2003ರಲ್ಲಿ 'ಬಾಯ್ಸ್‌' ಚಿತ್ರದ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ಸಿದ್ದಾರ್ಥ್ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 4 ಚಿತ್ರಗಳನ್ನು ನಿರ್ಮಿಸಿದ್ದಾರೆ. 16ಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಗಾಯಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ಒಟ್ಟಿನಲ್ಲಿ ಭಾರತದ ಚಿತ್ರರಂಗಕ್ಕೆ ನೀಡಿರುವ ಇವರ ಕೊಡುಗೆ ಅಪಾರ. 

ಇಷ್ಟೆಲ್ಲಾ ಪ್ರಸಿದ್ಧರಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಇರದೇ ಇರ್ತಾರಾ? ತುಂಬಾನೇ ಅ್ಯಕ್ಟಿವ್ ಇದ್ದರು. ಅಲ್ಲದೇ ಮೋದಿ ವಿಚಾರಗಳನ್ನು ವಿರೋಧಿಸುವುದರ ಜೊತೆಗೆ, ಇತ್ತೀಚೆಗೆ ಸಿಎಎ ವಿರುದ್ಧ ಧ್ವನಿ ಎತ್ತುತ್ತಿದ್ದರು. ಸದಾ ಕೇಂದ್ರ ಸರಕಾರ ವಿರೋಧಿ ನೀತಿಗಳನ್ನು ವಿರೋಧಿಸಿ, ಟ್ವೀಟ್ ಮಾಡುತ್ತಿದ್ದರು ಸಿದ್ಧಾರ್ಥ್. ಧಾರ್ಮಿಕ ವಿಚಾರದ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದೀಗ ಇವರ ಟ್ವೀಟರ್ ಖಾತೆಯೇ ಮಾಯಾವಾಗಿದೆ. ಈ ಕಾರಣಕ್ಕೆ ಟ್ಟಿಟ್ಟರ್‌ ಕಂಪನಿಯೇ ಇವರ ಖಾತೆಯನ್ನು ಕ್ಲೋಸ್ ಮಾಡಿದೆ ಎನ್ನಲಾಗುತ್ತಿದೆ. 

ಬಾಲ್ಯದಲ್ಲಿ RSS ಸ್ವಯಂ ಸೇವಕನಾಗಿದ್ದೆ; ಸೀಕ್ರೆಟ್ ಬಹಿರಂಗ ಪಡಿಸಿದ ನಟ ಮಿಲಿಂದ್!

ಸದಾ ಮೋದಿ-ಶಾ ನೀತಿ ಹಾಗೂ ರಾಷ್ಟ್ರೀಯ ಸ್ವಯಂ ಸಂಘವನ್ನು ವಿರೋಧಿಸುತ್ತಿದ್ದ ಸಿದ್ಧಾರ್ಥ್ ವಿರುದ್ಧ ದೂರು ದಾಖಲಾಗಿತ್ತು. ಆದರೆ, ಸಿದ್ಧಾರ್ಥ್ ಸೋಷಿಯಲ್ ಮೀಡಿಯಾ ಖಾತೆ ಮುಚ್ಚಿರುವ ಬಗ್ಗೆ ಇದುವರೆಗೂ ಟ್ವೀಟರ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಟ್ಟಿನಲ್ಲಿ ನಟನೊಬ್ಬನ ಟ್ವೀಟರ್ ಖಾತೆ ಮುಚ್ಚಿರುವ ಸಂಬಂಧ ಹತ್ತು ಹಲವು ಊಹಾಪೋಹಗಳು ಹರಿದಾಡುತ್ತಿವೆ.