ಸೌತ್‌ ಇಂಡಿಯಾ ಸಿನಿ ಪ್ರೇಕ್ಷಕರ ಮನ ಗೆದ್ದಿರುವ ಸಾಯಿ ಪಲ್ಲವಿ ಈಗ ಹೊಸ ಜರ್ನಿ ಶುರು ಮಾಡಿದ್ದಾರೆ. ಈಗಾಗಲೇ ನಾಗ ಚೈತನ್ಯ ಜೊತೆ ಲವ್‌ ಸ್ಟೋರಿಯಲ್ಲಿ ಮಿಂಚಿರುವ ಸಾಯಿ ಪಲ್ಲವಿ ಅವರ ಹೊಸ ಚಿತ್ರದ ರಿಲೀಸ್‌ಗೆ ಕಾತುರದಿಂದ ಕಾಯುತ್ತಿದ್ದಾರೆ ಅಭಿಮಾನಿಗಳು.  

'ಲವ್‌ಸ್ಟೋರಿ' ಕೇಳಿ ಸಾಯಿ ಪಲ್ಲವಿ ಜಾತಿ ಹಿಂದೆ ಬಿದ್ದ ಸೋಷಿಯಲ್ ಮೀಡಿಯಾ
 
ಎಲ್ಲೆಡೆ ಕೊರೋನಾ ವೈರಸ್‌ ಹೆಚ್ಚಾದಂತೆ ಚಿತ್ರಮಂದಿರಗಳು ಬಂದ್‌ ಆಗಿದ್ದಲ್ಲದೇ, ಚಿತ್ರೀಕರಣವೂ ರದ್ದಾಗಿದೆ. ಆದರೆ  ಪಲ್ಲವಿ ಸುಮ್ಮನೆ ಕೂತಿಲ್ಲ. ಸೈಲೆಂಟ್‌ ಆಗಿ ಹೊಸ ಸ್ಕ್ರಿಪ್‌ಗೆ ಸೈ ಎಂದಿದ್ದಾರೆ. ಹೌದು! ಸಾಯಿ ಪಲ್ಲವಿ ಅಜಯ್ ಭೂಪತಿ ನಿರ್ದೇಶನದ 'RX100'ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಈ ಹಿಂದೆ ಚಿತ್ರದಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆನಂತರ ಬಾಲಿವುಡ್‌‌ಮ ಅದಿತಿ ರಾವ್‌ ಅಭಿನಯಿಸುತ್ತಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಈಗ ಇಬ್ಬರ ಕೈ ತಪ್ಪಿ ಸಾಯಿ ಪಲ್ಲವಿ ಪಾಲಾಗಿದೆ. 

Rowdy Baby ಸಾಯಿ ಪಲ್ಲವಿಗಿದೆ ಈ ರೇರ್ ಟ್ಯಾಲೆಂಟ್!

ನಾಯಕಿಯನ್ನು ಫೈನಲ್‌ ಮಾಡಿದ ಚಿತ್ರತಂಡ ಈಗ ನಾಯಕ ಯಾರೆಂದೂ ರಿವೀಲ್ ಮಾಡಿದೆ. ಈಗಾಗಲೆ ಸಾಯಿ ಪಲ್ಲವಿ ಜೊತೆ 'ಪಡಿ ಪಡಿ ಲೆಚೆ ಮನಸು' ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿರುವ ಶರ್ವಾನಂದ್ ಈ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ರಿಲೀಸ್‌ ಸಿಕ್ಕ ನಂತರ ಸಾಯಿ ಪಲ್ಲವಿ ಅವರ ಹೊಸ ಚಿತ್ರ ಸೆಟ್ಟೇರಲಿದೆ. ಈ ಚಿತ್ರದಲ್ಲಿ ನಮ್ಮೆಲ್ಲರ ಮನೆ ಮಗಳಂತಿರುವ ಸಾಯಿ ಅದು ಹೇಗೆ ಕಮಾಲ್ ಮಾಡುತ್ತಾರೋ ಕಾದು ನೋಡಬೇಕು.