ಖ್ಯಾತ ಟಿಕ್ ಟಾಕ್ ಸ್ಟಾರ್ ಮೇಘಾ ಠಾಕೂರ್ ಹಠಾತ್ ನಿಧನರಾಗಿದ್ದಾರೆ.  21 ವರ್ಷದ ಮೇಘಾ ಠೂಕೂರ್ ನಿಧನದ ವಿಚಾರವನ್ನು ಅವರ ಪೋಷಕರು ಘೋಷಿಸಿದ್ದಾರೆ. ಕೆನಡಾದಲ್ಲಿ ವಾಸವಿದ್ದ ಮೇಘಾ ತನ್ನ ನಿವಾಸದಲ್ಲೇ ಸಾವನ್ನಪ್ಪಿದ್ದಾರೆ. 

ಖ್ಯಾತ ಟಿಕ್‌ಟಾಕ್ ಸ್ಟಾರ್ ಮೇಘಾ ಠಾಕೂರ್ ಹಠಾತ್ ನಿಧನರಾಗಿದ್ದಾರೆ. 21 ವರ್ಷದ ಮೇಘಾ ಠೂಕೂರ್ ನಿಧನದ ವಿಚಾರವನ್ನು ಅವರ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದರು. ಕೆನಡಾದಲ್ಲಿ ವಾಸವಿದ್ದ ಮೇಘಾ ತನ್ನ ನಿವಾಸದಲ್ಲೇ ಸಾವನ್ನಪ್ಪಿದ್ದಾರೆ. 

ಮೇಘಾ ಠಾಕೂರ್ ಟಿಕ್‌ಟಾಕ್‌ನಲ್ಲಿ 930 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು. ಅಂದಹಾಗೆ ವಿಡಿಯೋಗಳ ಮೂಲಕ ಮೇಘಾ ಸಕಾರಾತ್ಮಕತೆಯನ್ನು ಉತ್ತೇಜಿಸುತ್ತಿದ್ದರು. ಚಿಕ್ ಟಾಕ್ ಜೊತೆಗೆ ತಮ್ಮ ನೃತ್ಯದ ವೀಡಿಯೊಗಳನ್ನು ಸಹ ಆಗಾಗ ಹಂಚಿಕೊಳ್ಳುತ್ತಿದ್ದರು. ಮೇಘಾ ನಿಧನದ ಸುದ್ದಿಯನ್ನು ಅವರ ಪೋಷಕರು ಮೇಘಾ ಇನ್ಸ್ಟಾಗ್ರಾಮ್ ನಲ್ಲಿ ಬಹಿರಂಗ ಪಡಿಸಿ, ನವೆಂಬರ್ 24ರಂದು ನಿಧನರಾಗಿರುವುದಾಗಿ ಪೋಷಕರು ಮಾಹಿತಿ ಹಂಚಿಕೊಂಡಿದ್ದಾರೆ. 

ಮೇಘಾ ಠಾಕೂರ್ ಅವರ ಫೋಟೋವನ್ನು ಶೇರ್ ಮಾಡಿ ಸಾವಿನ ಸುದ್ದಿಯನ್ನು ಬಹಿರಂಗ ಪಡಿಸಿದ ಪೋಷಕರು, 'ಭಾರವಾದ ಹೃದಯದಿಂದ ನಾವು ನಮ್ಮ ಜೀವನದ ಬೆಳಕು, ಕಾಳಜಿಯುಳ್ಳ ಮತ್ತು ಸುಂದರ ಮಗಳು ಮೇಘಾ ಠಾಕೂರ್ ನವೆಂಬರ್ 24, 2022 ರಂದು ಮುಂಜಾನೆ ಇದ್ದಕ್ಕಿದ್ದಂತೆ ಮತ್ತು ಅನಿರೀಕ್ಷಿತವಾಗಿ ನಿಧನರಾದರು. ಮೇಘಾ ಆತ್ಮವಿಶ್ವಾಸದ ಮತ್ತು ಸ್ವಾತಂತ್ರ ಯುವತಿಯಾಗಿದ್ದಳು. ಅವಳು ತನ್ನ ಅಭಿಮಾನಿಗಳನ್ನು ಪ್ರೀತಿಸುತ್ತಿದ್ದಳು ಮತ್ತು ಅವಳ ಮರಣದ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದು ನಾವು ಬಹಿರಂಗ ಪಡಿಸಿದೆವು. ಈ ಸಮಯದಲ್ಲಿ, ನಾವು ಮೇಘಾಗೆ ನಿಮ್ಮ ಪ್ರಾರ್ಥನೆ ಕೋರುತ್ತೇವೆ. ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವಳ ಮುಂದಿನ ಪ್ರಯಾಣದಲ್ಲಿ ಅವಳೊಂದಿಗೆ ಇರುತ್ತದೆ' ಎಂದು ಅವರ ಪೋಷಕರು ದೀರ್ಘವಾದ ಸಾಲುಗಳನ್ನು ಹಂಚಿಕೊಂಡಿದ್ದಾರೆ.

View post on Instagram

ಮೇಘಾ ನಿಧನಕ್ಕೆ ಅವರ ಅಭಿಮಾನಿಗಳು ಸಂತಾಪ ಸೂಚಿಸಿ ಪೋಸ್ಟ್ ಶೇರ್ ಮಾಡುತ್ತಿದ್ದಾರೆ. ಮೇಘಾ ಪೋಷಕರು ಪೋಸ್ಟ್ ಶೇರ್ ಮಾಡುವವರೆಗೂ ಸಾವಿನ ಸುದ್ದಿ ಯಾರಿಗೂ ತಿಳಿದಿರಲಿಲ್ಲ. ಸದ್ಯ ಪೋಷಕರೆ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಂದಹಾಗೆ ಮೇಘಾ ಸಾವಿಗೆ ಕಾರಣವೇನು ಎನ್ನುವ ಬಗ್ಗೆ ಇನ್ನೂ ಬಹಿರಂಗವಾಗಿಲ್ಲ.

View post on Instagram

ಭಾರತ ಮೂಲದ ಮೇಘಾ ಠಾಕೂರ್ ಅವರ ಪೋಷಕರು ಕೇವಲ ಒಂದು ವರ್ಷದವಳಿದ್ದಾಗ ಕೆನಡಾಕ್ಕೆ ತೆರಳಿದರು. 2019 ರಲ್ಲಿ ಮೇಫೀಲ್ಡ್ ಸೆಕೆಂಡರಿ ಶಾಲೆಯಿಂದ ಉತ್ತೀರ್ಣರಾದ ನಂತರ ಮೇಘಾ ವೆಸ್ಟರ್ನ್ ಯೂನಿವರ್ಸಿಟಿಗೆ ಸೇರಿದ್ದರು. ಕಾಲೇಜಿಗೆ ಸೇರಿದ ಕೂಡಲೇ ಮೇಗಾ ಟಿಕ್‌ಟಾಕ್‌ಗೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿದ್ದರು.