ಟಾಲಿವುಡ್‌ ನ  ಮಿಸ್ಟರ್ ಫರ್ಪೆಕ್ಟ್  , ಲವ್ಲಿ ಮ್ಯಾನ್ ಪ್ರಭಾಸ್‌ ಆರೋಗ್ಯದ ಬಗ್ಗೆ ಗಾಬರಿ ಪಡುವ ಅವಶ್ಯಕತೆ ಇಲ್ಲ. ಹೌದು! ಕೆಲ ದಿನಗಳ  ಹಿಂದೆ ಜಾರ್ಜಿಯಾದಿಂದ ಭಾರತಕ್ಕೆ ಹಿಂತಿರುಗಿದ ಪ್ರಭಾಸ್‌ಗೆ ಯಾವ ಕೊರೋನಾ ಸೋಂಕು ತಾಗಿಲ್ಲ ಅವರು ಆರಾಮಾಗಿದ್ದಾರೆ  ಆದರೂ ಆಸ್ಪತ್ರೆ ಸೇರಲು ಅವರೇ   ನಿರ್ಧರಿಸಿರುವುದಾಗಿ  ಅವರ ಚಿತ್ರ ತಂಡ ತಿಳಿಸಿದೆ . 

ಜಾರ್ಜಿಯಾದಲ್ಲಿ ಪೂಜಾ ಹೆಗ್ಡೆ ಜೊತೆ 'ಜಾನ್‌' ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಪ್ರಭಾಸ್‌ ಆಂಡ್ ಟೀಂ ಕೊರೋನಾ ವೈರಸ್‌ ಹರಡುವ ಮುಂಚೆನೇ ಚಿತ್ರೀಕರಣ ಮುಗಿಸಿ ಭಾರತಕ್ಕೆ ಹಿಂತಿರುಗಿದ್ದಾರೆ. ಜಾರ್ಜಿಯಾಗೆ ತೆರಳುವ ಮುನ್ನ ಆಸ್ಪತ್ರೆ ಸನ್ನಿವೇಶ ಚಿತ್ರೀಕರಣಕ್ಕೆಂದು ಅನ್ನಪೂರ್ಣ ಸ್ಟುಡಿಯೋದಲ್ಲಿ  ಸೆಟ್‌ ಹಾಕಲಾಗಿತ್ತು ಆದರೆ ಕೊರೋನಾ ವೈರಸ್‌ ಭಾರತದಲ್ಲಿ ಹೆಚ್ಚಾದ ಕಾರಣ ಚಿತ್ರೀಕರಣ ರದ್ದಾಗಿದೆ. ಹಾಗಾಗಿ ಕೊರೋನಾ ವೈರಸ್‌ ದೂರವಾದ ಬಳಿಕ ಪ್ರಭಾಸ್‌  ಚಿತ್ರೀಕರಣ ಶುರು ಮಾಡಲಿದ್ದಾರಂತೆ.

ಜಾರ್ಜಿಯಾದಿಂದ ಭಾರತಕ್ಕೆ ಮರಳಿದ ಬಾಹುಬಲಿಗೆ 14 ದಿನ ಗೃಹ ಬಂಧನ!

ವಿದೇಶದಿಂದ ಮರಳಿದ ಕಾರಣ ಪ್ರಭಾಸ್‌ ಈಗ 14 ದಿನಗಳ ಕಾಲ ಸೆಲ್ಫ್‌ ಕ್ವಾರಂಟೈನ್‌ನಲ್ಲಿದ್ದಾರೆ.  ಕೊರೋನಾ ವೈರಸ್‌ ವಿರುದ್ಧ ಹೋರಾಡಲು ಹಾಗೂ ನಿರ್ಗತಿಕರಿಗೆ ಸಹಾಯವಾಗಲೆಂದು ಮೋದಿ ರಿಲೀಫ್‌ ಫಂಡ್‌ಗೆ 3 ಕೋಟಿ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.  ಇನ್ನು 'ಜಾನ್‌' ಚಿತ್ರದ ಶೂಟಿಂಗ್ ಮುಗಿದ ನಂತರ ಪ್ರಭಾಸ್‌ ಎರಡು ಚಿತ್ರಗಳಿಗೆ  ಸಹಿ ಹಾಕಿದ್ದಾರಂತೆ.