Asianet Suvarna News Asianet Suvarna News

ಮೀರಾ ಜಾಸ್ಮಿನ್ ಸಿನಿಮಾ ಅವಕಾಶ ಕಳೆದುಕೊಳ್ಳಲು ನಿರ್ಮಾಪಕ ಮಾಡಿದ ಕಮೆಂಟ್‌ ಕಾರಣವೇ?

ಸೌಂದರ್ಯ, ಅಭಿನಯ ಇದ್ದರೂ ಕೆಲವು ನಟಿಯರಿಗೆ ಅವಕಾಶಗಳು ಸಿಗುವುದಿಲ್ಲ. ಮೀರಾ ಜಾಸ್ಮಿನ್ ಒಳ್ಳೆಯ ಕ್ರೇಜ್ ಗಳಿಸಿದ ನಟಿಯಾದರೂ, ಅವರ ಬಗ್ಗೆ ನಿರ್ಮಾಪಕ ಆಡಿದ ಮಾತುಗಳಿಂದ ಅವಕಾಶಗಳನ್ನು ಕಳೆದುಕೊಂಡಿದ್ದಾರೆ ಎಂಬುದು ಚರ್ಚೆಯಾಗುತ್ತಿದೆ.

Telugu producer comments on actress Meera Jasmine's attitude and its impact on her career gow
Author
First Published Sep 15, 2024, 12:53 PM IST | Last Updated Sep 15, 2024, 12:53 PM IST

ಚಿತ್ರರಂಗದಲ್ಲಿ ಕೆಲವು ನಾಯಕಿಯರ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಸೌಂದರ್ಯ, ಅಭಿನಯ ಕೌಶಲ್ಯ ಇದ್ದರೂ ಸರಿಯಾದ ಅವಕಾಶಗಳು ಸಿಗುವುದಿಲ್ಲ. ಸತತವಾಗಿ ಫ್ಲಾಪ್ ಗಳನ್ನು ಎದುರಿಸಿದರೆ ಅಂತಹ ನಾಯಕಿಯರನ್ನು ನಿರ್ದೇಶಕರು, ನಿರ್ಮಾಪಕರು ಬದಿಗಿಡುತ್ತಾರೆ. ಆದರೆ ಕೆಲವು ನಾಯಕಿಯರು ಮಾತ್ರ ಬೇರೆ ಬೇರೆ ಕಾರಣಗಳಿಂದಾಗಿ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.

ಮೀರಾ ಜಾಸ್ಮಿನ್ ಒಳ್ಳೆಯ ಕ್ರೇಜ್ ಗಳಿಸಿದ ನಟಿ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನೆಮಾಗಳಲ್ಲಿ ಮೀರಾ ನಟಿಸಿ ಸೈ ಎನಿಸಿಕೊಂಡಾಕೆ. ತೆಲುಗಿನಲ್ಲಿ ಸೀಮಿತ ಸಿನಿಮಾಗಳಲ್ಲಿ ನಟಿಸಿರುವ ಅವರು ಅಮ್ಮಾಯಿ ಬಗುಂಡಿ ಸಿನಿಮಾ ಮೂಲಕ ಟಾಲಿವುಡ್‌ಗೆ ಪರಿಚಯವಾದರು. ಆದರೆ ಮೀರಾ ಜಾಸ್ಮಿನ್ ಮೊದಲು ಸಹಿ ಹಾಕಿದ ಸಿನಿಮಾ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಗುಡುಂಬಾ ಶಂಕರ್. ಆದರೆ ಮೊದಲು ಚಿರಂಜೀವಿ ಜೊತೆ ನಟಿಸಿದ್ದ ಅಮ್ಮಾಯಿ ಬಗುಂಡಿ ಸಿನಿಮಾ ಬಿಡುಗಡೆಯಾಯಿತು. ಆ ಸಿನಿಮಾ ಒಳ್ಳೆಯ ಹಿಟ್ ಆಯಿತು ಹೆಸರು ತಂದುಕೊಟ್ಟಿತು.

ಕೇರಳವೇ ಕಂಬನಿ ಸುರಿಸಿದ ದುರಂತ ಪ್ರೇಮ ಕತೆ! ಶ್ರುತಿ ಬಾಳಲ್ಲಿ ಆಘಾತ, ಅನಾಥ!

ಆದರೆ ಗುಡುಂಬಾ ಶಂಕರ್ ಹಾಡುಗಳು ಚೆನ್ನಾಗಿದ್ದರೂ ಸಿನಿಮಾ ನಿರಾಸೆ ಮೂಡಿಸಿತು. ಆದರೆ ಅಮ್ಮಾಯಿ ಬಗುಂಡಿ ಚಿತ್ರದ ನಿರ್ಮಾಪಕ ಪೈಡಿ ಬಾಬು. ಮೀರಾ ಜಾಸ್ಮಿನ್ ಬಗ್ಗೆ ಕೆಲವು  ಕಾಮೆಂಟ್‌ಗಳನ್ನು ಮಾಡಿದರು. ನಾನು ಸಿನಿಮಾ ನಿರ್ಮಾಣ ಮಾಡಲು ಯೋಚಿಸಿದಾಗ ಅಮ್ಮಾಯಿ ಬಗುಂಡಿ ಸಿನಿಮಾ ಓಕೆ ಆಯಿತು. ನಾಯಕಿ ಯಾರು ಅಂತ ಯೋಚಿಸುವಾಗ ಮೀರಾ ಜಾಸ್ಮಿನ್ ಬಗ್ಗೆ ತಿಳಿಯಿತು. ಪ್ರತಿಭೆ, ಸೌಂದರ್ಯ ಇರುವ ಹುಡುಗಿ ಮೀರಾ ಜಾಸ್ಮಿನ್. ನಾವು ತಕ್ಷಣ ಅವರಿಗೆ ಓಕೆ ಎಂದೆವು. 

ಆದರೆ ಅವರಲ್ಲಿ ಒಂದೇ ಒಂದು ಮೈನಸ್ ಇದೆ. ಅದು ಆಕೆ ಆಟಿಟ್ಯೂಡ್ ತೋರಿಸುವುದು. ಅದು ಅನೇಕರಿಗೆ ಇಷ್ಟವಾಗಲಿಲ್ಲ. ಅದಕ್ಕೇ ಗ್ಲಾಮರ್ ಇದ್ದರೂ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಅವಕಾಶಗಳು ಸಿಗಲಿಲ್ಲ. ಕೇವಲ ಮೂರು ಜನ ಸ್ಟಾರ್ ಹೀರೋಗಳ ಜೊತೆ ಮಾತ್ರ ಮೀರಾ ಜಾಸ್ಮಿನ್ ನಟಿಸಿದ್ದಾರೆ. ಪವನ್ ಕಲ್ಯಾಣ್, ಬಾಲಕೃಷ್ಣ, ರವಿತೇಜ. ಬಾಲಕೃಷ್ಣ ಜೊತೆ ಮಹಾರಾಧಿ ಸಿನಿಮಾದಲ್ಲಿ ನಟಿಸಿದ್ದಾರೆ. ಮತ್ತು ರವಿತೇಜ ಜೊತೆ ನಟಿಸಿದ್ದ ಭದ್ರ ಸಿನಿಮಾ ಮೀರಾ ಜಾಸ್ಮಿನ್ ಅವರ ವೃತ್ತಿಜೀವನದಲ್ಲಿ ಬಿಗ್ಗೆಸ್ಟ್ ಹಿಟ್ ಆಗಿತ್ತು. 

ಅವರು ಸ್ವಲ್ಪ ಅಹಂಕಾರಿ ಮತ್ತು ಸೆಟ್‌ಗಳಲ್ಲಿ ಆಟಿಟ್ಯೂಡ್ ತೋರಿಸುತ್ತಾರೆ ಎಂದು ಪೈಡಿ ಬಾಬು ಹೇಳಿದರು. ಅವರ ಈ ಹೇಳಿಕೆಗಳು  ಈಗ ಸಖತ್ ವೈರಲ್ ಆಗುತ್ತಿವೆ. ಇದುವೇ ಆಕೆ ಸಿನೆಮಾದಲ್ಲಿ ಅವಕಾಶ ಕಳೆದುಕೊಳ್ಳಲು ಕಾರಣವಾಯ್ತು ಎಂದು ಜನಮಾತನಾಡಿಕೊಳ್ಳುತ್ತಿದ್ದಾರೆ. ಈಗ ಮೀರಾ ಜಾಸ್ಮಿನ್ ಮತ್ತೆ ಟಾಲಿವುಡ್‌ಗೆ ರಿ ಎಂಟ್ರಿ ಕೊಡುತ್ತಿದ್ದಾರೆ. ಶ್ರೀ ವಿಷ್ಣು ಪ್ರಮುಖ ಪಾತ್ರದಲ್ಲಿರುವ ಸ್ವಾಗ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದಶಕಗಳ ಕಾಲ ಲಿವ್ಇನ್‌ ರಿಲೇಶನ್‌ಶಿಪ್‌ ನಲ್ಲಿ ಇದ್ದು ಮುರಿದುಬಿದ್ದ ನಟ-ನಟಿಯರ ಸಂಬಂಧ!

ಭಾರತದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾದ ಮೀರಾ ಜಾಸ್ಮಿನ್, ನಿರ್ದೇಶಕ ಹಸಿತ್ ಗೋಲಿ ಅವರ ಮುಂಬರುವ ಚಿತ್ರವಾದ ಸ್ವಾಗ್ ಮೂಲಕ ತೆಲುಗು ಚಿತ್ರರಂಗಕ್ಕೆ ಮರಳುತ್ತಿದ್ದು, ಮೀರಾ ಉತ್ಫಲಾ ದೇವಿ ಎಂಬ ಪಾತ್ರದಲ್ಲಿ  ಮಿಂಚಿದ್ದು, ರಾಜಮನೆತನದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ವೈಯಕ್ತಿಕ ಜೀವನದಲ್ಲಿನ ಏರಿಳಿತಗಳಿಂದ ಸಿನಿಮಾಗಳಿಂದ ಕೊಂಚ ಬಿಡುವು ಮಾಡಿಕೊಂಡಿದ್ದ ಮೀರಾ ಜಾಸ್ಮಿನ್ ಬಹಳ ದಿನಗಳ ನಂತರ ಮತ್ತೆ ಹಿರಿತೆರೆಗೆ ಮರಳುತ್ತಿರುವುದು ಅಭಿಮಾನಿಗಳು ಹಾಗೂ ಸಿನಿಮಾ ವಿಮರ್ಶಕರನ್ನು ಥ್ರಿಲ್ ಮೂಡಿಸಿದೆ.

Latest Videos
Follow Us:
Download App:
  • android
  • ios