Asianet Suvarna News Asianet Suvarna News

ಹುಡುಗಿಯರ ಎದೆ ಮೇಲೆ ಕೈ ಇಟ್ಟು ಓರೆ ನೋಟ ಬೀರುವ ಓರಿಯ ಟಚ್‌ಗೆ ವಿವರಣೆ ನೀಡಿದ ರಣವೀರ್ ಸಿಂಗ್! ಫನ್ನಿ ವಿಡಿಯೋ

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಓರಿ ತನ್ನ ಜೀವನಕ್ಕಾಗಿ ಏನು ಮಾಡುತ್ತಾನೆ ಎಂದು ಚರ್ಚಿಸುವ ಈ ವಿಡಿಯೋ ಅತ್ಯಂತ ತಮಾಷೆಯಾಗಿದೆ.
 

The way Ranveer is describing Orry is making us laugh hard skr
Author
First Published Mar 12, 2024, 2:58 PM IST

ಅಂಬಾನಿ ಮನೆ ಕಾರ್ಯಕ್ರಮವಿರಲಿ, ಬಾಲಿವುಡ್ ದಿವಾಗಳ ಪಾರ್ಟಿಯಿರಲಿ, ವಿದೇಶದಲ್ಲಿ ನಡೆಯೋ ಸಿನಿ ಸಮಾರಂಭವಿರಲಿ- ಅಲ್ಲೆಲ್ಲ ಓರಿ ಎಂಬಾತ ಇರಲೇಬೇಕು. ಮತ್ತು ಆತ ಎಲ್ಲ ನಟಿಯರು, ಅಂಬಾನಿ ಮನೆಯ ಹುಡುಗಿಯರು ಸೇರಿದಂತೆ ಎಲ್ಲರ ಎದೆ ಮೇಲೆ ಕೈ ಇಟ್ಟು ಓರೆ ನೋಟ ನೀಡುವ ಪೋಸ್‌ನಲ್ಲಿ ಫೋಟೋ ತೆಗೆದುಕೊಳ್ಳಬೇಕು. ಈ ಓರಿ ಯಾರು ಏನು ಎಂಬುದು ಅಷ್ಟಾಗಿ ಬಹಿರಂಗವಾಗದಿದ್ದರೂ ಎಲ್ಲ ನಟಿಯರಿಗೂ ಆತ ಕ್ಲೋಸ್ ಎಂಬುದಂತೂ ಪಕ್ಕಾ.

ಹೆಣ್ಣುಮಕ್ಕಳ ಮೈ ಮೇಲೆ ಕೈಯಿಟ್ಟು ಪೋಸ್ ಕೊಡುವ ಈ ಓರಿ ಯಾರು, ಈ ಓರಿಯ ಟಚ್ ಅರ್ಥವೇನು ಎಂಬುದನ್ನು ಬಾಲಿವುಡ್ ನಟರಾದ ರಣವೀರ್ ಸಿಂಗ್ ಹಾಗೂ ಅರ್ಜುನ್ ಕಪೂರ್ ಸಾಕಷ್ಟು ತಮಾಷೆಗಳೊಂದಿಗೆ ವಿವರಿಸಿದ್ದಾರೆ. ಈ ತಮಾಷೆಯ ವಿಡಿಯೋವನ್ನು ಸ್ವತಃ ಓರಿಯೇ ಹಂಚಿಕೊಂಡಿದ್ದು, ಇದು ಈಗಾಗಲೇ ನೆಟ್ಟಿಗರ ಗಮನ ಸೆಳೆಯುತ್ತಿದೆ.\

ಮುಖೇಶ್ ಅಂಬಾನಿ ಪತ್ನಿಯಾದ ಮೇಲೂ ಶಾಲಾ ಶಿಕ್ಷಕಿಯಾಗಿ 800 ರೂ. ಸಂಬಳ ಪಡೆಯುತ್ತಿದ್ದ ನೀತಾ ಅಂಬಾನಿ!
 

ದಿ ಓರಿ ಟಚ್
ಒರ್ರಿ ಅವರ ಭಂಗಿಗಳು ಯಾವುದೋ ಒಂದು ಹಂತದಲ್ಲಿ ನಿಮ್ಮ ಕಣ್ಣಿಗೆ ಬಿದ್ದಿರುತ್ತದೆ. ಮತ್ತು ಈಗ,ರಣವೀರ್ ಸಿಂಗ್ ಸಾಮಾಜಿಕ ಮಾಧ್ಯಮದ ಸಂವೇದನೆಯ ಆ ಪ್ರಸಿದ್ಧ 'ಎದೆಯ ಮೇಲೆ ಕೈ' ಭಂಗಿಯನ್ನು ಡಿಕೋಡ್ ಮಾಡಿದ್ದಾರೆ.

ಹೇಳಲಾದ ಕ್ಲಿಪ್‌ನಲ್ಲಿ, ರಣವೀರ್ ಓರಿಯನ್ನು ಪರಿಚಯಿಸುತ್ತಾ, 'ಲೇಡೀಸ್ ಆ್ಯಂಡ್ ಜೆಂಟಲ್‌ಮೆನ್ ಈತ ಓರಿ. ಇವನೇನು ಕೆಲಸ ಮಾಡುತ್ತಾನೋ ಗೊತ್ತಿಲ್ಲ' ಎನ್ನುತ್ತಾರೆ.

The way Ranveer is describing Orry is making us laugh hard skr

(ದಿ ಓರಿ ಟಚ್)

ಕೂಡಲೇ ಅರ್ಜುನ್ ಕಪೂರ್ 'ಇವನು ಲಿವರ್' ಎನ್ನುತ್ತಾರೆ. (ಈ ಹಿಂದೆ ಓರಿಯೇ ಸ್ವತಃ ತನ್ನನ್ನು ಲಿವರ್‌ಗೆ ಹೋಲಿಸಿಕೊಂಡ ಮಾತು ವೈರಲ್ ಆಗಿತ್ತು.) ಜೊತೆಗೆ, ರಣವೀರ್‌ಗೆ ನೀನು ಕಿಡ್ನಿ ಎಂದು ಕಾಲೆಳೆಯುತ್ತಾರೆ. 

ಆಗ ರಣವೀರ್, ಓರಿಯ ಪ್ರಸಿದ್ಧ ಭಂಗಿಯನ್ನು ಡಿಕೋಡ್ ಮಾಡುತ್ತಾ, 'ಓರಿ ಒಂದು ಕೇಸ್ ಸ್ಟಡಿ. ಓರಿ ನಿಮ್ಮನ್ನು ಈ ರೀತಿ ಸ್ಪರ್ಶಿಸಿದರೆ (ಎದೆಯ ಮೇಲೆ ಕೈ ಇಟ್ಟರೆ), ಇದರರ್ಥ ನೀವು ಓರಿಯಿಂದ ಅನುಮೋದನೆ ಪಡೆದಿದ್ದೀರಿ ಎಂದರ್ಥ. ಮತ್ತು ಇಲ್ಲದಿದ್ದರೆ, ನೀವಿನ್ನೂ ಈ ವಿಚಾರವಾಗಿ ಹೆಚ್ಚು ಕೆಲಸ ಮಾಡಬೇಕಿದೆ ಎಂದರ್ಥ' ಎಂದಿದ್ದಾರೆ. 

ಮುಂದುವರೆದು, 'ಹೆಚ್ಚಿನ ಸ್ಪರ್ಶವೆಂದರೆ ನೀವು ಹೆಚ್ಚು ಪ್ರಸ್ತುತ' ಎನ್ನುತ್ತಿದ್ದಂತೆಯೇ ಓರಿಯೇ ಸ್ಕೋರಿಂಗ್ ವಿವರ ಹೇಳಿಕೊಳ್ಳುತ್ತಾನೆ.

ವರ್ತೂರು ಸಂತೋಷ್‌ಗೆ ಹುಟ್ಟು ಹಬ್ಬ ಶುಭಾಶಯ ಕೂಗಿ ಹೇಳುವಾಸೆ ಎಂದ ತನಿಶಾ; ಈ ವಿಶ್ಶಲಿ ಏನೋ ಜಾಸ್ತಿನೇ ಇದೆ ಅಂತಿದಾರೆ ಜನ..
 

'ಹೆಚ್ಚು ಮೇಲೆ ಕೈಯಿಟ್ಟಷ್ಟೂ ಹೆಚ್ಚು ಪಾಯಿಂಟ್ಸ್' ಎನ್ನುತ್ತಾ ಓರಿ ವಿವರ ನೀಡುತ್ತಾನೆ. 

ವೀಡಿಯೋ ಪೋಸ್ಟ್ ಮಾಡಿದ ತಕ್ಷಣ ಓರಿಯ ಕಾಮೆಂಟ್ ಬಾಕ್ಸ್‌ಗೆ ಜನ ಮುಗಿಬಿದ್ದಿದ್ದಾರೆ. ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿ 'ಈ ಮನುಷ್ಯ ತುಂಬಾ ಬುದ್ಧಿವಂತ, ಅವನು ಏನು ಮಾಡುತ್ತಿದ್ದಾನೆಂದು ಅವನಿಗೆ ತಿಳಿದಿದೆ!' ಎಂದಿದ್ದರೆ, ಮತ್ತೊಬ್ಬರು, 'ನೀವು ಯಾಕೆ ತುಂಬಾ ಮುದ್ದಾಗಿರುವಿರಿ ಓರ್ರಿ? ನನಗೆ ಉತ್ತರಗಳು ಬೇಕು!' ಎಂದು ಕಾಲೆಳೆದಿದ್ದಾರೆ.

ಇಲ್ಲಿದೆ ವಿಡಿಯೋ

Follow Us:
Download App:
  • android
  • ios