ನಟ ಅಲ್ಲು ಅರ್ಜುನ್‌ಗೆ ಜಾಮೀನು ಮಂಜೂರು,ಪುಷ್ಪಾ2 ಹೀರೋಗೆ ರಿಲೀಫ್ ಕೊಟ್ಟ ಹೈಕೋರ್ಟ್!

ಪುಷ್ಪಾ 2 ಚಿತ್ರ ಪ್ರದರ್ಶನದ ವೇಳೆ ನೂಕು ನುಗ್ಗಲಿನಿಂದ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟ ಅಲ್ಲು ಅರ್ಜುನ್‌ಗೆ ಹೈಕೋರ್ಟ್ ರಿಲೀಫ್ ನೀಡಿದೆ. ಅಲ್ಲು ಅರ್ಜುನ್‌ಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

Telangana high court grant Interim Bail to pushpa 2 actor Allu arjun ckm

ಹೈದರಾಬಾದ್(ಡಿ.13) ಅಲ್ಲು ಅರ್ಜುನ್ ಅಭಿನಯದ ಪುಷ್ಪಾ2 ಚಿತ್ರ ದೇಶಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.ಆದರೆ ನಾಯಕ ನಟನ ತಲೆನೋವು ಹೆಚ್ಚಾಗಿದೆ. ಮಹಿಳಾ ಅಭಿಮಾನಿ ಸಾವು ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಅಲ್ಲು ಅರ್ಜುನ್‌ಗೆ ನಾಂಪಲ್ಲಿ ಸೆಷನ್ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ ಮೆಟ್ಟಿಲೇರಿದ್ದ ಅಲ್ಲು ಅರ್ಜುನ್‌ಗೆ ಕೋರ್ಟ್ ರಿಲೀಫ್ ನೀಡಿದೆ. ಅಲ್ಲು ಅರ್ಜುನ್‌ಗೆ ಹೈಕೋರ್ಟ್ ಜಾಮೀನು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 

ತೆಲಂಗಾಣ ಹೈಕೋರ್ಟ್ ಇದೀಗ ಅಲ್ಲು ಅರ್ಜುುನ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಚಿತ್ರಪ್ರದರ್ಶನದ ವೇಳೆ ನಡೆದ ನೂಕು ನುಗ್ಗಲು ಪ್ರಕರಣದಲ್ಲಿ ಮಹಿಳಾ ಅಭಿಮಾನಿಯೊಬ್ಬರು ಮೃತಪಟ್ಟ ಘಟನೆಯಿಂದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಇಂದು ಪೊಲೀಸರು ಅಲ್ಲು ಅರ್ಜುನ್ ಬಂಧಿಸಿದ್ದರು.

ಅಲ್ಲು ಅರ್ಜುನ್‌ಗೆ 14 ದಿನ ನ್ಯಾಯಾಂಗ ಬಂಧನ, ನಟನ ಮೇಲೆ ಯಾವೆಲ್ಲಾ ಕೇಸುಗಳಿವೆ?

ಬಂಧನದ ವೇಳೆ ಹೈಡ್ರಾಮ ನಡೆದಿತ್ತು. ಅಲ್ಲು ಅರ್ಜುನ್‌ಗೆ ಪೊಲೀಸರು ಸಮಯವೇ ನೀಡಲಿಲ್ಲ. ನೇರವಾಗಿ ಮನೆಯ ಒಳಗೆ ನುಗ್ಗಿ ಅಲ್ಲು ಅರ್ಜುನ್ ಬಂಧಿಸಲಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಈ ಕುರಿತು ಸ್ವತ ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿದ್ದರು. ಘಟನೆ ಸಂಬಂಧ ಪೊಲೀಸರಿಗೆ ಬಂಧಿಸುವ ಅಧಿಕಾರವಿದೆ. ಕಾನೂನು ಪ್ರಕಾರ ಪೊಲೀಸರು ಬಂಧಿಸಲಿ. ಆದರೆ ಬೆಡ್ ರೂಂ ತನಕ ಬಂದು ಬಟ್ಟೆ ಬದಲಿಸಲು ಅವಕಾಶ ನೀಡದೆ ಕರೆದೊಯ್ದಿದ್ದಾರೆ ಎಂದು ಅಲ್ಲು ಅರ್ಜುನ್ ಬೇಸರ ವ್ಯಕ್ತಪಡಿಸಿದ್ದರು. 

ಏನಿದು ಘಟನೆ?
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ 2 ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಡಿಸೆಂಬರ್ 4 ರಂದು ಚಿತ್ರದ ಪ್ರಿಮಿಯರ್ ಶೋ ಏರ್ಪಡಿಸಲಾಗಿತ್ತು. ಈ ವೇಳೆ ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್‌ ರಸ್ತೆಯಲ್ಲಿರುವ ಸಂಧ್ಯಾ ಥೀಯೆರ್‌ನಲ್ಲಿ ಪುಷ್ಪಾ2 ಚಿತ್ರ ನೋಡಲು ಭಾರಿ ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಸರಿಯಾದ ವ್ಯವಸ್ಥೆ, ಭದ್ರತೆಗಳು ಇಲ್ಲದ ಕಾರಣ ನೂಗು ನುಗ್ಗಲು ಸಂಭವಿಸಿತ್ತು. ಭಾರಿ ಕಾಲ್ತುಳಿತದಲ್ಲಿ ಹಲರು ಗಾಯಗೊಂಡಿದ್ದರು. ಈ ಕಾಲ್ತುಳಿತದಲ್ಲಿ ಚಿತ್ರ ನೋಡಲು ಕುಟುಂಬ ಸಮೇತ ಆಗಮಿಸಿದ್ದ ಮಹಿಳಾ ಅಭಿಮಾನಿ ರೇವತಿ ಗಂಭೀರವಾಗಿ ಗಾಯಗೊಂಡಿದ್ದರು.

ರೇವತಿ ತನ್ನ ಪತಿ ಹಾಗೂ ಪುತ್ರನ ಜೊತೆ ಸಂಧ್ಯಾ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಆದರೆ ಕಾಲ್ತುಳಿತದಲ್ಲಿ ರೇವತಿ ಮೃತಪಟ್ಟರೆ, ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯನ್ನು ಹೈದರಾಬಾದ್ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಆದರೆ ಚಿತ್ರಮಾಲೀಕರ ವಿರುದ್ದ, ಘಟನೆ ವಿರುದ್ದ ದೂರು ದಾಖಲಿಸಲು ಯಾರು ಮುಂದೆ ಬಂದಿರಲಿಲ್ಲ. ಹೀಗಾಗಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದರು. ಈ ಘಟನೆ ಸಂಬಂಧ ಇಂದು ಪೊಲೀಸರು ಅಲ್ಲು ಅರ್ಜುನ್ ಮನೆಗೆ ಆಗಮಿಸಿ ಬಂಧಿಸಿದ್ದಾರೆ. ವಿಚಾರಣೆಗಾಗಿ ಅಲ್ಲು ಅರ್ಜುನ್ ಬಂಧಿಸಿ ನಾಂಪಲ್ಲಿ ಸೆಷನ್ ಕೋರ್ಟ್‌ಗೆ ಹಾಜರುಪಡಿಸಿದ್ದರು.

ನಾಂಪಲಿ ಕೋರ್ಟ್, ಅಲ್ಲು ಅರ್ಜುನ್‌ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಅಲ್ಲು ಅರ್ಜುನ್ ಪರ ವಕೀರಲು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್, ಅಲ್ಲು ಅರ್ಜುನ್‌ಗೆ ಜಾಮೀನು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 

ರೇವತಿ ಕುಟುಂಬಕ್ಕೆ ಪರಿಹಾರ ನೀಡಿದ್ದ ಅಲ್ಲು ಅರ್ಜುನ್
ಕಾಲ್ತುಳಿತದಲ್ಲಿ ಅಭಿಮಾನಿ ರೇವತಿ ಮೃತಪಟ್ಟ ಸುದ್ದಿ ಕೇಳಿ ನಟ ಅಲ್ಲು ಅರ್ಜುನ್ ಆಘಾತಗೊಂಡಿದ್ದರು. ಘಟನೆಗೆ ಬೇಸರ ವ್ಯಕ್ತಪಡಿಸಿದ್ದ ಅಲ್ಲು ಅರ್ಜುನ್ ಅಭಿಮಾನಿಗಳು ಶಾಂತರೀತಿಯಲ್ಲಿ ಚಿತ್ರ ವೀಕ್ಷಿಸಲು ಮನವಿ ಮಾಡಿದ್ದರು. ಇದೇ ವೇಳೆ ರೇವತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು. 
 

Latest Videos
Follow Us:
Download App:
  • android
  • ios