ಬಾಲಿವುಡ್‌ ಪರ್ಫೆಕ್ಟ್‌ ಆ್ಯಂಡ್ ಹ್ಯಾಂಡ್ಸಮ್‌ ಮ್ಯಾನ್‌ ಟೈಗರ್‌ ಶ್ರಾಫ್‌ ಸಿನಿಮಾಗಿಂತ ಹೆಚ್ಚಾಗಿ ಕಾಣಿಸಿಕೊಂಡಿರುವುದು ಆಲ್ಬಂ ಸಾಂಗ್‌ನಲ್ಲಿಯೇ. ಆದರೂ ಹೆಣ್ಣು ಮಕ್ಕಳ ಫ್ಯಾನ್ಸ್‌ಗೇನು ಕಮ್ಮೀನಾ?

ಬಿ-ಟೌನ್‌ ಹಿರಿಯ ನಟ ಜಾಕಿ ಶ್ರಾಫ್‌ಗೆ ಇಬ್ಬರು ಮಕ್ಕಳು - ಟೈಗರ್ ಶ್ರಾಫ್ ಮತ್ತು ಕೃಷ್ಣಾ ಶ್ರಾಫ್‌. ಟೈಗರ್‌ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡರೆ ಕೃಷ್ಣಾ ವಿದ್ಯಾಭ್ಯಾಸ, ವಿನ್ಯಾಸ ಎಂದು ಬ್ಯುಸಿಯಾದರು. ಟೈಗರ್‌ ಶ್ರಾಫ್ ಹೆಸರು ನಟಿ ದಿಶಾ ಪಟಾಣಿ ಜೊತೆ ಕೇಳಿ ಬರುತ್ತಿದ್ದರೆ, ಕೃಷ್ಣಾಳ ಹೆಸರು ಇಬಾನ್‌ ಹ್ಯಾಮ್ಸ್‌ ಜೊತೆ ಕೇಳಿ ಬಂದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವಾ ಆಗಿರುವ ಕೃಷ್ಣ ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದಲೂ ಬಾಯ್‌ಫ್ರೆಂಡ್ ಜೊತೆ ಇರುವ ಫೋಟೋ ಅಪ್ಲೋಡ್‌ ಮಾಡುತ್ತಿದ್ದಾರೆ. ಆದರೆ, ನಿಜವಾಗಲೂ ಈ ಜೋಡಿ ಒಟ್ಟಿಗೇ ಇದ್ಯಾ?

ರೊಮ್ಯಾಂಟಿಕ್ ಫೋಟೋ ಇನ್ಸ್ಟಾಗ್ರಾಮ್‌ನಿಂದ ಗಾಯಾಬ್‌ ಮಾಡಿರುವ ಕೃಷ್ಣಾ ಶ್ರಾಫ್

ಲಾಕ್‌ಡೌನ್‌ನಿಂದ ಯಾವ ನಟ-ನಟಿಯರು ಸುದ್ದಿಯಾಗುತ್ತಿದ್ದಾರೋ ಗೊತ್ತಿಲ್ಲ. ಆದರೆ ಕೃಷ್ಣಾ ಮಾತ್ರ ಮಿಸ್‌ ಆಗದೇ ಸುದ್ದಿಯಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೃಷ್ಣಾ ಇನ್‌ಸ್ಟಾಗ್ರಾಂನಲ್ಲಿ ಬಾಯ್‌ಫ್ರೆಂಡ್‌ ಇಬಾನ್‌ ಜೊತೆ ಮನೆ ಮಹಡಿ ಮೇಲೆ ನಿಂತು ಲಿಪ್‌ಲಾಕ್‌ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಒಬ್ಬರನೊಬ್ಬರು ಕಡಲ್ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕಪಲ್‌ ಗೋಲ್‌ ಫೋಟೋಗಳ ಮೂಲಕ ಫೈಯರ್‌ ಹಚ್ಚುತ್ತಿರುವ ಕೃಷ್ಣಾ ನೋಡಿ ಅನೇಕರು ತಮ್ಮ ಬಾಯ್‌ಫ್ರೆಂಡ್‌ ಜೊತೆ ಫೋಟೋ ಶೇರ್ ಮಾಡುತ್ತಿದ್ದಾರೆ.  

ಲಿಪ್‌ಲಾಕ್‌ ಫೋಟೋಗೆ ಟ್ರೋಲ್‌ ಆದ ಕೃಷ್ಣಾ:

ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ಲೈಫ್ ಟೈಂನಲ್ಲಿ ಸಿಗದ ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ಹಲವರು ಫ್ಯಾಮಿಲಿ ಜೊತೆ  ಕಾಲ ಕಳೆಯುತ್ತಿದ್ದಾರೆ. ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಫುಲ್‌ ಖುಷ್‌ ಆಗಿ ಮನೆಯಲ್ಲೇ  ಹನಿಮೂನ್‌ ಮಾಡುತ್ತಿದ್ದಾರೆ.

 

 
 
 
 
 
 
 
 
 
 
 
 
 

♾️

A post shared by Krishna Shroff (@kishushroff) on May 1, 2020 at 5:40am PDT

'ಮಾಸ್ಕ್‌ ಧರಿಸಬೇಕು ಅಂದ್ರೆ ನೀವು ಕಿಸ್‌ ಮಾಡ್ತಿದ್ದೀರಾ' ಹಾಗೂ 'ಸೋಷಿಯಲ್‌ ಡಿಸ್ಟೆನ್ಸಿಂಗ್‌ ಮೆಂಟೇನ್ ಮಾಡಿ' ಎಂದು ಕಾಮೆಂಟ್‌ ಮಾಡಿದ್ದಾರೆ ಫಾಲೋಯರ್ಸ್. ಕೃಷ್ಣಾ ಸಿಕ್ಕಾಪಟ್ಟೆ ಫಿಟ್ನೆಸ್‌ ಫ್ರೀಕ್‌. ಜಿಮ್‌ ವಿಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತಲೇ ಇರುತ್ತಾರೆ.

ಆದರೆ, ಸದಾ ಬಾಯ್ ಫ್ರೆಂಡ್ ಜೊತೆ ಇರುವ ರೊಮ್ಯಾಂಟಿಕ್ ಫೋಟೋ ಅಪ್ಲೋಡ್ ಮಾಡುತ್ತಿದ್ದ ಕೃಷ್ಣಾ ಇತ್ತೀಚೆಗೆ ಎಲ್ಲಾ ಫೋಟೋಗಳನ್ನೂ ಡಿಲೀಟ್ ಮಾಡಿದ್ದರು. ಇವರು ಡೇಟಿಂಗ್ ಮಾಡುತ್ತಿದ್ದ ಸಿಡ್ನಿ ಮೂಲದ ಎಬಾನ್ ಹೇಮ್ಸ್ ಜೊತೆ ಸಂಬಂಧ ಕಡಿದು ಕೊಂಡಿದ್ದಾರೆ, ಎಂಬ ಗಾಳಿ ಸುದ್ದಿ ಹಬ್ಬಿತ್ತು. ಆದರೆ, ಏಕಾಏಕಿ ಇದೀಗ ಮತ್ತೆ ಸ್ಮೂಚ್ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡು ಮತ್ತೆ ಸುದ್ದಿಯಾಗುತ್ತಿದ್ದಾರೆ. 

ಎಬಾನ್ ಜೊತೆ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ ಕೃಷ್ಣಾ ಲಾಕ್‌ಡೌನ್ ಕಾರಣದಿಂದ ಮುಂಬೈಯಲ್ಲಿಯೇ ಇದ್ದರೆ, ಅವರ ಬಾಯ್ ಫ್ರೆಂಡ್ ಸಿಡ್ನಿಯಲ್ಲಿಯೇ ಇದ್ದಾರೆ. ಈ ಕಾರಣದಿಂದ ತಮ್ಮ ಸಂಗಾತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದು, ತಮ್ಮ ಹಳೇ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ತಮ್ಮ ನೆನಪಿನ ಬುತ್ತಿಯಿಂದ ಹತ್ತು ಹಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದು, ಕೇವಲ ಇನ್‌ಫಿನಿಟಿ ಮಾರ್ಕಿನೊಂದಿಗೆ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಯಾವ ಕ್ಯಾಪ್ಷನ್ ಸಹ ಬರೆಯುತ್ತಿಲ್ಲ. 

ಏನೋ ಒಟ್ಟಿನಲ್ಲಿ ಇವರ ಲೈಫಿನಲ್ಲಿ ಏನೇನಾಗುತ್ತೋ, ಏನೇನು ಮಾಡುತ್ತಾರೋ ಗೊತ್ತಿಲ್ಲ.