ತೆಲುಗು ಚಿತ್ರರಂಗದ ಹೆಸರಾಂತ ನಿರ್ಮಾಪಕ ಪೋಕುರಿ ರಾಮರಾವ್‌ ಶುಕ್ರವಾರ ಸಂಜೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾದಿಂದ ವಿಧಿವಶರಾಗಿದ್ದಾರೆ.

65 ವರ್ಷದ ರಾಮರಾವ್‌ ಕೊರೋನಾ ಪಾಸಿಟಿವ್ ಎಂದು ತಿಳಿದ ತಕ್ಷಣವೇ ಹೈದ್ರಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಆರಂಭಿಸಿದ್ದರು. ಉಸಿರಾಟದ ತೊಂದರೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಯಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಈ ಹಿಂದೆ ರಾಮರಾವ್‌ ಅವರಿಗೆ ಹೃದಯಕ್ಕೆ ಸಂಬಂಧಿಸಿದಂತೆ ಆಪರೇಷನ್‌ ಮಾಡಲಾಗಿದ್ದು ಹೊರ ಪ್ರಪಂಚಕ್ಕೆ ಸಂಕರ್ಪವಿಲ್ಲದೆ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು.  ಕೊರೋನಾ ಹೇಗೆ ಬಂತು ಎಂಬುದು ಈಗಲೂ ಕುಟುಂಬಸ್ಥರಿಗೆ ಪ್ರಶ್ನೆಯಾಗೇ ಉಳಿದಿದೆ.  

ಹೈದರಾಬಾದ್‌ನ ಎರ್ರಗಡ್ಡ ಸ್ಮಶಾನ ವಾಟಿಕಾದಲ್ಲಿ ಕುಟುಂಬಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.  ರಣಂ,ಯಜ್ಞಂ, ಮಾ ಆಯನ್ ಬಂಗಾರಂ, ಪ್ರಜಾಸ್ವಾಯಂ ಸೇರಿದಂತೆ ಅನೇಕ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕುಟುಂಬಸ್ಥರು- ಆಪ್ತರನ್ನು ಅಗಲಿರುವ ಪೋಕುರಿ  ರಾಮರಾವ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.