ಕಂಗನಾ ರಣಾವತ್ ಹಾದಿ ಹಿಡಿದ ಅನುಷ್ಕಾ ಶೆಟ್ಟಿ; 'Koo'ನಲ್ಲಿ ಕಾರುಬಾರು ಶುರು!
ಟ್ಟಿಟರ್ ನಂತರ ಕೂ ಸೇರಿಕೊಂಡ ನಟಿ ಅನುಷ್ಕಾ ಶೆಟ್ಟಿ. ಬಾಲಿವುಡ್ 'ಕ್ವೀನ್'ನ ಫಾಲೋ ಮಾಡುತ್ತಿದ್ದಾರಾ ಬಾಹುಬಲಿ ನಟಿ?
ಭಾರತದ ಕಾನೂನಿನ ಕೆಲವು ನಿಮಯಗಳಿಗೆ ವಿರೋಧವಾಗಿದ್ದ ಟ್ಟಿಟರ್‌ನಿಂದ ಹೊರ ಬಂದ ಸೆಲೆಬ್ರಿಟಿಗಳು ಭಾರತೀಯ ಮೂಲದ ಕೂ ಆ್ಯಪ್ ಸೇರಿಕೊಂಡಿದ್ದಾರೆ. ಕೂ ನಮ್ಮ ಭಾರತದ್ದೇ ಆ್ಯಪ್ ಅಗಿರುವ ಕಾರಣ ಹೆಚ್ಚಿನ ಪ್ರಾಮಾಣದಲ್ಲಿ ಸೆಲೆಬ್ರಿಟಿಗಳು ಸೇರ್ಪಡೆಯಾಗುತ್ತಿದ್ದಾರೆ. ಇದರ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದ್ದಂತೆ, ಇದೀಗ ಅನುಷ್ಕಾ ಶೆಟ್ಟಿ ಕೂಡ ಕೂಗೆ ಎಂಟ್ರಿ ಕೊಟ್ಟಿದ್ದಾರೆ.
'ಎಲ್ಲರಿಗೂ ನಮಸ್ಕಾರ. ನೀವೆಲ್ಲರೂ ಸುರಕ್ಷಿತವಾಗಿದ್ದೀರಿ ಎಂದು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ನನ್ನನ್ನು ನೀವು ಕೂನಲ್ಲಿ ಕಾಣಬಹುದು. ನನ್ನ ಚಟುವಟಿಗಳ ಬಗ್ಗೆ ಹಚ್ಚಿಗೆ ತಿಳಿದುಕೊಳ್ಳಲು ಕೂನಲ್ಲಿ ನನ್ನನ್ನು ಫಾಲೋ ಮಾಡಿ,' ಎಂದು ಅನುಷ್ಕಾ ಬರೆದುಕೊಂಡಿದ್ದಾರೆ. ಅನುಷ್ಕಾ ಕೂನಲ್ಲಿ ಖಾತೆ ತೆರೆದು ಒಂದು ದಿನವೂ ಆಗಿಲ್ಲ ಆಗಲೇ 13 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಪಡೆದುಕೊಂಡಿದ್ದಾರೆ.
ನಟಿ ಕಂಗನಾರನ್ನು ಟ್ಟಿಟರ್ ನಿಷೇಧಿಸುತ್ತಿದ್ದಂತೆ, ಕೂ ಆ್ಯಪ್ ಸೇರಿಕೊಂಡರು. ತಮ್ಮ ನೇರ ನುಡಿಯಿಂದಲೇ ಅನೇಕ ವಿಚಾರಗಳ ಬಗ್ಗೆ ಈ ಆ್ಯಪಿನಲ್ಲೀಗ ಧ್ವನಿ ಎತ್ತುತ್ತಿದ್ದಾರೆ. ಅನುಷ್ಕಾ ಸಿನಿ ಸ್ನೇಹಿತರು ಇನ್ನೂ ಕೂ ಸೇರಿಕೊಂಡಿ.ಲ್ಲ ಆದರೆ ಅನುಷ್ಕಾ ಮಾತ್ರ ಸೇರಿಕೊಳ್ಳಲು ಮನಸ್ಸು ಮಾಡಿದ್ದು ಯಾಕೆ? ಅನುಷ್ಕಾ ಕಂಗನಾ ಹಾದಿ ಹಿಡಿಯುತ್ತಿದ್ದಾರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದವರೆಗೂ ಅನುಷ್ಟಾ ಕೂನಲ್ಲಿ ಯಾರನ್ನೂ ಫಾಲೋ ಮಾಡಲು ಆರಂಭಿಸಿಲ್ಲ.
ಟ್ವಿಟರ್‌ನಲ್ಲಿ ನಿಷೇಧ: ಕಂಗನಾರನ್ನು ಸ್ವಾಗತಿಸಿದ ಕೂ ಆ್ಯಪ್
ಅನುಷ್ಕಾ ಶೆಟ್ಟಿ ಮತ್ತು ಕಂಗನಾ ಇಬ್ಬರಿಗೂ ಬೇರೇ ರೀತಿಯ ಫ್ಯಾನ್ ಫಾಲೋವರ್ಸ್ ಇದ್ದಾರೆ. ಕಂಗನಾರ ಪ್ರತಿಯೊಂದೂ ಮಾತಿಗೂ ನೆಟ್ಟಿಗರೂ ಕೊಂಕು ತೆಗೆದರೆ, ಅನುಷ್ಕಾ ಮಾತುಗಳನ್ನು ಕೇಳಿ ಭೇಷ್ ಎನ್ನುತ್ತಾರೆ. ಅಂದ ಮೇಲೆ ಒಂದು ಹಾದಿ, ಒಂದು ಯೋಚನೆ ಮಾಡಲು ಹೇಗೆ ಸಾಧ್ಯ ಎಂದು ಅವರ ಸ್ವೀಟ್ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಸಿನಿ ಸೆಲೆಬ್ರಿಟಿಗಳು ಜನಪ್ರಿಯತೆ ಪಡೆಯುತ್ತಿರುವ ಆ್ಯಪ್‌ಗಳಿಂದ ಜನರಿಗೆ ಆದಷ್ಟು ಹತ್ತಿರವಾಗುವ ಪ್ರಯತ್ನ ಮಾಡುತ್ತಿದ್ದಾರೆ.