ಕೊರೋನಾ ವೈರಸ್‌ ಎರಡನೇ ಅಲೆ ಇಡೀ ಭಾರತವನ್ನೇ ಆಕ್ರಮಿಸಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಕೆಲವು ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳನ್ನು ಸರ್ಕಾರ ಜಾರಿಗೊಳ್ಳಿಸಿತ್ತು. ಸರ್ಕಾರ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸುತ್ತಿರುವ ಜನಸಾಮಾನ್ಯರು ಇದೀಗ ರಾಜಕಾರಣಿಗಳು ಹಾಗೂ ಕುಂಭ ಮೇಳದ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 

ಮದ್ಯದ ಅಮಲಿನಲ್ಲಿ ಸಮಂತಾ ಮೇಲಿರುವ ಫೀಲಿಂಗ್‌ ಟ್ವೀಟ್‌ ಮಾಡಿದ RGV!

ಈ ವಿಚಾರದ ಬಗ್ಗೆ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಟ್ಟೀಟ್ ಮಾಡಿದ್ದಾರೆ. 'ಬ್ರೇಕಿಂಗ್ ನ್ಯೂಸ್‌, ಪರೀಕ್ಷೆ ಮುಂದೂಡಲಾಗಿದೆ,  ಬ್ಯುಸಿನೆಸ್‌ ವ್ಯಾಪಾರ ಮುಚ್ಚಲಾಗಿದೆ, ಚಿತ್ರಮಂದಿರ ಬಂದ್ ಮಾಡಿದ್ದಾರೆ, ಹೋಟೆಲ್‌ ತೆರೆದಿಲ್ಲ. ಈ ಎಲ್ಲಾ ಕೆಲಸಗಳಿಗೆ ಬ್ರೇಕ್ ಬಿದ್ದಿರುವುದು ಕೊರೋನಾದಿಂದ ಅಲ್ಲ, ನಮ್ಮ ಸರ್ಕಾರದಿಂದ. ಯಾಕೆ ಗೊತ್ತಾ? ಎಲ್ಲರೂ ಅದ್ಧೂರಿಯಾಗಿ ನಡೆದ ಕುಂಭ ಮೇಳದಲ್ಲಿ ಭಾಗವಹಿಸಲ ಎಂದು. ಅಷ್ಟೇ ಅಲ್ಲ ರಾಜಕರಾಣಿಗಳ rallyನಲ್ಲೂ ಜನರು ಬೇಕು ಅಲ್ವಾ? ತುಂಬಾ ಥ್ಯಾಂಕ್ಸ್ ಸರ್ಕಾರ,' ಎಂದು ವ್ಯಂಗ್ಯವಾಗಿ ಟ್ಟೀಟ್ ಮಾಡಿದ್ದಾರೆ. 

ರಾಜಕಾರಣಿಗಳಿಗೆ ಮಾತ್ರ ಕೊರೊನಾ ನಿಯಮವಿಲ್ಲ, ಕುಂಭ ಮೇಳ ಈಗ ಬೇಕಿತ್ತಾ? 

'ಇಲ್ಲಿ ಕೊರೋನಾ ಮೇಳ ನಡೆಯುತ್ತಿದೆ. ಕುಂಭಮೇಳಗೆ ಸೇರಲು ಇಡೀ ಭಾರತವನ್ನು ಆಹ್ವಾನಿಸುತ್ತಿದೆ. ಹರಿದ್ವಾರಕ್ಕೆ ಹೋಗೋಣ. ಅಲ್ಲಿ ಯಾವ ನಿರ್ಬಂಧಗಳೂ ಇರೋಲ್ಲ,ಎಂದಿದ್ದಾರೆ.  ಆರ್‌ಜಿವಿ ತುಂಬಾ ನೇರ ನುಡಿಯ ವ್ಯಕ್ತಿ, ತಮ್ಮ ಟ್ಟೀಟರ್‌ ಖಾತೆ ಮೂಲಕ ಸಮಾಜದ ಹಾಗುಹೋಗುಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಅರ್‌ಜಿವಿ ಮಾಡುವ ಟ್ಟೀಟ್‌ಗಳನ್ನು ಸಾಮಾನ್ಯವಾಗಿ ನೆಟ್ಟಿಗರು ಒಪ್ಪಿಕೊಳ್ಳುವುದಿಲ್ಲ ಆದರೆ ಈ ಒಂದು ವಿಚಾರವನ್ನು ಹೌದು, ನೀವು ಕರೆಕ್ಟ್‌, ಬೇರೆ ಯಾರಿಗೂ ಇದರ ಬಗ್ಗೆ ಚರ್ಚೆ ಮಾಡುವ ಧೈರ್ಯ ಇಲ್ಲ ನೋಡಿ ಎಂದು ಪ್ರತ್ರಿಕ್ರಿಯೆ ನೀಡಿದ್ದಾರೆ.

ನಟ ಯಶ್, ನಿರ್ದೇಶಕ ಪ್ರಶಾಂತ್‌ ನೀಲ್‌ರನ್ನು ಹೊಗಳಿ ಆರ್‌ಜಿವಿ ಟ್ಟೀಟ್!