Asianet Suvarna News Asianet Suvarna News

ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ನಟಿ ಯಶಿಕಾ ಆನಂದ್; ಸ್ನೇಹಿತೆ ಸ್ಥಳದಲೇ ಸಾವು!

ಮಹಾಬಲಿಪುರಂ ಬಳಿ ನಟಿ ಯಶಿಕಾ ಆನಂದ್ ಕಾರು ರಸ್ತೆ ಅಪಘಾತಕ್ಕೀಡಾಗಿದೆ. ಸ್ನೇಹಿತೆ ವಲ್ಲಿಚೆಟ್ಟು ಭವಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 
 

Telugu actress Yashika Aannand injured friend dies in car accident vcs
Author
Bangalore, First Published Jul 25, 2021, 3:26 PM IST
  • Facebook
  • Twitter
  • Whatsapp

ತೆಲುಗು ಬಿಗ್ ಬಾಸ್ ಸ್ಪರ್ಧಿ ಕಮ್ ನಟಿ ಯಶಿಕಾ ಆನಂದ್ ಮತ್ತು ಸ್ನೇಹಿತೆ ವೆಲ್ಲಿಚೆಟ್ಟು ತಮ್ಮ ಕಾರಿನಲ್ಲಿ ಮಹಾಲಬಲಿಪುರಂ ರಸ್ತೆ ಕಡೆ ಪ್ರಯಾಣ ಮಾಡುತ್ತಿದ್ದರು. ಅತಿ ವೇಗವಾಗಿ ಕಾರು ಚಲಾಯಿಸುತ್ತಿದ್ದ ಕಾರಣ ಅಪಘಾತವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಿರುತೆರೆ ನಟಿಗೆ ಅಪಘಾತ; 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಆರಂಭಕ್ಕೆ ವಿಘ್ನ!

ಆಕ್ಸಿಡೆಂಟ್‌ ಆಗಿದ್ದು ಹೇಗೆ?

ನಟಿ ಯಶಿಕಾ ಆನಂದ್ ಮತ್ತು ಭವಾನಿ ಜುಲೈ 25ರಂದು ಮುಂಜಾನೆ ಸುಮಾರು 1.30 ಅಥವಾ 2 ಗಂಟೆ ಸಮಯದಲ್ಲಿ ಮಹಾಬಲಿಪುರಂ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದರು. ಅತೀ ವೇಗವಾಗಿ ಕಾರು ಸಾಗುತ್ತಿದ್ದು ನಿಯಂತ್ರಣಕ್ಕೆ ಸಿಗದೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಎಗರಿ ಹಳ್ಳಕ್ಕೆ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.

Telugu actress Yashika Aannand injured friend dies in car accident vcs

ಪ್ರತ್ಯಕ್ಷದರ್ಶಿಗಳು ಕಾರಿನ ಬಳಿ ಹೋಗುವಷ್ಟರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಆದರೆ ವರದಿ ಪ್ರಕಾರ ವಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವೆಲ್ಲಿಚೆಟ್ಟಿ ಭವಾನಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೆಂಗಾಲ್‌ಪೆಟೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಕೆಲವು ಮೂಲಗಳು ಹೇಳುವ ಪ್ರಕಾರ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಹಾಗೂ ವೈದ್ಯರಿನ್ನೂ ವರದಿ ನೀಡಿಲ್ಲ.

Follow Us:
Download App:
  • android
  • ios