ ಮಾಡುತ್ತಿದ್ದರು. ಇಲ್ಲೂ ಈಕೆ ಕಡು ನೀಲಿ ಬಣ್ಣದ ಬಂಗಾರ ಅಂಚುಗಳಿರುವ ಸೀರೆ ಮತ್ತು ಗೋಲ್ಡನ್ ಕಲರ್ ಬ್ಲೌಸ್ ನಲ್ಲಿ ಮುದ್ದಾಗಿ ಮಿಂಚುತ್ತಿದ್ದರು. ಇದು ರಾ ಮ್ಯಾಂಗೋದ ಸೀರೆ. ಸಖತ್ ಸಿಂಪಲ್ ಆಗಿರುವ ಆದರೆ ಎಲಿಗೆಂಟ್ ಲುಕ್ ಇರೋ ಈ ಸೀರೆಯಲ್ಲಿ ಸಮಂತಾ ಸಖತ್ತಾಗಿ ಕಾಣ್ತಿದ್ದಾರೆ. ಅವರ ಮೂಲಕ ಅವರುಟ್ಟ ಸೀರೆಯ ಚೆಲುವೂ ಹೆಚ್ಚಾಗಿದೆ.
ಅಲ್ಲಿಗೆ ಸಮಂತಾ ಬಿಕಿನಿ, ತುಂಡುಡುಗೆಗಳಿಂದ ಸೀರೆ, ಚೂಡಿದಾರ್ ನಂಥಾ ಸಾಂಪ್ರದಾಯಿಕ ಉಡುಗೆಗೆ ಶಿಫ್ಟ್ ಆಗ್ತಿದ್ದಾರಾ ಅನ್ನೋ ಅನುಮಾನ ಅವರ ಅಭಿಮಾನಿಗಳದ್ದು. ಆದರೆ ನಮಗೆ ಸಮಂತಾ ಯಾವ ಉಡುಗೆಯಲ್ಲಿ ಕಾಣಿಸಿಕೊಂಡರೂ ಇಷ್ಟವಾಗ್ತಾರೆ ಅನ್ನೋ ಮಾತು ಅಭಿಮಾನಿಗಳದ್ದು.

ರಾಣಾ ದಗ್ಗುಬಟಿ ಮಿಹಿಕಾ ಬಜಾಜ್ 'ಮೆಹಂದಿ' ರಂಗು ಹೆಚ್ಚಿಸಿದ ಸಮಂತಾ