ನಿಶಬ್ದಂ ಚಿತ್ರ ತೆರೆಕಂಡ ನಂತರ ಟ್ವಿಟರ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಅನುಷ್ಕಾ ಶೆಟ್ಟಿ ಅಭಿಮಾನಿಗಳ ಲವ್ಲಿ ಕಾಮೆಂಟ್‌ಗಳಿಗೆ ಸ್ಪಂದಿಸುತ್ತಿದ್ದಾರೆ. ಯಾವುದೇ ರೀತಿಯಲ್ಲಿ ಇರಿಸು ಮುರಿಸು ಮಾಡಿಕೊಳ್ಳದೇ ನೇರವಾಗಿ ಫ್ಯಾನ್ಸ್ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಅಭಿಮಾನಿಯೊಬ್ಬ ಶೇರ್ ಮಾಡಿದ ಮದುವೆ ಫೋಟೋಗೆ ಏನ್ ಹೇಳಿದ್ರು ನೋಡಿ...

ಟ್ವಿಟರ್‌ಗೆ ಎಂಟ್ರಿ ಕೊಟ್ಟ ಅನುಷ್ಕಾ ಶೆಟ್ಟಿ: ಕೆಲವೇ ಗಂಟೆಯಲ್ಲಿ 9 ಲಕ್ಷ ಫಾಲೋವರ್ಸ್..! 

ಕೆವಿಕೆ ಡಾರ್ಲಿಂಗ್ ಎಂಬ ವ್ಯಕ್ತಿ ಅನುಷ್ಕಾ ಮತ್ತು ಪ್ರಭಾಸ್ ಹಸೆಮಣೆ ಮೇಲೆ ಕುಳಿತು ಮಾತನಾಡುತ್ತಿರುವ ಫೋಟೋ ಶೇರ್ ಮಾಡಿದ್ದರು. 'ಅನುಷ್ಕಾ ಮೇಡಂ ದಯವಿಟ್ಟು ಈ ಫೋಟೋ ಬಗ್ಗೆ ಹೇಳಿ. ನಿಮ್ಮ ಉತ್ತರಕ್ಕೆ ಕಾಯುತ್ತಿರುವೆ,' ಎಂದೂ ಕೇಳಿ ಕೊಂಡಿದ್ದರು.

'ಮಿರ್ಚಿ ಸಿನಿಮಾ ಚಿತ್ರೀಕರಣದ ಫೋಟೋ ಇದು. ಇದು ಕ್ಯಾಂಡಿಡ್ ಫೋಟೋ. ನಾವಿಬ್ಬರು ನೆಕ್ಸ್ಟ್ ಶಾಟ್‌ ಬಗ್ಗೆ ಮಾತನಾಡುತ್ತಿದ್ದೆವು. ನನ್ನ ಹೃದಯಕ್ಕೆ ತುಂಬಾನೇ ಹತ್ತಿರವಾಗದ ಸಿನಿಮಾ ಇದು,' ಎಂದು ಅನುಷ್ಕಾ ಶೆಟ್ಟಿ ಅಭಿಮಾನಿಗೆ ಉತ್ತರಿಸಿದ್ದಾರೆ.

ಫ್ರಭಾಸ್‌ ಫ್ಯಾನ್‌ ಪೇಜ್‌ ಡಿಮ್ಯಾಂಡ್‌:
ಅನುಷ್ಕಾಗೆ ಅಭಿಮಾನಿಗಳಿಗಿಂತ ಪ್ರಭಾಸ್‌ ಫ್ಯಾನ್‌ ಪೇಜ್‌ಗಳು ಪ್ರಶ್ನೆ ಕೇಳುವುದು ಜಾಸ್ತಿ ಆಗಿದೆಯಂತೆ. ಆದರೆ ಬೇಸರ ಮಾಡಿಕೊಳ್ಳದೆ ಪ್ರತಿಯೊಬ್ಬರಿಗೂ ಉತ್ತರಿಸುತ್ತಿದ್ದಾರೆ. 'ಮೇಡಂ ನಿಮ್ಮ ಮುಂದಿನ ಚಿತ್ರಕ್ಕೆ ಪ್ರಭಾಸ್ ಜೊತೆ ಅಭಿನಯಿಸುತ್ತೀರಾ,' ಎಂದು ಅನೇಕರು ಪ್ರಶ್ನಸಿದ್ದಾರೆ. 

ವಯಸ್ಸು 30 ದಾಟಿದೆ, ಮದ್ವೆ ಮಾತೇ ಇಲ್ಲ ಅಂತಾರೆ ಈ ತಾರೆಯರು! 

'ಹಾಯ್‌. ಒಂದೊಳ್ಳೆ ಕಥೆ ಬಂದರೆ ಅದಕ್ಕೆ ನಾನು ಪ್ರಭಾಸ್ ಪೇರ್‌ ಆದರೆ ಸೂಪರ್ ಅಗಿರುತ್ತದೆ ಎಂದೆನಿಸಿದರೆ  ಖಂಡಿತಾ ನಾವು ಒಟ್ಟಾಗಿ ಸಿನಿಮಾ ಮಾಡುತ್ತೇವೆ. ನೀವೆಲ್ಲಾ ನಮ್ಮ ಮೇಲೆ ತೋರಿಸುತ್ತಿರುವ ಪ್ರೀತಿಗೆ ನಾನು ಆಭಾರಿ,' ಎಂದು ಅನುಷ್ಕಾ ಕಾಮೆಂಟ್ ಮಾಡಿದ್ದಾರೆ.

ಈಗಾಗಲೆ ಟ್ವಿಟರ್‌ನಲ್ಲಿ 915.3K ಫಾಲೋವರ್ಸ್ ಪಡೆದಿರುವ ಅನುಷ್ಕಾ ಬಿಡುವಿನ ಸಮಯದಲ್ಲಿ ಅಭಿಮಾನಿಗಳ ಜೊತೆ ಕಾಮೆಂಟ್ ಮೂಲಕ ಮಾತನಾಡುತ್ತಾರೆ.