ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿಗೆ  ಕಾರಣವೇನೆಂದು ನಿಖರವಾಗಿ ತಿಳಿದಿಲ್ಲವಾದರೂ ಅನೇಕರು ಅದನ್ನು ಡಿಪ್ರೆಷನ್ ಎಂದು ಪರಿಗಣಿಸಿದ್ದಾರೆ. ನಗು ಮುಖದ ಗೆಳಯ ಜೀವನದಲ್ಲಿ ಎದುರಿಸುತ್ತಿದ್ದ ನೋವಿನ ಬಗ್ಗೆ ಸೆಲೆಬ್ರಿಟಿಗಳು ಹಾಗೂ ಆಪ್ತರು ಮಾತನಾಡುತ್ತಿದ್ದಾರೆ. ಇವರ ಪೈಕಿ ಟಾಲಿವುಡ್‌ ನಟಿ ಪಾಯಲ್‌ ಕೂಡ ಡಿಪ್ರೆಶನ್‌ ಬಗ್ಗೆ ಮಾತನಾಡಿದ್ದಾರೆ.

ಪೇಪರ್ ಸುತ್ತಿಕೊಂಡ ಪಾಯಲ್ ನೋಡ್ರಪ್ಪಾ, ಏನಪ್ಪಾ ಇದು ಹೊಸ ಚಾಲೆಂಜಾ!

ಜೂನಿಯರ್‌ ಎನ್‌ಟಿಆರ್‌ಗೆ ಜೋಡಿಯಾಗಿ ಮಿಂಚಿದ ನಟಿ ಪಾಯಲ್‌ ಗೋಶಾಲ್‌ ಟ್ಟಿಟರ್‌ನಲ್ಲಿ ಬಹಿರಂಗವಾಗಿ ತಾನು ಡಿಪ್ರೆಶನ್‌ಗೆ ಒಳಗಾಗಿರುವುದರ ಬಗ್ಗೆ ಮಾತನಾಡಿದ್ದಾರೆ.

'ನಾನು 2015ರಿಂದ ಡಿಪ್ರೆಶನ್‌ನಿಂದ ಬಳಲುತ್ತಿರುವೆ.  ಆಗಾಗ ಮಾತ್ರೆ  ತೆಗೆದುಕೊಳ್ಳುವೆ ಕೆಲವೊಮ್ಮೆ ಕಡಿಮೆ ಮಾಡುವೆ ಇದರಿಂದ ಯಾವ ಪ್ರಯೋಜನವು ಆಗಿಲ್ಲ ಆದರೆ ನನಗೆ ಸಾವಿನ ಭಯವಿದೆ. ಕೆಲವೊಮ್ಮೆ ಪ್ಯಾನಿಕ್ ಆಗುತ್ತೇನೆ.  ಇನ್ನೇನು ನಾನು ಸತ್ತೆ ಹೋಗುವೆ ಎನ್ನುವಷ್ಟು ಭಯವಾಗುತ್ತದೆ.  ಸದ್ಯ ನನ್ನ ಎಲ್ಲಾ ತೊಂದರೆಗಳನ್ನು ಹಾಗೂ ನಾನು ಕೊಡುವ ಕಷ್ಟಗಳನ್ನು ನನ್ನ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಸಹಿಸಿಕೊಂಡು ಸಹಾಯ ಮಾಡುತ್ತಾರೆ' ಎಂದು ಟ್ಟೀಟ್‌ ಮಾಡಿದ್ದರು.

ಪಾಯಲ್ ಟ್ಟೀಟ್‌ ನೋಡಿ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಅರೇ ಪರದೆ ಮೇಲೆ ಇಷ್ಟೊಂದು ಸೂಪರ್‌ ಅಗಿ ಕಾಣುವ ನಟಿ ಜೀವನದಲ್ಲಿ ಇಷ್ಟೆಲ್ಲಾ ಅನುಭವಿಸುತ್ತಿದ್ದಾರೆ ಎಂದು ಅಭಿಮಾನಿಗಳು ಹಾಗೂ ನೆಟ್ಟಿಗರ ಅನುಕಂಪಕ್ಕೆ ಮನಸೋತು ಪಾಯಲ್ ಮತ್ತೊಂದು ಟ್ಟೀಟ್ ಮಾಡಿದ್ದಾರೆ.

 

'ದಯವಿಟ್ಟು ಯಾರು ತಪ್ಪು ತಿಳಿಯಬೇಡಿ. ನಾನು ಯಾವತ್ತೂ ಆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಾನು ನನ್ನನ್ನು ತುಂಬಾ ಇಷ್ಟ ಪಡುತೇನೆ ಇದನ್ನೇ ನನ್ನ ವೈದ್ಯರು ನನಗೆ ಹೇಳಿಕೊಟ್ಟಿರುವುದು. ಈ ಪ್ಯಾನಿಕ್‌ ಅಟ್ಯಾಕ್‌ ನನಗೆ ಪಾರಂಪರಿಕವಾಗಿ ಬರುತ್ತಿರುವುದು. ಈ ಹಿಂದೆ ನನ್ನ ತಾಯಿಗೂ ಇತ್ತು ಆ ನಂತರ ನನ್ನ ಅಕ್ಕನಿಗೆ ಈಗ ನನಗೆ ಇದೆ. ಇಂಥ ಸಮಯದಲ್ಲಿ ನಾನು ರೆಸ್ಟ್‌ ತೆಗೆದುಕೊಳ್ಳತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಊಸರವಳ್ಳಿ ಚಿತ್ರೀಕರಣದ ಸಮಯಗಳನ್ನು ಹಂಚಿಕೊಂಡಿದ್ದಾರೆ ಹಾಗೂ ನಟ ಜೂನಿಯರ್‌ ಎನ್‌ಟಿಆರ್‌ನನ್ನು ನನ್ನು ಹೊಗಳಿದ್ದಾರೆ. 'ನಾವು ಬ್ಯಾಂಕಾಕ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದೇವು ಆಗ ನನಗೆ ಡ್ರಸ್ ಬದಲಾಯಿಸುವುದಕ್ಕೆ ಜಾಗವಿರಲಿಲ್ಲ. ಆಗ ನನ್ನ ಟೀಂನವರು ರಸ್ತೆಯಲ್ಲಿ ಸಣ್ಣ ಟೆಂಟ್‌ ಮಾಡಿಕೊಟ್ಟರು ಆಗ ಅವರು ಬೇಸರ ಮಾಡಿಕೊಂಡದನ್ನು ನೋಡಲಾರೆ. ಅವರು ಹೆಣ್ಣು ಮಕ್ಕಳನ್ನು ಗೌರವಿಸುವ ರೀತಿ ನನಗೆ ತುಂಬಾ ಇಷ್ಟ' ಎಂದು ಹೇಳಿಕೊಂಡಿದ್ದಾರೆ.