' ನನ್ನ ಬೇಬಿ ಎಲ್ಲೋ ಕಾಣೆಯಾಗಿದೆ. ನಾನು ಎಲ್ಲರ ಬಳಿ ಕೇಳುತ್ತಲೇ ಇದ್ದೇನೆ. ನನಗೆ ಆ ಬೇಬಿಯನ್ನು ಒಂದು ದಿನ ನೋಡದಿದ್ದರೂ ಆಗುವುದಿಲ್ಲ. ಈ ವೇಳೆ ನಾನು ಬ್ಯುಸಿ ಆಗಿದ್ದೇನೆ. ನನಗೆ ನನ್ನ ಬೇಬಿ ಕಾಣುತ್ತಿಲ್ಲ, ಹುಡುಕಲೂ ಆಗುತ್ತಿಲ್ಲ...

ಟಾಲಿವುಡ್ ಸಿನಿರಂಗದಲ್ಲಿ ನಟ ನರೇಶ್ (Actor Naresh) ಅವರು ಮೊದಲು ಹೀರೋ ಆಗಿ, ಬಳಿಕ ಪೋಷಕ ನಟರಾಗಿ ನಿರಂತರವಾಗಿ ನಟಿಸುತ್ತಲೇ ಬಂದಿದ್ದಾರೆ. ಇದೀಗ ಸಡನ್‌ ಅಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎಮೋಶನಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರು ಪೋಸ್ಟ್ ಮಾಡಿರುವ ವಿಡಿಯೋ ನೋಡುತ್ತಲೇ ಹಲವರು ವಿಭಿನ್ನವಾಗಿ ಕಾಮೆಂಟ್ ಮಾಡತೊಡಗಿದ್ದಾರೆ. ಏಕೆಂದರೆ, ನಟ ನರೇರ್ಶ ಬಗ್ಗೆ ಹಲವರಿಗೆ ಹಲವು ಸಂಗತಿಗಳು ಗೊತ್ತಿವೆ. 

ನಟ ನರೇಶ್ ' ನನ್ನ ಬೇಬಿ ಎಲ್ಲೋ ಕಾಣೆಯಾಗಿದೆ. ನಾನು ಎಲ್ಲರ ಬಳಿ ಕೇಳುತ್ತಲೇ ಇದ್ದೇನೆ. ನನಗೆ ಆ ಬೇಬಿಯನ್ನು ಒಂದು ದಿನ ನೋಡದಿದ್ದರೂ ಆಗುವುದಿಲ್ಲ. ಈ ವೇಳೆ ನನ್ನ ಕಲ್ಕಿ ಸಿನಿಮಾ ಕೂಡ ಸಖತ್ ಸದ್ದು ಮಾಡುತ್ತಿರುವ ಕಾರಣಕ್ಕೆ ನಾನು ಬ್ಯುಸಿ ಆಗಿದ್ದೇನೆ. ನನಗೆ ನನ್ನ ಬೇಬಿ ಕಾಣುತ್ತಿಲ್ಲ, ಹುಡುಕಲೂ ಆಗುತ್ತಿಲ್ಲ. ಬಹಳಷ್ಟು ಜನ ಬೇಬಿ ಕಳೆದುಕೊಂಡಿರುವ ನನ್ನ ಬಗ್ಗೆ ಗೇಲಿ ಮಾಡುತ್ತಿದ್ದಾರೆ. ತಮಗೆ ಯಾರೆಂದು ಕೂಡ ಗೊತ್ತಿಲ್ಲ ಎನ್ನುತ್ತಿದ್ದಾರೆ. ನನ್ನ ಬೇಬಿ ಯಾರೆಂದು ನಿಜವಾಗಿಯೂ ನಿಮಗೆ ಗೊತ್ತಿಲ್ಲವೇ?

ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!

ಆದರೆ, ನನಗೆ ನನ್ನ ಬೇಬಿ ಬೇಕು. ಯಾರಾದರೂ ಹೇಗಾದರೂ ಮಾಡಿ ಹುಡುಕಿಕೊಡಿ...' ಹೀಗೆಂದು ಅಳುತ್ತಾ ವಿಡಿಯೋ ಮಾಡಿದ್ದು, ಅದನ್ನು ಚಿತ್ರದ ಟೀಮ್ ಸೇರಿದಂತೆ ನಟ ನಾಗ್ ಅಶ್ವಿನ್‌ಗೆ ಸಹ ಟ್ಯಾಗ್ ಮಾಡಿದ್ದಾರೆ. 'ಮಗುವನ್ನು ಹೇಗೆ ಪಡೆಯುವುದು ಎಂದು ಸಿನಿಮಾ ಮಂದಿಗೆ ಗೊತ್ತು' ಎಂದು ಕಲ್ಕಿ ನಟ ವಿನಂತಿಸಿದ್ದಾರೆ. ನರೇಶ್ ಅಳುತ್ತಾ ಮಾತಾಡಿರುವ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಅಗಿದ್ದಾರೆ. ನಟ ನರೇಶ್ ಹೇಳುತ್ತಿರುವ ಆ ಬೇಬಿ ಯಾರು? 

ನಟ ನರೇಶ್ ಆ ಬೇಬಿಯ ಬಗ್ಗೆ, ಅದರ ಜತೆ ತಮ್ಮ ಸಂಬಂಧದ ಬಗ್ಗೆ ವೀಡಿಯೋ ಕೊನೆಯಲ್ಲಿ ಹೇಳಿದ್ದಾರೆ. ಆದರೆ ಅದನ್ನು ಕೊನೆಯವರೆಗೆ ನೋಡುವ ಮೊದಲೇ ಹಲವರು ಬೇಬಿ ಬಗ್ಗೆ ಏನೇನೋ ಕಲ್ಪನೆ ಮಾಡಿಕೊಂಡು ಗಾಬರಿಯಾಗಿದ್ದಾರೆ, ಕಾಲೆಳೆದಿದ್ದಾರೆ, ಬಗೆಬಗೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ಆದರೆ, ಯಾರೊಬ್ಬರೂ ಕೂಡ ಆ ಬೇಬಿಯನ್ನು ಹುಡುಕುವ ಪ್ರಯತ್ನ ಮಾತ್ರ ಮಾಡುತ್ತಿಲ್ಲ ಎನ್ನಬಹುದು. 

ರಜನಿಕಾಂತ್ ಕಂಡು ಶಾರುಖ್ ಖಾನ್ ಮಾಡಿದ್ದೇನು? ಅಂಬಾನಿ ಮದುವೆಯಲ್ಲಿನ ಈ ಘಟನೆ ವೈರಲ್ ಆಗ್ತಿದೆ!

ಹಾಗಿದ್ದರೆ, ಆ ಬೇಬಿ ಯಾರು? ಆ ವಿಡಿಯೋದ ಅಸಲಿಯತ್ತೇನು ಎಂದು ಹುಡುಕ ಹೊರಟರೆ ಅದಕ್ಕೆ ಬೇರೆಯದೇ ಆಯಾಮ ದೊರಕುತ್ತದೆ. ನಟ ನರೇಶ್ ಅವರು ತಮ್ಮ ಹೊಸ ಚಿತ್ರದ ಪ್ರಚಾರಕಾರ್ಯಕ್ಕೆ ಬಳಿಸಿಕೊಂಡ ಭಾವನಾತ್ಮಕ ತಂತ್ರ ಇದು ಎನ್ನಲಾಗಿದೆ. ಈಗ ಸಿನಿಮಾ ಮಾಡುವುದಕ್ಕಿಂತಲೂ ಅದನ್ನು ಪ್ರೇಕ್ಷಕರಿಗೆ ರೀಚ್ ಮಾಡುವುದೇ ಕಷ್ಟ ಎನ್ನಬಹುದು. ಅದಕ್ಕಾಗಿ ಸಿನಿಮಾ ಮಂದಿ ಬೇರಬೇರೆಯದೇ ತಂತ್ರ ಅನುಸರಿಸುತ್ತಿದ್ದಾರೆ. ಅದರಲ್ಲಿ ಇದೂ ಒಂದು!

ನಟ ನರೇಶ್ ಅವರ ಜೊತೆ ಆ ಹೊಸ ಚಿತ್ರದಲ್ಲಿ ಬ್ರಹ್ಮಾನಂದಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುಧೀರ್ ಪುಲ್ಲತ್ತ ನಿರ್ದೇಶನದ ಈ ಚಿತ್ರವು ಸಂಪೂರ್ಣವಾಗಿ ಕಾಮಿಡಿ ಬೇಸ್ಡ್ ಎನ್ನಲಾಗಿದೆ. ಈ ಚಿತ್ರದಲ್ಲಿ ಕೀಡಾಕೋಲಾ ಖ್ಯಾತಿಯ ರಾಗ್ ಮಯೂರ್ ಮತ್ತು ಪ್ರಿಯಾ ವಡ್ಲಿಮನಿ ಸಹ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಈಗ ನಟ ನರೇಶ್ ಶೇರ್ ಮಾಡಿರುವ ವೀಡಿಯೋ ಸಖತ್ ವೈರಲ್ ಆಗುತ್ತಿದ್ದು ಚಿತ್ರಕ್ಕಿಂತಲೂ ಹೆಚ್ಚು ಇದೇ ಫೇಮಸ್ ಆಗಬಹುದೇ?

సడెన్‏గా వదిలేసి వెళ్లిపోయింది .. | Actor Naresh Emotional Words About His Baby | Pavitra Lokesh

ಅನುಶ್ರೀ ಮ್ಯಾರೇಜ್‌ಗೆ ರೆಡಿ, ಗಂಡು ಹುಡುಕುವ ಕೆಲಸ ಖಾಲಿ ಇದ್ಯಂತೆ; ಯಾಕೆ ಟ್ರೈ ಮಾಡ್ಬಾರ್ದು..?