ಕನ್ನಡದ ಅನುಭವಿ ನಟಿ ಪವಿತ್ರಾ ಲೋಕೇಶ್‌ ಹಾಗೂ ತೆಲುಗು ನಟ ನರೇಶ್‌ ಬಾಬು ಮದುವೆಯಾಗಿರುವ ಸುದ್ದಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗಿತ್ತಿದೆ. ಇದರ ನಡುವೆ, ದಿನಕಳೆದ ಹಾಗೆ ಆರೋಪ ಪ್ರತ್ಯಾರೋಪಗಳ ನಡುವೆ ಈ ವಿಚಾರ ಇನ್ನಷ್ಟು ದೊಡ್ಡದಾಗುವ ಲಕ್ಷಣಗಳು ಕಂಡಿವೆ. ಪವಿತ್ರಾ ಲೋಕೇಶ್ ಜೊತೆ ಮದುವೆ, 3ನೇ ಪತ್ನಿ ರಮ್ಯಾ ರಘುಪತಿ ಬಗ್ಗೆ ಈಗ ಸ್ವತಃ ನರೇಶ್‌ ಬಾಬು ಮಾತನಾಡಿದ್ದಾರೆ. 

ಬೆಂಗಳೂರು (ಜೂನ್ 30): ಕನ್ನಡದ ಜನಪ್ರಿಯ ಪೋಷಕ ನಟಿ ಪವಿತ್ರಾ ಲೋಕೇಶ್ (Pavitra Lokesh) ಅವರನ್ನು ಮದುವೆಯಾಗಿರುವ ಬಗ್ಗೆ ಹಾಗೂ ಮೂರನೇ ಪತ್ನಿ ರಮ್ಯಾ ರಘುಪತಿ (Ramya raghupathi) ಅವರ ಕುರಿತಾಗಿ ಈಗ ಸ್ವತಃ ತೆಲುಗು ನಟ 64 ವರ್ಷದ ನರೇಶ್‌ ಬಾಬು (VK Naresh Babu) ಮಾತನಾಡಿದ್ದು, 'ಪವಿತ್ರಾ ಲೋಕೇಶ್‌ ನನ್ನ ಸ್ನೇಹಿತೆ. ರಮ್ಯಾ ರಘುಪತಿ ಮಾನಸಿಕವಾಗಿ ಸರಿ ಇಲ್ಲ' ಎಂದು ಆರೋಪ ಮಾಡಿದ್ದಾರೆ.

'ಪವಿತ್ರಾ ಲೋಕೇಶ್ ಜೊತೆ ನಾಲ್ಕು ವರ್ಷದ ಹಿಂದೆ ನಟಿದ್ದೇನೆ. ಆದರೆ, ರಮ್ಯಾ ರಘುಪತಿಯನ್ನ ಹತ್ತು ವರ್ಷದ ಹಿಂದೆಯೇ ಮದುವೆ ಆಗಿದ್ದೇವೆ. ನಾನು ನನ್ನ ವಯಕ್ತಿಕ ವಿಚಾರವಾಗಿ ಈಗ ಮಾತನಾಡಲು ಬಂದಿದ್ದೇನೆ. ರಮ್ಯಾ ರಘುಪತಿ ನನ್ನ ಕುರಿತಾಗಿ ಮಾತನಾಡಿರುವ ವಿಚಾರ ಇಡೀ ಹೈದರಾಬಾದ್‌ನಲ್ಲಿ ಸುದ್ದಿಯಾಗಿದೆ. ಆಕೆ ತುಂಬಾ ಜನರಿಗೆ ಮೋಸ ಮಾಡಿದ್ದಾರೆ. ನಮ್ಮ ಮನೆ ಮೇಲೆ ಅವರ ಜನರು ಅಟ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ' ಎಂದು ತೆಲುಗಿನ ಖ್ಯಾತ ನಟ ಕೃಷ್ಣ ಹಾಗೂ ವಿಜಯ ನಿರ್ಮಲ (Vijaya Nirmala) ಅವರ ಪುತ್ರ ನರೇಶ್‌ ಬಾಬು ಹೇಳಿದ್ದಾರೆ.

ವಿಜಯ ನಿರ್ಮಲ ಅವರ ಮೊದಲ ಪತಿಯ ಮಗ ನರೇಶ್‌ ಬಾಬು. ಮಹೇಶ್‌ ಬಾಬು (Mahesh Babu) ಅವರ ತಂದೆಯಾಗಿರುವ ಕೃಷ್ಣ (Krishna) ಅವರ 2ನೇ ಪತ್ನಿ ವಿಜಯ ನಿರ್ಮಲ ಆಗಿದ್ದಾರೆ. "ನಾನು ಈಗಾಗಲೇ ರಮ್ಯಾ ರಘುಪತಿ ಬಗ್ಗೆ ಕಂಪ್ಲೇಟ್ ಕೊಟ್ಟಿದ್ದೇನೆ. ಇದುವರೆಗೂ ಎಲ್ಲೂ ಯಾವ ಹಣವನ್ನು ಸೆಟಲ್ ಮಾಡಿಲ್ಲ. ರಮ್ಯಾ ಮೇಲೆ ಎಫ್‌ಐಆರ್‌ ಆಗಿಲ್ಲ. ಇದು ಫ್ಯಾಮಿಲಿ ವಿಚಾರ ಎನ್ನುವ ಕಾರಣಕ್ಕಾಗಿ ಅವರ ಮೇಲೆ ಎಫ್‌ಐಆರ್‌ ಹಾಕಿರಲಿಲ್ಲ' ಎಂದು ನರೇಶ್‌ ಹೇಳಿದ್ದಾರೆ.

ಆಕೆ ಮಾನಸಿಕವಾಗಿ ಸರಿ ಇಲ್ಲ: ಇನ್ನು ರಮ್ಯಾ ರಘುಪತಿ ಅವರ ಆರೋಗ್ಯದ ಬಗ್ಗೆ ದೊಡ್ಡ ಕಾಮೆಂಟ್‌ ಮಾಡಿರುವ ನರೇಶ್‌ ಬಾಬು, ಆಕೆ ಮಾನಸಿಕವಾಗಿ ಸರಿ ಇಲ್ಲ. ಅದಕ್ಕಾಗಿಯೇ ನಾನು ಈಗ ಡೈವರ್ಸ್ ಕೊಡೋ ನಿರ್ಧಾರ ಮಾಡಿದ್ದೇನೆ' ಎಂದು ಹೇಳಿದ್ದಾರೆ.

ಪವಿತ್ರಾ ಡಿಪ್ರೆಶನ್‌ಗೆ ಹೋಗಿದ್ದಾರೆ: ನಿಜವಾಗಿಯೂ ಹೇಳುತ್ತೇನೆ ಪವಿತ್ರಾ ಲೋಕೇಶ್‌ ನನ್ನ ಸ್ನೇಹಿತೆ. ರಮ್ಯಾ ರಘುಪತಿ ಆಡಿರುವ ಕೆಟ್ಟ ಮಾತುಗಳಿಂದ ಈಗ ಡಿಪ್ರೆಶನ್‌ಗೆ ಹೋಗಿದ್ದಾರೆ. ಮೊದಲಿನಿಂದಲೂ ಪವಿತ್ರಾ ನನ್ನ ಬೆಸ್ಟ್‌ ಫ್ರೆಂಡ್‌. ನಾನು ಮನುಷ್ಯ ನನಗೂ ಭಾವೆನೆಗಳಿವೆ. ನನ್ನ ಫೋನ್ ಅನ್ನ ಟ್ರ್ಯಾಪ್ ಮಾಡಿದ್ದರು ಎಂದು ನರೇಶ್‌ ಹೇಳಿದ್ದಾರೆ. ಮದುವೆಯಾಗಲಿ, ಡೈವರ್ಸ್‌ ಆಗಲಿ ಸೆಲಬ್ರೇಷನ್‌ ಅಲ್ಲ. ನಾನು 2ನೇ ಮದುವೆಯಾಗಿದ್ದ ಹುಡುಗಿ ನನ್ನ ಬಾಲ್ಯದ ಗೆಳತಿ ಲವ್‌ ಮಾಡಿ ಮದುವೆ ಮಾಡಿಕೊಂಡೆವು, ರಮ್ಯಾ ರಘುಪತಿಯನ್ನು ಮದುವೆಯಾಗಿ ತಪ್ಪು ಮಾಡಿದೆ ಎಂದು ಹೇಳಿದ್ದಾರೆ.

ನರೇಶ್ ಬಾಬು, ಪವಿತ್ರಾ ಲೋಕೇಶ್ ಹೀಗೆ ಮಾಡ್ತಾರೆ ಅಂತ ಗೊತ್ತಿರ್ಲಿಲ್ಲ!

ಪವಿತ್ರಾ ಮೇಲೆ ಸುಳ್ಳು ಆರೋಪ: ರಮ್ಯಾ ರಘುಪತಿ ಮಾತನಾಡುವ ವೇಳೆ, ಪವಿತ್ರಾ ಲೋಕೇಶ್ ರಮ್ಯಾ ಅವರ ಸೀರೆ ಚಿನ್ನವನ್ನ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ನಾನು ರಮ್ಯಾ ರಘುಪತಿ ಅವರನ್ನ ಮದುವೆ ಆಗುವಾಗ ಯಾವುದೇ ರೀತಿ ಡೌರಿಯನ್ನು ಪಡೆದಿಲ್ಲ ಅದೆಲ್ಲವೂ ಸುಳ್ಳು. ಹಾಗಿದ್ದ ಮೇಲೆ, ಪವಿತ್ರಾ ಲೋಕೇಶ್ ಎಲ್ಲವನ್ನೂ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ.

Cyber Complaint: ಮನೆಯಲ್ಲಿ ಪವಿತ್ರಾ ಲೋಕೇಶ್ ಇಲ್ಲದ ಕಾರಣ ಪೊಲೀಸ್ ವಾಪಸ್

ನಾನು ಪವಿತ್ರ 6 ಸಿನಿಮಾದಲ್ಲಿ ನಟಿಸಿದ್ದೇವೆ, ಅವರ ಜೊತೆ ಹಲವು ಭಾರಿ ನನ್ನ ಇಡೀ ಕುಟುಂಬ ಸೇರಿ ಕಾರ್ಯಕ್ರಮ ಮಾಡಿದ್ದೇವೆ. ಆದರೆ, ಆಗ ರಮ್ಯಾ ರಘುಪತಿ ಬರುತ್ತಿರಲಿಲ್ಲ. ಅವರು ನನ್ನ ಸ್ನೇಹಿತೆ. ಅವರು ದೀಪಾವಳಿ ಹಬ್ಬ ಆಚರಿಸಿದ್ದು ಹೌದು ಇಡೀ ಫ್ಯಾಮಿಲಿ ಸೇರಿ ದೀಪಾವಳಿ ಆಚರಿಸಿದ್ದೇವೆ. ನಾನು ಡಿವೋರ್ಸ್ ಕೊಡ್ತಿರೋದನ್ನ ಪವಿತ್ರಾ ಲೋಕೇಶ್ ಗೆ ಕನೆಕ್ಟ್ ಮಾಡಬೇಡಿ. ಇದು ನನ್ನ ನಿರ್ಧಾರ. ಆದ್ರೆ ಪವಿತ್ರಾ ಲೋಕೇಶ್ ಡಿವೋರ್ಸ್ ಬಗ್ಗೆ ನನಗೆ ಗೊತ್ತಿಲ್ಲ. ನನ್ನನ್ನ ಯಾರೂ ಬ್ಲ್ಯಾಕ್ ಮೇಲ್ ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ.