ಮಾಹಾಮಾರಿ ಕೊರೋನಾ ವೈರಸ್‌ ಆರ್ಭಟದಿಂದ ಅನೇಕರು ಕೆಲಸ ಕಳೆದುಕೊಂಡು ಜೀವನ ಸಾಗಿಸಲು ಸಾಧ್ಯವಾಗದಷ್ಟು ಸಂಕಷ್ಟದಲ್ಲಿದ್ದಾರೆ. ಜೀವ ಬದುಕಿದರೆ ಏನಾದರೂ ಮಾಡಿಕೊಂಡು ಬದುಕಬಹುದು ಎಂದು ತಮ್ಮ ಹುಟ್ಟೂರಿನ ಕಡೆ ಮುಖ ಮಾಡಿದ್ದಾರೆ.  ಆದಾಯವಿಲ್ಲದೆ ಕುಳಿತರೆ ಹೆಂಡತಿ ಮಕ್ಕಳನ್ನು ಹೇಗೆ ಸಾಕುವುದು ಎಂದು ಚಿಂತಿಸುತ್ತಲೇ ಖ್ಯಾತ ನಿರ್ದೇಶಕ ಆನಂದ್ ದಿನಸಿ ಅಂಗಡಿ ತೆರೆದಿದ್ದಾರೆ.

ಕೊರೋನಾ ವಾರಿಯರ್ ತುಂಬು ಗರ್ಭಿಣಿ ಪತ್ನಿ ಬಿಚ್ಚಿಟ್ಟ ಕರಾಳ ಸತ್ಯ!

10 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿರುವ ಖ್ಯಾತ ನಿರ್ದೇಶಕ ಆನಂದ್ ಚೆನ್ನೈನ ನಿವಾಸಿ ಆಗಿದ್ದು ಮೋಲಿವಕ್ಕುಂನಲ್ಲಿ ದಿನಸಿ ಅಂಗಡಿ ತೆರೆದಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸುವುದರಲ್ಲಿ ಅನಂದ್ ಎತ್ತಿದ ಕೈ.  'ಮೌನ ಮಳೈ', ಒರು ಮಳೈ ನಂಗು ಸಾರಲ್' ಸೇರಿದಂತೆ ಅನೇಕ ಸಿನಿಮಾ ನಿರ್ದೇಶನ ಮಾಡಿದ್ದಾರೆ ಅದರಲ್ಲೂ ಇತ್ತೀಚಿಗೆ  ಅತಿ ಹೆಚ್ಚು ಸುದ್ದಿ ಮಾಡುತ್ತಿರುವ ಸಿನಿಮಾ 'ತುನಿಂತು ಸೇಯ್'ವನ್ನೂ. ಎರಡು ಹಾಡುಗಳ ಚಿತ್ರೀಕರಣ ಆಗಬೇಕಿದ್ದು ಲಾಕ್‌ಡೌನ್‌ನಿಂದ ಮುಂದೂಡಿದೆ. 

'ಕೊರೋನಾ ಸೋಂಕಿತರ ಸಂಖೆ ಹೆಚ್ಚಾಗುತ್ತಿರುವುದನ್ನು ನೋಡಿದರೆ ಇನ್ನು ಒಂದು ವರ್ಷ ಚಿತ್ರಮಂದಿರಗಳು ತೆರೆಯುವಂತೆ ಕಾಣುವುದಿಲ್ಲ.  ಅಲ್ಲಿಯವರೆಗೂ ನಮಗೆ ಕೆಲಸ ಇಲ್ಲದಂತಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಜೀವನ ನಡೆಸುವುದಕ್ಕೆ ದಿನಸಿ ಅಂಗಡಿಯೇ ಬೆಸ್ಟ್‌' ಎಂದು ಹೇಳಿದ್ದಾರೆ.