ಮಾಡಲ್‌ ಕಮ್ ಬಾಲಿವುಡ್‌ ನಟಿಯಾಗಿ ಗುರುತಿಸಿಕೊಂಡಿರುವ ಲೀಸಾ ಹೈಡನ್‌ ಮೂರನೇ ಮಗುವಿನ ನಿರೀಕ್ಷೆಯಲ್ಲಿರುವುದರ ಬಗ್ಗೆ ತಡವಾಗಿ ಹಂಚಿಕೊಂಡಿದ್ದಾರೆ. ಹಿರಿಯ ಪುತ್ರ ಝಾಕ್‌ ಜೊತೆ  ವಿಡಿಯೋದಲ್ಲಿ ಮಾತನಾಡಿ ತಡವಾಗಿ ಬಹಿರಂಗ ಮಾಡಲು ಕಾರಣವೇನು ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಲೀಸಾ ವಿಡಿಯೋ: 

' ತುಂಬಾ ದಿನಗಳಿಂದ ನಿಮ್ಮೆಲ್ಲರ ಜೊತೆ ಮಾತನಾಡಬೇಕು ಎಂದು ಕಾಯುತ್ತಿರುವೆ. ನಿಮ್ಮ ಜೊತೆ ಒಂದು ವಿಚಾರ ಹಂಚಿಕೊಳ್ಳಬೇಕು ಎಂದು ಕಾಯುತ್ತಿರುವೆ. ಇಷ್ಟು ದಿನಗಳ ಕಾಲ ನಾನು ಹೇಳದೆ ಇರಲು ಕಾರಣವೇ Laziness.ನನ್ನ ಹಿರಿಯ ಮಗ ಝಾಕ್‌ ಬಂದಿದ್ದಾನೆ, ಅವನನ್ನೇ ಕೇಳೋಣ. ಝಾಕ್‌ ಎಲ್ಲರಿಗೂ ಹೇಳು ಅಮ್ಮನ ಹೊಟ್ಟೆಯಲ್ಲಿ ಯಾರಿದ್ದಾರೆ. ಬೇಬಿ ಸಿಸ್ಟರ್' ಎಂದು ಇಬ್ಬರೂ ಕೂಗುತ್ತಾರೆ.

ಆನಂತರ ತಮ್ಮ 6ನೇ ವಿವಾಹ ವಾರ್ಷಿಕೋತ್ಸವಕ್ಕೆ ಲೀಸಾ ಪತಿ ವ್ಯಾಯಾಮ ಮಾಡುವ ಬೈಕ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿಡಿಯೋ ಶೇರ್ ಮಾಡುವ ಮೂಲಕ ತಮ್ಮ ಪ್ರೆಗ್ನೆನ್ಸಿ ಪ್ಲಾಂಟ್ ಮಾಡಿದ್ದಾರೆ ಲೀಸಾ. ಎರಡು ಸಲ ಗರ್ಭಿಣಿಯಾದಾಗಲೂ ಲೀಸಾಗೆ ಬೇಬಿ ಶವರ್ ಮಾಡಲಾಗಿತ್ತು, ಮೂರನೇ ಸಲ ಡಿಫರೆಂಟ್ ಥೀಮ್‌ ಇರಬೇಕೆಂದು Pilates ಮೂಲಕ ಮಾಡಿದ್ದಾರೆ.

ಎಲ್ಲಾ ಓಕೆ ಸ್ವಿಮ್ ಸೂಟ್ ಯಾಕೆ?: ಲಿಸಾ ಫೋಟೋಗೆ ವಿರೋಧ! 

ಲೀಸಾ ಆಪ್ತ ಸ್ನೇಹಿತೆಯರೆಲ್ಲರೂ Pilates ಡ್ರೆಸ್‌ ಧರಿಸಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಲೀಸಾ ಜೊತೆಗೆ ಮತ್ತೊಬ್ಬ ಸ್ನೇಹಿತೆಯೂ ಗರ್ಭಿಣಿಯಾಗಿದ್ದಾರೆ. ಲೀಸಾ ಮೂರನೇ ಮಗು ಹೆಣ್ಣು ಎಂದು ರಿಲೀವ್ ಮಾಡಿದಾಗಿನಿಂದಲೂ ಭಾರತದಲ್ಲಿರುವ ನೆಟ್ಟಿಗರು ಗುಸುಗುಸು ಮಾತನಾಡುತ್ತಿದ್ದಾರೆ. ಲೀಸಾ ಈ ಹಿಂದಿಯೂ ಸ್ಪಷ್ಟನೆ ನೀಡಿದ್ದರು. ತಾವು ವಿದೇಶದಲ್ಲಿ ನೆಲೆಸಿರುವ ಕಾರಣ ಅಲ್ಲಿ ಕಾನೂನಿನ ಪ್ರಕಾರ ಮಕ್ಕಳ ಲಿಂಗ ತಿಳಿದುಕೊಳ್ಳುವುದು ಅಪರಾಧವಲ್ಲ ಎಂದು.

 

 
 
 
 
 
 
 
 
 
 
 
 
 
 
 

A post shared by Lisa Lalvani (@lisahaydon)