Asianet Suvarna News Asianet Suvarna News

50 ದಿನ ಪೂರೈಸಿದ ಸಂಭ್ರಮದಲ್ಲಿ 'ದಿ ಕೇರಳ ಸ್ಟೋರಿ'; OTT ಬಿಡುಗಡೆ ಸುಳಿವು ನೀಡಿದ ನಟಿ ಆದಾ ಶರ್ಮಾ

ಬ್ಲಾಕ್ ಬಸ್ಟರ್ ದಿ ಕೇರಳ ಸ್ಟೋರಿ ಸಿನಿಮಾ 50 ದಿನಗಳನ್ನು ಪೂರೈಸಿದೆ. ಸದ್ಯದಲ್ಲೇ ಒಟಿಟಿಗೆ ಬರಲಿದೆ ಎಂದು ನಟಿ ಅದಾ ಶರ್ಮಾ ಸುಳಿವು ನೀಡಿದ್ದಾರೆ. 

The Kerala Story has completed 50 days in theatres iam sure it will come on OTT soon says Adah Sharma sgk
Author
First Published Jun 27, 2023, 6:50 PM IST | Last Updated Jun 27, 2023, 6:50 PM IST

ದಿ ಕೇರಳ ಸ್ಟೋರಿ ಕೊನೆಗೂ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚಿಕೊಳ್ಳುವ ಮೂಲಕ ಭರ್ಜರಿ ಯಶಸ್ಸು ಕಂಡಿದೆ ದಿ ಕೇರಳ ಸ್ಟೋರಿ. ಈ ಸಿನಿಮಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅದಾ ಶರ್ಮಾ ಸಿನಿಮಾ ಸೂಪರ್ ಸಕ್ಸಸ್ ಬಗ್ಗೆ ಫುಲ್ ಖುಷ್ ಆಗಿದ್ದಾರೆ. ಸದ್ಯ ಸಿನಿಮಾತಂಡ 50 ದಿನಗಳ ಸಂಭ್ರಮದಲ್ಲಿದೆ. ಜೂನ್ 24ರಂದು ದಿ ಕೇರಳ ಸ್ಟೋರಿ ಸಿನಿಮಾ ಸಾಕಷ್ಟು ವಿವಾದ, ಆಕ್ರೋಶ ಮತ್ತು ಬ್ಯಾನ್ ಗಳ ನಡುವೆ ತೆರೆಗೆ ಬಂದು. ದೇಶದ ಅನೇಕ ರಾಜ್ಯಗಳಲ್ಲಿ ದಿ ಕೇರಳ ಸ್ಟೋರಿ ರಿಲೀಸ್ ಆಯಿತು. ಆದರೆ ಕೆಲವು ರಾಜ್ಯಗಳಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲಾಯಿತು. ಆದರೂ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಈ ಬಗ್ಗೆ ನಟಿ ಅದಾ ಶರ್ಮಾ ಸಂತಸ ಹಂಚಿಕೊಂಡಿದ್ದಾರೆ. 'ನಾವು ದೊಡ್ಡ ಪರದೆಯಲ್ಲಿ 50 ದಿನಗಳನ್ನು ಪೂರೈಸಿದ್ದೇವೆ, ಸದ್ಯದಲ್ಲೇ OTTಗೆ ಬರುತ್ತಿದ್ದೇವೆ  ಎಂದು ನನಗೆ ಖಾತ್ರಿಯಿದೆ' ಎಂದು ಹೇಳಿದ್ದಾರೆ. 

ದಿ ಕೇರಳ ಸ್ಟೋರಿ ಇಸ್ಲಂಗೆ ಮತಾಂತರಗೊಂಡಿರುವ ಯುವತಿಯರ ಜೀವದ ಬಗ್ಗೆ ಇರುವ ಸಿನಿಮಾವಾಗಿದೆ. ಈ ಚಿತ್ರಕ್ಕೆ ಸುದೀಪ್ತೋ ಸೇನ್ ಆಕ್ಷನ್ ಕಟ್ ಹೇಳಿದ್ದಾರೆ. ದಿ ಕೇರಳ ಸ್ಟೋರಿ ಒಟಿಟಿ ಬಿಡುಗಡೆ ಸಿಕ್ಕಾಪಟ್ಟೆ ಗೊಂದಲ ಮೂಡಿತ್ತು. ಯಾವ ಒಟಿಟಿಗಳು ಖರೀದಿ ಮಾಡುತ್ತಿಲ್ಲ ಎನ್ನುವ ಸುದ್ದಿ ಕೂಡ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸುದೀಪ್ತೋ ಸೇನ್, ಈ ಸಿನಿಮಾದ ಹಲವರನ್ನು ಕೆರಳಿಸಿದೆ ಎಂದು ಹೇಳಿದ್ದರು. 'ಒಂದು ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಎಲ್ಲರಿಗೂ ಒಳ್ಳೆಯದು. ಇದು ಥಿಯೇಟರ್ ಮಾಲೀಕರಿಗೂ ಕೂಡ. ಏಕೆಂದರೆ ಇದು ಉದ್ಯಮಕ್ಕೆ ಆದಾಯವನ್ನು ತರುತ್ತದೆ ಮತ್ತು ಬರುವ ಎಲ್ಲಾ ಲಾಭದಲ್ಲಿ ಇನ್ನೂ ಹೆಚ್ಚಿನ ಚಲನಚಿತ್ರಗಳನ್ನು ತಯಾರಾಗುತ್ತೆ. ಅದು ಯಾರನ್ನಾದರೂ ಏಕೆ ಕೆರಳಿಸುತ್ತದೆ? ನಾನು ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದೆ. ಇಂದಿಗೂ ಅಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ' ಎಂದು ಹೇಳಿದ್ದರು. 

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ದಿ ಕೇರಳ ಸ್ಟೋರಿಗೆ OTT ’ಷಡ್ಯಂತ್ರ’ದ ಶಾಕ್‌!

ಒಟಿಟಿಗಳು ಸಿನಿಮಾ ಖರೀದಿಸಲು ಹಿಂದೇಟು ಹಾಕುತ್ತಿವೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸುದೀಪ್ತೋ ಸೇನ್, 'ಇದು ನಿಜವೆಂದು ನಾನು ಭಾವಿಸುವುದಿಲ್ಲ. ಆರಂಭದಲ್ಲಿ ಮಾತ್ರ ನಾವು  ಹಿನ್ನಡೆ ಅನುಭವಿಸಿದೆವು. ಆದರೆ ಜನರು ಅದನ್ನು ವೀಕ್ಷಿಸಿದ ನಂತರ ಮತ್ತು ಅದು ಉತ್ತಮ ವ್ಯವಹಾರವನ್ನು ಮಾಡಿದ ನಂತರ ನಾನು ಚಿತ್ರದ ಬಗ್ಗೆ ಒಳ್ಳೆಯ ವಿಷಯಗಳನ್ನು ಮಾತ್ರ ಕೇಳುತ್ತಿದ್ದೇನೆ. ಈ ಚಿತ್ರ ನಮಗೆ ಕಲಿಸಿದ ಒಂದು ವಿಷಯವೆಂದರೆ ನೀವು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಅದು ನಿಮಗೆ ಸಂಭವಿಸಿಲ್ಲ ಎಂಬ ಕಾರಣಕ್ಕಾಗಿ ನೀವು ಏನನ್ನಾದರೂ ನಿರಾಕರಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಹಲವರ ನಿದ್ದೆಗೆಡಿಸಲು 'ಕೇರಳ ಸ್ಟೋರಿ' ತಂಡದ ಮತ್ತೊಂದು ಸತ್ಯಾಧಾರಿತ ಸಿನಿಮಾ ರೆಡಿ!

ಸಿನಿಮಾ ಅಲ್ಲ ಇದೊಂದು ಚಳುವಳಿ ಎಂದ ಅದಾ

ಸಿನಿಮಾ ಬಗ್ಗೆ ಮಾತನಾಡಿದ್ದ ನಟಿ ಅದಾ, 'ವಿಮಾನ ನಿಲ್ದಾಣಗಳಲ್ಲಿ ಅಭಿಮಾನಿಗಳು ಬಂದು ನನ್ನೊಂದಿಗೆ 1920 ಮತ್ತು ಕಮಾಂಡೋ ಬಗ್ಗೆ ಮಾತನಾಡುತ್ತಿದ್ದರು. ಅವರ ಕಣ್ಣುಗಳಲ್ಲಿ ಕಣ್ಣೀರು. ಅವರ ಕಣ್ಣುಗಳನ್ನು ತೆರೆದಿದ್ದಕ್ಕಾಗಿ ನನಗೆ ಧನ್ಯವಾದಗಳು. ನಾನು ಈಗಾಗಲೇ ನಾಲ್ಕೈದು ಬಾರಿ ಚಲನಚಿತ್ರವನ್ನು ನೋಡಿದ ಮತ್ತು ನಿರ್ದಿಷ್ಟ ದೃಶ್ಯಗಳನ್ನು ವಿವರಿಸುವ  ಚಿಕ್ಕ ಹುಡುಗರನ್ನು ಭೇಟಿಯಾಗಿದ್ದೇನೆ. ಕೇರಳದ ಸ್ಟೋರಿ ಇನ್ನು ಮುಂದೆ ಕೇವಲ ಚಿತ್ರವಲ್ಲ, ಇದು ಒಂದು ಚಳುವಳಿಯಾಗಿ ಮಾರ್ಪಟ್ಟಿದೆ' ಎಂದು ಹೇಳಿದ್ದರು. 


 

Latest Videos
Follow Us:
Download App:
  • android
  • ios