ರಶ್ಮಿಕಾ ಮತ್ತು ಹಾರ್ದಿಕ್ ಪಾಂಡ್ಯ ಮದುವೆಯಾಗಿ ದುಬೈನಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ, ಇವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ಚಿತ್ರಗಳು. ಹಾರ್ದಿಕ್ ಪ್ರಸ್ತುತ ಜಾಸ್ಮಿನ್ ವಾಲಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ರಶ್ಮಿಕಾ ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆ ಜನ್ಮದಿನ ಆಚರಿಸಿಕೊಂಡಿದ್ದರು.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ ದೇವರಕೊಂಡ ನಡುವೆ ಕುಚ್ ಕುಚ್ ನಡೆಯುತ್ತಿದೆ ಎನ್ನುವಾಗಲೇ ಇತ್ತ ರಶ್ಮಿಕಾ, ಕ್ರಿಕೆಟಿಕ ಹಾರ್ದಿಕ್ ಪಾಂಡ್ಯ ಅವರನ್ನು ಗುಟ್ಟಾಗಿ ಮದುವೆಯಾಗಿ ದುಬೈಗೆ ಹಾರಿಬಿಟ್ಟರಾ ಎನ್ನುವ ಪ್ರಶ್ನೆ ಈಗ ಅಭಿಮಾನಿಗಳಿಗೆ ಶಾಕ್ ಮೂಡಿಸಿದೆ. ಹಾರ್ದಿಕ್ ಪಾಂಡ್ಯ ತಮ್ಮ ಮೊದಲ ಪತ್ನಿ ನಟಾಸಾ ಸ್ಟಾಂಕೋವಿಕ್ ಅವರಿಂದ ವಿಚ್ಛೇಚನ ಪಡೆದುಕೊಂಡಿದ್ದಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಅವರನ್ನು ಮದುವೆಯಾಗಿರುವ ಹಾಗೂ ಇಬ್ಬರೂ ದುಬೈಗೆ ಹಾರಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸಿದೆ.
ಹಾರ್ದಿಕ್ ಪಾಂಡ್ಯ ಸದ್ಯ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಅವರನ್ನು ಬಿಟ್ಟು ರಶ್ಮಿಕಾ ಮಂದಣ್ಣ ಜೊತೆ ಮದುವೆ ಮಾಡಿಕೊಂಡ್ರಾ ಎನ್ನುವ ಫೋಟೋ ಇದಾಗಿದೆ. ಅದೇ ಇನ್ನೊಂದೆಡೆ, ಈಚೆಗಷ್ಟೇ ರಶ್ಮಿಕಾ ತಮ್ಮ ಜನ್ಮದಿನವನ್ನು ಓಮನ್‌ನಲ್ಲಿ ನಟ ವಿಜಯ್ ದೇವಕೊಂಡ ಅವರೊಂದಿಗೆ ಆಚರಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಎಲ್ಲೋ ಏನೋ ಮಿಸ್ ಹೊಡಿತಿದೆ ಎಂದುಕೊಂಡರೆ ಅದು ನಿಜ. ಏಕೆಂದರೆ ಇದು ನಿಜವಾದ ಫೋಟೋ ಅಲ್ಲ. ಬದಲಿಗೆ ಕೃತಕ ಬುದ್ಧಿಮತ್ತೆ ಉಪಯೋಗಿಸಿ ಮಾಡಿರುವ ಫೋಟೋ.
ರಕ್ಷಿತ್ ಶೆಟ್ಟಿ ಜೊತೆಗಿನ ಆ ವಿಷ್ಯ ಮಾತ್ರ ಕನ್ನಡದಲ್ಲಿ ಕೇಳ್ಬಾರ್ದಂತೆ! ಅಲೆಲೆ... ರಶ್ಮಿಕಾ...
ಈ ವೈಲ್ ಫೋಟೋದಲ್ಲಿ ರಶ್ಮಿಕಾ ಮತ್ತು ಹಾರ್ದಿಕ್ ಹೂವಿನ ಮಾಲೆ ಧರಿಸಿದ್ದಾರೆ. ಕ್ರಿಕೆಟ್ ಗ್ರೌಂಡ್‌ನಲ್ಲಿ ಇರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ರಶ್ಮಿಕಾ ಹಣೆಯ ಮೇಲೆ ಸಿಂಧೂರವಿದೆ. ರಿಜಿಸ್ಟರ್ ಮ್ಯಾರೇಜ್ ರೀತಿಯ ಫೋಟೋ ಇದಾಗಿದೆ. ಈ ಫೋಟೋ ಕಳೆದ 04 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇವರಿಬ್ಬರ ಮದುವೆ ಹೇಳಿಕೆಗೆ ಪೂರಕವಾದ ಫೋಟೋ ಇದು ಎಂಬಂತಿದೆ. ಅದೇ ಇನ್ನೊಂದರಲ್ಲಿ ಇಬ್ಬರೂ ದುಬೈನಲ್ಲಿ ಅಲ್ಲಿಯ ಡ್ರೆಸ್ ಧರಿಸಿರುವ ಫೋಟೋ ನೋಡಬಹುದಾಗಿದೆ. Hardik Pandya Fans ಎಂಬ ಫೇಸ್‌ಬುಕ್ ಪುಟದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರಶ್ಮಿಕಾ ಮಂದಣ್ಣ ಅವರ ಫೋಟೋವನ್ನು ಹಂಚಿಕೊಳ್ಳಲಾಗಿದೆ. "ಹಾರ್ದಿಕ್ ಮತ್ತು ರಶ್ಮಿಕಾ ಮಂದಣ್ಣ ದುಬೈನಲ್ಲಿ ಇದ್ದಾರೆ" ಎಂದು ಅದರಲ್ಲಿ ಬರೆಯಲಾಗಿದೆ.
ಇನ್ನು ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಮತ್ತೆ ಒಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಇವರಿಬ್ಬರೂ ಎಂಗೇಜ್‌ಮೆಂಟ್ ಬ್ರೇಕ್ ಆಗಿದ್ದು ಹಿಂದೆ ಬಹುದೊಡ್ಡ ಸುದ್ದಿಯಾಗಿತ್ತು. 2017ರ ಜುಲೈ 5ರಂದು ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಜೋಡಿ ಕೊನೆಗೆ 2018ರ ಅಕ್ಟೋಬರ್ ತಿಂಗಳಲ್ಲಿ ಬ್ರೇಕಪ್ ಮಾಡಿಕೊಂಡಿತ್ತು. ರು ಇಬ್ಬರ ನಡುವೆ 14 ವರ್ಷಗಳ ಅಂತರವಿದೆ ಎಂಬ ಸುದ್ದಿ ಆಗ ಸಕತ್ ಸದ್ದು ಮಾಡಿದ್ದೂ ಇದೆ. ಎಂಗೇಜ್ಮೆಂಟ್ ಆದಾಗ ರಶ್ಮಿಕಾಗೆ 20 ವರ್ಷ ವಯಸ್ಸಾಗಿದ್ರೆ ರಕ್ಷಿತ್ಗೆ 34 ವರ್ಷ ವಯಸ್ಸಾಗಿತ್ತು. ಅದರ ಹೊರತಾಗಿಯೂ ಈ ಜೋಡಿ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತದೆ. ಈಚೆಗಷ್ಟೇ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟಿದ ದಿನವನ್ನು ಓಮನ್ ದೇಶದಲ್ಲಿ ಆಚರಿಸಿಕೊಂಡಿದ್ದಾರೆ ಅನ್ನುವ ಸುದ್ದಿ ಇದೆ. ಈ ಸಮಯದಲ್ಲಿ ಹೆಚ್ಚು ಸದ್ದು ಮಾಡಿದ್ದು, ಹಿಂದೊಮ್ಮೆ ರಕ್ಷಿತ್ ಜೊತೆ ರಶ್ಮಿಕಾ ಬರ್ತ್ಡೇ ಆಚರಿಸಿಕೊಂಡಿದ್ದ ಫೋಟೋ.
ರಶ್ಮಿಕಾ ಮಗಳ ಜೊತೆನೂ ರೊಮಾನ್ಸ್ ಮಾಡ್ತೇನೆ ನಿಮಗೇನ್ರಿ ಕಷ್ಟ? ಕಿಡಿಕಿಡಿಯಾದ ಸಲ್ಮಾನ್ ಖಾನ್
