ಮುಂಬೈ(ಮಾ.12): ಬಾಲಿವುಡ್ ಹಿರಿಯ ನಟ ಮಿಲಿಂದ್ ಸೋಮನ್ ಅವರ ಮೇಡ್ ಇನ್ ಇಂಡಿಯಾ ಪುಸ್ತಕ ಅಂತರ್ಜಾಲದಲ್ಲಿ ಲಭ್ಯವಿದೆ. 54 ವರ್ಷದ ನಟ ಮಿಲಿಂದ್ ಸೋಮನ್ ಬಾಲ್ಯದಲ್ಲಿ ರಾಷ್ಟ್ಪೀಯ ಸ್ವಯಂ ಸೇವಕ ಸಂಘದ(RSS) ಸದಸ್ಯನಾಗಿದ್ದೆ ಅನ್ನೋ ವಿಚಾರವನ್ನು ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಭಾರಿ ಸದ್ದು ಮಾಡುತ್ತಿದೆ.

ಪತ್ನಿಯೊಂದಿಗೆ ಮಿಲಿಂದ್ ಹಾಟ್ ಫೋಟೋಶೂಟ್

ಮಿಲಿಂದ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಮುಂಬೈನಲ್ಲಿ ಶಿವಾಜಿ ಪಾರ್ಕ‌ನಲ್ಲಿ ನಡೆಯುತ್ತಿದ್ದ ಸಂಘದ ಶಾಖೆಗೆ ತೆರಳುತ್ತಿರುವುದನ್ನೂ ಬರೆದುಕೊಂಡಿದ್ದಾರೆ. ನನ್ನಲ್ಲಿ ಶಿಸ್ತು, ದೈಹಿಕ ಸಾಮರ್ಥ್ಯ, ಜೀವನ ಮೌಲ್ಯಗಳು ರೂಪಿತವಾಗಿರಬೇಕು ಅನ್ನೋದು ತಂದೆಯ ಉದ್ದೇಶವಾಗಿತ್ತು ಎಂದಿದ್ದಾರೆ.

 

ಮಿಲಿಂದ್ ಸೋಮನ್ ಎನ್ನುವ ಫಿಟ್’ನೆಸ್ ಐಕಾನ್

ಪುಸ್ತಕದಲ್ಲಿನ RSS ಕುರಿತ ಹೇಳಿಕೆಯನ್ನು ಮಾಧ್ಯಮಗಳು ತಿರುಚುತ್ತಿದೆ. ಪ್ರತಿ ದಿನ ಸಂಜೆ ನಾನು ತಪ್ಪದೆ ಸಂಘದ ಶಾಖೆಗೆ ಹಾಜರಾಗುತ್ತಿದೆ. ಖಾಕಿ ಉಡುಗೆಯಲ್ಲಿ ಪಥಸಂಚಲನ ಮಾಡುತ್ತಿದ್ದೆವು. ಯೋಗ  ಹಾಗೂ ಕೆಲ ಸಂಪ್ರದಾಯಿಕ ಕಸರತ್ತು ಮಾಡುತ್ತಿದ್ದೆವು. ಸಂಘದ ಗೀತೆಯನ್ನು ಹಾಡುತ್ತಿದ್ದೆವು, ಇದರಲ್ಲಿ ಬರವು ಸಂಸ್ಕೃತ ಪದಗಳನ್ನು ಉಚ್ಚರಿಸುತ್ತ ತುಂಬಾ ಖುಷಿ ಪಡುತ್ತಿದ್ದೆ. ಎಲ್ಲರ ಜೊತೆ ಉತ್ಸಾಹದಿಂದ ಬೆರೆಯುತ್ತಿದ್ದೆ ಎಂದು ಮಿಲಿಂದ್ ಹೇಳಿದ್ದಾರೆ.