Asianet Suvarna News Asianet Suvarna News

UNBELIEVABLE TRUTH: ಪುರುಷನಿಗೆ ಮಹಿಳೆಯಾಗಿ ಬದಲಾದ ಟಾಪ್​ 7 ಸೆಲೆಬ್ರಿಟಿಗಳಿವರು...

ಕೆಲವೊಂದು ಕಾರಣಕ್ಕೆ ಪುರುಷರು ಮಹಿಳೆಯಾಗಿ ಲಿಂಗಪರಿವರ್ತನೆ ಮಾಡಿಕೊಳ್ಳುವುದು ಇದೆ. ಅಂಥ ಏಳು ಸೆಲೆಬ್ರಿಟಿಗಳ ಪರಿಚಯ ಇಲ್ಲಿ ಮಾಡಲಾಗಿದೆ. 
 

These celebrities underwent gender change operation and their transformation was simply surprising
Author
First Published Apr 25, 2023, 11:39 AM IST | Last Updated Apr 25, 2023, 11:39 AM IST

ಈ ಭೂಮಿಯ ಮೇಲೆ ಜನ್ಮ ತಾಳುವುದಾಗಲೀ ಅಥವಾ ಗಂಡು-ಹೆಣ್ಣಾಗಿ ಹುಟ್ಟುವ ಆಯ್ಕೆಯಾಗಲಿ ಯಾರಿಗೂ ಇಲ್ಲ. ಅವೆಲ್ಲವೂ ದೈವಿದತ್ತವಾಗಿ ಬರುವಂಥದ್ದು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಹುಡುಗ ಹುಡುಗಿಯಾಗಬಹುದು, ಹುಡುಗಿ ಹುಡುಗನೂ ಆಗಬಹುದು. ಕೆಲವರು ಹೆಣ್ಣಾಗಿ ಹುಟ್ಟಿದ್ದರಿಂದ ಸಮಾಜದ ಹೀಗಳಿಕೆಗೆ ಮನನೊಂದು ಗಂಡಾಗಿ ಲಿಂಗ ಪರಿವರ್ತನೆ ಮಾಡಿಕೊಳ್ಳುವುದು ಇದ್ದರೆ, ಮೊದಲಿನಿಂದಲೂ ಹೆಣ್ಣಿನ ಜನ್ಮವೆತ್ತಬೇಕು ಎಂದು ಅಂದುಕೊಳ್ಳುವ ಗಂಡುಮಕ್ಕಳು ಲಿಂಗ ಪರಿವರ್ತನೆ ( gender change) ಮಾಡಿಕೊಂಡು ಹೆಣ್ಣಾಗಿ ಬದಲಾಗುತ್ತಿದ್ದಾರೆ. ಇನ್ನು ಕೆಲವು ಗಂಡುಗಳು ಗಂಡುಮಕ್ಕಳ ಮೇಲೆ ಹೆಣ್ಣುಮಕ್ಕಳು ಹೆಣ್ಣುಮಕ್ಕಳನ್ನೇ ಪ್ರೀತಿಸುವ ಕಾರಣ, ಮದುವೆಯಾಗುವುದಕ್ಕಾಗಿ ಒಬ್ಬರು ಲಿಂಗ ಬದಲಾವಣೆ  ಮಾಡಿಕೊಳ್ಳುವ ಉದಾಹರಣೆಗಳೂ ನಮ್ಮ ಕಣ್ಣ ಮುಂದೆ ಇದೆ. ಹೆಚ್ಚಿನವರು ಟ್ರಾನ್ಸ್​ಜೆಂಡರ್​ನಲ್ಲಿ ಹುಟ್ಟಿರುವ ಕಾರಣ, ಲಿಂಗ ಪರಿವರ್ತನೆ ಮಾಡಿಕೊಳ್ಳುವುದು ಇದೆ. ಕಾರಣ ಏನೇ ಇರಲಿ. ಪ್ರಕೃತಿಗೆ ವಿರುದ್ಧವಾಗಿ ಹೋಗುವುದು ಈಗಿನ ದಿನಗಳಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಲಿಂಗ ಬದಲಾವಣೆ ಪ್ರಕ್ರಿಯೆಗಳು ನಡೆಯುವುದು ಇದೆ, ಕೆಲವು ದೇಶಗಳಲ್ಲಿ ಇದು ಕಾನೂನುಬಾಹಿರವಾಗಿದ್ದರೂ, ಕಾನೂನುಬದ್ಧವಾಗಿರುವ  ದೇಶಗಳಿಗೆ ಹೋಗಿ ಲಿಂಗ ಪರಿವರ್ತನೆ ಮಾಡಿಕೊಂಡು ಬರುವುದೂ ಇದೆ.

ಇದೀಗ ಇಲ್ಲಿ ಹೇಳಹೊರಟಿರುವುದು ಖ್ಯಾತ ರೂಪದರ್ಶಿಗಳು, ತಾರೆಯರು ಸೇರಿದಂತೆ ಸೆಲೆಬ್ರಿಟಿಗಳ ಬಗ್ಗೆ. ಗಂಡು ಹೆಣ್ಣಾಗಿ ಹೆಣ್ಣು ಗಂಡಾಗಿರುವ ಸೆಲೆಬ್ರಿಟಿಗಳು ಇವರು. ಏಳು ಮಂದಿಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. 

ಬಾಬಿ ಡಾರ್ಲಿಂಗ್ (Bobby Darling)
ಖ್ಯಾತ ನಟಿ ಮತ್ತು ರೂಪದರ್ಶಿಯಾಗಿ ಗುರುತಿಸಿಕೊಂಡವರು ಬಾಬಿ ಡಾರ್ಲಿಂಗ್. ಇವರು ವಾಸ್ತವವಾಗಿ ಪುರುಷರಾಗಿ ಜನಿಸಿದ್ದರು. ಮೂಲ ಹೆಸರು ಪಂಕಜ್ ಶರ್ಮಾ.  2010 ರಲ್ಲಿ, ಅವರು ಸ್ತನ ಕಸಿ ಮಾಡಿಸಿಕೊಂಡರು. ತಮ್ಮ ಹೆಸರನ್ನು ಲಿಂಗ ಪರಿವರ್ತನೆ ಬಳಿಕವೂ  ಪಂಕಜ್ ಎಂದೇ ಕೆಲಕಾಲ ಇಟ್ಟುಕೊಂಡರು. ನಂತರ ಅವರು ಬಾಬಿ ಡಾರ್ಲಿಂಗ್ ಎಂದೇ ಖ್ಯಾತಿ ಪಡೆದರು.

 

ಗೌರಿ ಅರೋರಾ (Gauri Arora)
ಗೌರಿ ಅರೋರಾ ಅವರನ್ನು ಔಪಚಾರಿಕವಾಗಿ ಹಂಕಿ 'ಸ್ಪ್ಲಿಟ್ಸ್​ವಿಲ್ಲಾ' ಸ್ಪರ್ಧಿ ಗೌರವ್ ಎಂದು ಕರೆಯಲಾಗುತ್ತಿತ್ತು. ಅವರು ಟ್ರಾನ್ಸ್ ಮಹಿಳೆಯಾಗಿ ಹೊರಬಂದಾಗ ಗಮನ ಸೆಳೆದರು. ಮಹಿಳೆಯಾಗಿ ಸಂಪೂರ್ಣವಾಗಿ ಪರಿವರ್ತನೆಗೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರ್ಧಾರವನ್ನು ಪ್ರಕಟಿಸಿದರು. ಅಂದಿನಿಂದ, ಅವರು ಭಾರತದ ನೆಕ್ಸ್ಟ್ ಟಾಪ್ ಮಾಡೆಲ್ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳ ತಾರೆಯಾಗಿದ್ದಾರೆ.

Taali: ಮಂಗಳಮುಖಿಯಾಗಿ ಸುಷ್ಮಿತಾ ಸೇನ್​: ಚಪ್ಪಾಳೆ ಏಕೆ ಎಂದು ವಿವರಿಸಿದ ನಟಿ

 ನಿಕ್ಕಿ ಚಾವ್ಲಾ (Nikki Chawla)
ನಿಕ್ಕಿ ಚಾವ್ಲಾ ಪುರುಷನಾಗಿ ಜನಿಸಿದವರು.  ನಂತರ ಅವನು ತಮ್ಮನ್ನು   ಮಹಿಳೆಯಾಗಿ ಪರಿವರ್ತನೆಗೊಂಡರು. ಅವರು ತಮ್ಮ ವಂಶವಾಹಿಗಳಿಂದ ಅಸಮಾಧಾನಗೊಂಡಿದ್ದರು ಇದರಿಂದಾಗಿ  ಮಹಿಳೆಯಾಗಲು ಬಯಸಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 2009 ರಲ್ಲಿ, ಅವರು ಕುಟುಂಬದ ವಿರುದ್ಧ ಹೋರಾಡಿ ಮತ್ತು ಲೈಂಗಿಕ ಬದಲಾವಣೆಯನ್ನು ಪಡೆದರು.

 

ಹಿನಾಟಾ ಸಂಘ (Shinata Sangha)
ಬ್ರಿಟೀಷ್ ಇಂಡಿಯನ್ ಮಾಡೆಲ್ ಶಿನಾಟಾ ಸಂಘ ಕೂಡ ಲಿಂಗ ಬದಲಾವಣೆ ಮಾಡಿಕೊಂಡಿದ್ದಾರೆ. ಅವರು ದಕ್ಷಿಣ ಏಷ್ಯಾದ ಪ್ರಸಿದ್ಧ ಟ್ರಾನ್ಸ್ಜೆಂಡರ್. ಟ್ರಾನ್ಸ್‌ಜೆಂಡರ್ ಸಮುದಾಯ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಶಿನಾಟಾ ಭಾಗವಹಿಸಿದ್ದರು. 

 ನವೀನ್ ಭಾಯೆಮಾ (Naveen Bhaema)
ನವೀನ್ ಭಾಯೆಮಾ ನೇಪಾಳದ ಹಳ್ಳಿಯಲ್ಲಿ ಜನಿಸಿದರು. ತಮ್ಮ ಗುರುತಿನ ಬಗ್ಗೆ ಸಂದಿಗ್ಧತೆಯಲ್ಲಿದ್ದ ಇವರು, , ಲಿಂಗ ಬದಲಾವಣೆಯ ಕಾರ್ಯಾಚರಣೆಯನ್ನು ಆರಿಸಿಕೊಳ್ಳುವ ಮೂಲಕ ತಮ್ಮನ್ನು ತಾವು  ಅಂಜಲಿ ಲಾಮಾನನ್ನಾಗಿ ಮಾಡಿಕೊಂಡರು. 

 ಅಂಜಲಿ ಅಮೀರ್ (Anjali Ameer)
ಅವರು ಟ್ರಾನ್ಸ್ ಮಹಿಳೆಯಾಗಿ ಹೊರಬಂದಾಗ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಗಮನ ಸೆಳೆದರು. ತಮಿಳಿನ 'ಪೆರನ್ಬು' ಚಿತ್ರದಲ್ಲಿ ದಕ್ಷಿಣದ ಸೂಪರ್‌ಸ್ಟಾರ್ ಮಮ್ಮುಟ್ಟಿ ಎದುರು ನಾಯಕಿ ಪಾತ್ರವನ್ನು ಪಡೆದ ಭಾರತದ ಮೊದಲ ಬಹಿರಂಗವಾಗಿ ಟ್ರಾನ್ಸ್‌ಜೆಂಡರ್ ನಟಿ. ಅಂದಿನಿಂದ ಅವರು ಹಿಂತಿರುಗಿ ನೋಡಲೇ ಇಲ್ಲ.

ಕೇರಳದ ಮೊಟ್ಟಮೊದಲ ತೃತೀಯ ಲಿಂಗಿ ವಕೀಲೆ ಎನಿಸಿದ ಪದ್ಮಲಕ್ಷ್ಮೀ!

ಸೈಶಾ ಶಿಂಧೆ (Saisha Shinde)
ಸ್ವಪ್ನಿಲ್ ಶಿಂಧೆ ಎಂದು ಕರೆಯಲ್ಪಡುವ ಭಾರತೀಯ ಸ್ಟೈಲಿಸ್ಟ್, ಟ್ರಾನ್ಸ್ ಮಹಿಳೆಯಾಗಿ ಹೊರಬಂದರು ಮತ್ತು ಸೈಶಾ ಶಿಂಧೆ ಅವರ ಹೊಸ ಗುರುತನ್ನು ಆರಿಸಿಕೊಂಡರು.
 

Latest Videos
Follow Us:
Download App:
  • android
  • ios