ತಮಿಳು ಸ್ಟಾರ್ಗಳ ವಿರುದ್ಧ ಸಿಡಿದೆದ್ದ ಕಾಲಿವುಡ್: ದೌಲತ್ತಿನ ಹೀರೋಗಳಿಗೆ ವಾರ್ನಿಂಗ್!
‘ಧಿಮಾಕು’, ‘ದೌಲತ್ತು’ ತೋರಿಸಿದವರ ಬೆನ್ನಿಗೆ ಬಿದ್ದ ‘ಬೈಕಾಟ್’ ಭೂತ..! ತಮಿಳು ಸಿನಿಮಾ ಅಂದ್ರೆ ನಮಗೆ ನೆನಪಾಗೋದು ಸೂಪರ್ ಸ್ಟಾರ್ ರಜನಿಕಾಂತ್. ಕಮಲ್ ಹಾಸನ್. ಟೈಗರ್ ಹುಕುಂ ಅನ್ನೋ ಡೈಲಾಗ್, ಸ್ಟೈಲ್ ಬರೋದು ಸಿನಿಮಾದಲ್ಲಿ ಮಾತ್ರ. ಉಳಲಿದಂತೆ ಅಹಂ ಇಲ್ಲ.

‘ಧಿಮಾಕು’, ‘ದೌಲತ್ತು’ ತೋರಿಸಿದವರ ಬೆನ್ನಿಗೆ ಬಿದ್ದ ‘ಬೈಕಾಟ್’ ಭೂತ..! ತಮಿಳು ಸಿನಿಮಾ ಅಂದ್ರೆ ನಮಗೆ ನೆನಪಾಗೋದು ಸೂಪರ್ ಸ್ಟಾರ್ ರಜನಿಕಾಂತ್. ಕಮಲ್ ಹಾಸನ್. ಟೈಗರ್ ಹುಕುಂ ಅನ್ನೋ ಡೈಲಾಗ್, ಸ್ಟೈಲ್ ಬರೋದು ಸಿನಿಮಾದಲ್ಲಿ ಮಾತ್ರ. ಉಳಲಿದಂತೆ ಅಹಂ ಇಲ್ಲ. ದರ್ಪವೂ ಇಲ್ಲ. ಡೌನ್ ಟು ಅರ್ಥ್. 50 ವರ್ಷಕ್ಕಿಂತ ಹೆಚ್ಚು ಸೀನಿಯರ್ ಆದ್ರೂ.. ಕೋಟಿ ಕೋಟಿ ಹುಚ್ಚು ಫ್ಯಾನ್ಸ್ ಇದ್ರೂ.. ಆದರೆ, ತಮಿಳಿನಲ್ಲಿ ಇತ್ತೀಚೆಗೆ ಕೆಲವು ಸ್ಟಾರ್ಗಳು ದೌಲತ್ತು ತೋರಿಸೋಕೆ ಶುರು ಮಾಡಿದ್ದಾರಂತೆ. ಇದನ್ನ ಸಹಿಸೋದೇ ಇಲ್ಲ ಅಂತಿರೋ ತಮಿಳು ಫಿಲ್ಮ್ ಪ್ರೊಡ್ಯೂಸರ್ಸ್, ರೆಡ್ ಕಾರ್ಡ್ ಅಸ್ತ್ರ ಪ್ರಯೋಗಿಸಿದ್ದಾರೆ. ತಮಿಳು ನಟ ಧನುಷ್.
ರಾಷ್ಟ್ರ ಪ್ರಶಸ್ತಿಗಳನ್ನ ಬಾಚಿಕೊಂಡಿರೋ ಹೀರೋ. ಒಂದು ಕಾಲಕ್ಕೆ ರಜನಿಕಾಂತ್ ಅಳಿಯನೂ ಆಗಿದ್ದ ಧನುಷ್, ನಿರ್ಮಾಕರ ಮೇಲೆ ದೌಲತ್ತು ತೋರಿಸ್ತಿದ್ದಾರಂತೆ. ಇನ್ನು ವಿಶಾಲ್ ಕೂಡಾ ಅಷ್ಟೆ. ಸಖತ್ ಸ್ಟೈಲಿಷ್ ಸಿನಿಮಾ ಮಾಡಿರೋ ವಿಶಾಲ್, ಸ್ಟೇಜು ಹತ್ತಿದ್ರೆ ಅಷ್ಟೇ ಸಖತ್ತಾಗಿ ಭಾಷಣಾನೂ ಮಾಡ್ತಾರೆ. ಆದರೆ, ನಿರ್ಮಾಪಕರು ಅಂದ್ರೆ ಡೋಂಟ್ ಕೇರ್ ಅಂತಾರಂತೆ. ಇವರಷ್ಟೇ ಅಲ್ಲ, ನಟ ಸಿಂಬು ಕೂಡಾ ಅಷ್ಟೆ, ನಿರ್ಮಾಕರಿಗೆ ಗೌರವ ಕೊಡೋದಿಲ್ವಂತೆ. ಇವರೆಲ್ಲರ ವಿರುದ್ಧ ತಮಿಳು ಸಿನಿಮಾ ನಿರ್ಮಾಪಕರ ಸಂಘವು ಸಭೆ ನಡೆಸಿ, ಸಿಡಿದೆದ್ದು ನಿಂತಿದೆ. ಧನುಶ್, ವಿಶಾಲ್, ಸಿಂಬು ಸೇರಿದಂತೆ ಕೆಲವು ನಟ, ನಿರ್ದೇಶಕರಿಗೆ ನೊಟೀಸ್ ಕೊಟ್ಟು ಬಹಿಷ್ಕಾರದ ಎಚ್ಚರಿಕೆ ಕೊಟ್ಟಿದೆ.
ಬಿಕಿನಿ ಬಿಟ್ಟು ಹಳದಿ ಸೀರೆಯಲ್ಲಿ ಪೋಸ್ ನೀಡಿದ ಸೋನು ಗೌಡ: ನಿನ್ನ ಸೊಂಟ ಬಾರಿ ಡೇಂಜರೆಂದ ಫ್ಯಾನ್ಸ್!
ವಿಶಾಲ್ ಅವರು ಒಂದ್ಸಲ ನಿರ್ಮಾಪಕರ ಸಂಘದ ಅಧ್ಯಕ್ಷರೂ ಆಗಿದ್ದವರು. ಸಂಘದ ಹಣವನ್ನು ಮಿಸ್ ಯೂಸ್ ಮಾಡಿಕೊಂಡಿರೋ ಆರೋಪವನ್ನೂ ಹೊತ್ಕೊಂಡಿದ್ದಾರೆ. ನಟ ಸಿಂಬು ‘ಅನ್ಬನಾವನ್, ಅದಂಗದಾವನ್, ಅಸರಾದವನ್’ ಸಿನಿಮಾಕ್ಕೆ ಸಂಬಂಧಿಸಿದಂತೆ ನಿರ್ಮಾಕರ ಜೊತೆ ಮಾಡಿಕೊಂಡಿದ್ದ ಅಗ್ರಿಮೆಂಟ್ನ್ನ ಫಾಲೋ ಮಾಡ್ತಿಲ್ವಂತೆ. ಹಾಗಂತ ಆ ಸಿನಿಮಾ ನಿರ್ಮಾಪಕರೇ ಕಂಪ್ಲೇಂಟ್ ಕೊಟ್ಟಿದ್ದಾರೆ. ಇನ್ನು ನಟ ಧನುಶ್ ಬಗ್ಗೆ ಡಬಲ್ ಟಾಕ್ ಇದೆ.
ಧನುಷ್ ಸಿಂಪಲ್ ಅನ್ನೋವ್ರು ಒಂದು ಕಡೆ ಇದ್ರೆ, ಇನ್ನೊಂದ್ ಕಡೆ ಧನುಷ್ಗೆ ಯಶಸ್ಸಿನ ಪಿತ್ಥ ನೆತ್ತಿಗೇರಿದೆ ಅನ್ನೋ ನಿರ್ಮಾಪಕರು ಇನ್ನೊಂದು ಕಡೆ. ಇವರೆಲ್ಲರಿಗೂ ನೋಟಿಸ್ ಕೊಟ್ಟಿರೋ ನಿರ್ಮಾಪಕರ ಸಂಘ, ವರ್ತನೆ ಸರಿ ಪಡಿಸಿಕೊಳ್ಳದೇ ಹೋದ್ರೆ, ಹುಷಾರ್ ಎಂದು ವಾರ್ನಿಂಗ್ ಕೊಟ್ಟಿದೆ. ರಜನಿಕಾಂತ್ ಅವರ ಕುಟುಂಬದಿಂದ ದೂರವಾದ ಬಳಿಕವೇ ಈ ರೀತಿಯ ಕಂಪ್ಲೇಂಟ್ ಜಾಸ್ತಿ ಆಗಿದೆ. ಧನುಷ್ ಅವರ ವರ್ತನೆಯೂ ಬದಲಾಗಿದೆ ಅನ್ನೋ ಮಾತೂ ಇದೆ. ಹಾಗೆ ನೋಡ್ಕೊಂಡ್ರೆ, ಇವರಿಗೆ ಅದೇ ತಮಿಳು ಚಿತ್ರರಂಗದ ರಜನಿಕಾಂತ್ ಮಾಡೆಲ್ ಆಗ್ಬೇಕಿತ್ತು.
ಶರ್ಟ್ ಬಟನ್ ಬಿಚ್ಚಿ ಬೋಲ್ಡ್ ಪೋಸ್ ಕೊಟ್ಟ ಅನಸೂಯಾ: ಏನು ಕಾಣಿಸ್ತಿಲ್ಲ ಎಂದ ಫ್ಯಾನ್ಸ್!
ಹೊಸ ಡೈರೆಕ್ಟರ್ಸ್ ಜೊತೆಯಲ್ಲೂ ತಾನೊಬ್ಬ ನಟ ಮಾತ್ರ, ನಿರ್ದೇಶಕರು ಹೇಳಿದಂತೆ ನಟಿಸುತ್ತೇನೆ ಅನ್ನೋ ಮೆಚ್ಯುರಿಟಿಯನ್ನ ರಜನಿಕಾಂತ್ ಅವರನ್ನ ನೋಡಿ ಕಲಿಬೇಕಿತ್ತು. ಅವರಷ್ಟೇ ಯಾಕೆ, ನಮ್ಮ ಕನ್ನಡಕ್ಕೆ ಬಂದ್ರೆ ಶಿವಣ್ಣ ಅವರನ್ನ ರೋಲ್ ಮಾಡೆಲ್ ಅನ್ನಬಹುದು. ಶಿವಣ್ಣ ಅವರನ್ನ ನೋಡಿ ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟರು ಅವರಂತೆಯೇ ನಿರ್ದೇಶಕರ ಜೊತೆ ನಡೆದುಕೊಳ್ಳೋದು ಕಲಿತಿದ್ದಾರೆ. ಶಿವಣ್ಣಂಗೆ ರಾಜ್ ಅವ್ರೇ ರೋಲ್ ಮಾಡೆಲ್. ರಜನಿಕಾಂತ್ ಅವರಿಗೂ ಕೂಡಾ, ರಾಜಣ್ಣನ ಸಿಂಪ್ಲಿಸಿಟಿಯೇ ಮಾದರಿ. ಇವರನ್ನೆಲ್ಲ ನೋಡಿ ಕಲಿಯೋದು ಬಹಳಷ್ಟಿದೆ. ನಿರ್ಮಾಪಕರು ವರ್ಸಸ್ ಸ್ಟಾರ್ಸ್ ಸಮರ ಎಲ್ಲಿಗೆ ಮುಟ್ಟುತ್ತೆ ಅನ್ನೋ ಸಸ್ಪೆನ್ಸ್ಗೆ ಕ್ಲೈಮಾಕ್ಸ್ ಇನ್ನೂ ಸಿಕ್ಕಿಲ್ಲ.