ಪತ್ನಿಯನ್ನು ಕಳೆದುಕೊಂಡು 36 ತಿಂಗಳಲ್ಲಿ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಿರ್ಮಾಪಕ . ತನ್ನ ಮಗಳ ವಯಸ್ಸಿನ ಹುಡುಗಿಯನ್ನು  ಆಯ್ಕೆ ಮಾಡಿಕೊಂಡಿರುವುದಕ್ಕೆ ಸಾವಿರಾರು ಅನುಮಾನ ಹುಟ್ಟಿಕೊಂಡಿವೆ.....

ಟಾಲಿವುಡ್‌ ಚಿತ್ರರಂಗದ ಸೂಪರ್‌ ಹಿಟ್‌ ಸಿನಿಮಾ ಆರ್ಯ , ಬೊಮ್ಮರಿಲ್ಲು , ಬೃಂದಾವನ, ಫಿದಾ, ಮಿಸ್ಟರ್‌ ಪರ್ಫೇಕ್ಟ್‌ ಹೀಗೆ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೆಸರಾಂತ ನಿರ್ಮಾಪಕ ದಿಲ್‌ ರಾಜು 42ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮತ್ತೊಂದು ಮದುವೆಗೆ ಸಜ್ಜಾದ ನಿರ್ಮಾಪಕ ದಿಲ್‌ ರಾಜು!

ಪತ್ನಿಯನ್ನು ಕಳೆದುಕೊಂಡ ದಿಲ್:

2017ರಲ್ಲಿ ನಿರ್ಮಾಪಕ ದಿಲ್‌ ರಾಜು ಅವರ ಪತ್ನಿ ಅನಿತಾ ಹೃದಯಘಾತದಿಂದ ಮೃತಪಟ್ಟಿದ್ದರು. ಚಿಕ್ಕಯಸ್ಸಿನಲ್ಲಿ ದಿಲ್‌ ರಾಜು ಹಾಗೂ ಅನಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾರಣ ಅವರಿಗೂ ಹನ್ಷಿತಾ ರೆಡ್ಡಿ ಎಂಬ ಮಗಳೂ ಇದ್ದಾಳೆ. ತಾಯಿಯನ್ನು ಕಳೆದುಕೊಂಡು ಒಂಟಿಯಾದ ಹನ್ಷಿಕಾ ತಂದೆಗೆ ಮತ್ತೊಂದು ಮದುವೆಯಾಗಲೂ ಒತ್ತಾಯಿಸಿದ್ದಾರೆ. ಮಗಳ ಆಸೆಗೆ ನಿರಾಸೆ ಮಾಡಬಾರದೆಂದು ದಿಲ್‌ ರಾಜ್‌ ಪತ್ನಿಯನ್ನು ಕಳೆದುಕೊಂಡ 36 ತಿಂಗಳ ಬಳಿಕ ಮತ್ತೊಮ್ಮೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ . 

ಮಗಳ ವಯಸ್ಸಿನ ಪತ್ನಿ:

ದಿಲ್‌ ರಾಜು ಮದುವೆಯಾಗುತ್ತಾರೆಂಬ ಸುದ್ದಿ ಚಿತ್ರರಂಗದಲ್ಲಿ ಕೇಳಿ ಬರುತಲ್ಲೇ ಇತ್ತು ಆದರೆ ಯಾರಿಗೂ ಇದರ ಬಗ್ಗೆ ಮಾಹಿತಿ ನೀಡಿರಲಿಲ್ಲ. ಮಾಧ್ಯಮದವರು ಪ್ರಶ್ನೆ ಕೇಳಿದರು ಉತ್ತರಿಸದೇ ಸುಮ್ಮನಿರುತ್ತಿದ್ದರು. ಆದರೀಗ ಲಾಕ್‌ಡೌನ್‌ನಲ್ಲಿ ಸೈಲೆಂಟ್‌ ಆಗಿ ಸಿಂಪಲ್‌ ಮದುವೆಗೆ ಸೈ ಎಂದಿದ್ದಾರೆ.

ಹೌದು! ಆಪ್ತ ಸ್ನೇಹಿತು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿದೆ ಈ ಮದುವೆ. ಆದರೆ ದಿಲ್‌ ರಾಜು ಮದುವೆಯಾಗಿರುವ ಮಹಿಳೆಗೆ ಮೊದಲ ಪತ್ನಿಯ ಮಗಳಾದ ಹನ್ಷಿಕಾ ವಯಸ್ಸಂತೆ. 49 ವರ್ಷ ದಿಲ್‌ ರಾಜು ಮದುವೆಯಾಗಿರುವ ಮಹಿಳೆ ಹೆಸರು ತೇಜಸ್ವಿನಿ. ಮದುವೆಯಾಗುವ ಮುನ್ನ ವೈಘಾ ರೆಡ್ಡಿ ಎಂದು ಬದಲಾಯಿಸಿಕೊಂಡಿದ್ದಾರೆ. ಬ್ರಾಹ್ಮಣ ಕುಟುಂಬದ ತೇಜಸ್ವಿನಿ ವೃತ್ತಿಯಲ್ಲಿ ಗಗನ ಸಖಿಯಾಗಿ ಕೆಲಸ ಮಾಡಿದ್ದರು. ತೇಜಸ್ವಿನಿ ವಯಸ್ಸು 30 ವರ್ಷ ಹಾಗೂ ಹನ್ಷಿಕಾ ವಯಸ್ಸಿ 29 ವರ್ಷ.

ಹನ್ಷಿಕಾ ಮದುವೆ:

ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಹನ್ಷಿಕಾ ಲಂಡನ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಆ ನಂತರ ಭಾರತಕ್ಕೆ ಹಿಂತಿರುಗಿ ಬಹುರಾಷ್ಟ್ರಿಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. 2010ರಲ್ಲಿ ಅರ್ಚಿತ್‌ ರೆಡ್ಡಿಯನ್ನು ಪ್ರೀತಿಸುತ್ತಿದ್ದ ಹನ್ಷಿಕಾ ಪೋಷಕರನ್ನು ಒಪ್ಪಿಸಿ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಮದುವೆ ಮುನ್ನ ದಿಲ್ ಬರೆದ ಪೋಸ್ಟ್‌:

'ಪ್ರಪಂಚವೇ ನಿಂತು ಹೋಗುವ ಪರಿಸ್ಥಿರಿ ಎದುರಾಗಿದೆ, ಅನೇಕರು ವೃತ್ತಿಯಲ್ಲಿ ನಷ್ಟಗಳನ್ನು ಎದುರಿಸುತ್ತಿದ್ದಾರೆ . ನಾನು ಪರ್ಸನಲ್ ಲೈಫ್‌ನಲ್ಲೂ ನೆಮ್ಮದಿ ಇಲ್ಲದೆ ಜೀವನ ನಡೆಸುತ್ತಿರುವೆ. ಆದರೀಗ ಹೊಸ ಅಧ್ಯಾಯ ಶುರುವಾಗಲಿದೆ. ಎಲ್ಲವೂ ಅದರ ಸ್ಥಾನ ಪಡೆದುಕೊಂಡು ಜೀವನ ಉತ್ತಮವಾಗಲಿ ಎಂದು ಭಾವಿಸಿರುವೆ' ಎಂದು ಟ್ಟೀಟ್‌ ಮಾಡಿದರು.

ನೆಟ್ಟಿಗರಿಂದ ನೆಗೆಟಿವ್‌ ಕಾಮೆಂಟ್‌:

ಮದುವೆ ವಿಚಾರ ಹೊರ ಬರುತ್ತಿದ್ದಂತೆ ದಿಲ್‌ ರಾಜು ಆಪ್ತರು ಫೋಟೋ ಶೇರ್ ಮಾಡಿಕೊಳ್ಳಲು ಆರಂಭಿಸಿದರು. ಆದರೆ ದಿಲ್ ರಾಜು ಮಗಳ ಒತ್ತಾಯಕ್ಕೆ ಮದುವೆಯಾಗುತ್ತಿರುವೆ ಎಂದು ನೀಡಿದ ಹೇಳಿಕೆ ಸಾಕಷ್ಟು ಅನುಮಾನಗಳನ್ನು ಹುಟ್ಟಿಸಿತು.

'ಮಗಳು ಮದುವೆಯಾಗಿ ಅಂದ್ರೆ ಮಗಳ ವಯಸ್ಸಿನ ಹುಡುಗೀನೆ ಮದುವೆಯಾಗೋದಾ?', 'ಮಗಳೇ ಮದುವೆ ನಿಶ್ಚಯ ಮಾಡಿದ್ರೆ ಅವರ ವಯಸ್ಸಿನ ಹುಡುಗಿ ಆಯ್ಕೆ ಮಾಡುತ್ತಿರಲಿಲ್ಲ' ಎಂದು ಕಾಮೆಂಟ್‌ಗಳು ಹರಿದಾಡುತ್ತಿದೆ.