Asianet Suvarna News Asianet Suvarna News

ಮದುವೆ ಆಗ್ಬೇಕು, ಆದರೆ ಒಂದು ಕಂಡೀಷನ್; ವಿವಾಹದ ಬಗ್ಗೆ ನಟ ವಿಶಾಲ್ ಮಾತು

ತಮಿಳಿನ ಸ್ಟಾರ್ ನಟ, ಮೋಸ್ಟ್ ಬ್ಯಾಚುಲರ್ ವಿಶಾಲ್ ಮತ್ತೆ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಮದುವೆ ಆಗಬೇಕು ಎಂದರೆ ಒಂದು ಕಂಡೀಷನ್ ಇದೆ ಎಂದು ಹೇಳಿದ್ದಾರೆ. 

tamil actor Vishal talks about his marriage in Laththi tease rease event sgk
Author
First Published Nov 14, 2022, 4:53 PM IST

ತಮಿಳಿನ ಸ್ಟಾರ್ ನಟ, ಮೋಸ್ಟ್ ಬ್ಯಾಚುಲರ್ ವಿಶಾಲ್ ಮತ್ತೆ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ವಿಶಾಲ್ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಆದರೀಗ ಮದುವೆ ಬಗ್ಗೆ ಸ್ವತಃ ವಿಶಾಲ್ ಅವರೇ ಮಾತನಾಡಿದ್ದಾರೆ. ವಿಶಾಲ್ ಸದ್ಯ ಲಾಠಿ ಸಿನಿಮಾದ ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಲಾಠಿ ಸಿನಿಮಾದ ಟೀಸರ್ ರಿಲೀಸ್ ಮಾಡಲಾಯಿತು. ಟೀಸರ್ ರಿಲೀಸ್ ಈವೆಂಟ್ ನಲ್ಲಿ ವಿಶಾಲ್ ಮದುವೆ ಬಗ್ಗೆ ಪ್ರಶ್ನೆ ಎದುರಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ವಿಶಾಲ್ ಸದ್ಯದಲ್ಲೇ ಹುಡುಗಿ ಯಾರು, ಮದುವೆ ಯಾವಾಗ ಎಂದು ಹೇಳುತ್ತೇನೆ ಎಂದು ಹೇಳಿದರು. ನಾನು ನನ್ನ ಮದುವೆ ದಿನವನ್ನು ಘೋಷಣೆ ಮಾಡುತ್ತೇನೆ ಆದರೆ ಈ ಒಂದು ಕೆಲಸ ಮುಗಿಯಬೇಕು ಎಂದು ಹೇಳಿದ್ದಾರೆ. 

ವಿಶಾಲ್ ಹೇಳಿದ ಆ ಕೆಲಸ ಯಾವುದು? ಇಲ್ಲಿದೆ ವಿವರ, ಎಲ್ಲರಿಗೂ ಗೊತ್ತಿರುವ ಹಾಗೆ, ವಿಶಾಲ್ ನಾಡಿಗರ ಸಂಘದ ಕಟ್ಟಡ ನಿರ್ಮಾಣ ಕೆಲಸ ಮಾಡಿಸುತ್ತಿದ್ದಾರೆ.  3500 ಕಲಾವಿದರು ಮತ್ತು ರಂಗಭೂಮಿ ಕಲಾವಿದರಿಗೆ ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ. ಈ ಕಟ್ಟಡದ ನಿರ್ಮಾಣ ಪೂರ್ಣಗೊಂಡ ನಂತರವೇ ಮದುವೆಯಾಗುವುದಾಗಿ ವಿಶಾಲ್ ಸ್ಪಷ್ಟಪಡಿಸಿದ್ದಾರೆ. ಸಿನಿಮಾ ಮತ್ತು ರಂಗಭೂಮಿ ಕಲಾವಿದರಿಗೆ ಪಿಂಚಣಿ, ಹೆಲ್ತ್​ ಇನ್​ಶೂರೆನ್ಸ್​, ಮೇಕಪ್​ ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ವಿಶಾಲ್​ ಕಷ್ಟಪಡುತ್ತಿದ್ದಾರೆ. 

ಇನ್ನು ಕಳೆದ ವರ್ಷ ಮದುವೆ ಬಗ್ಗೆ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲ ಮಾತನಾಡಿದ್ದ ವಿಶಾಲ್, ಅದು ಯಾವಾಗ ಸಂಬಿಸುತ್ತೋ ಆಗಲೇ ಆಗುತ್ತೀನಿ ಎಂದು ಹೇಳಿದ್ದರು. ವಿಧಿಯನ್ನು ನಂಬುವ ವಿಶಾಲ್ ಗೋ ವಿತ್ ಫ್ಲೋ ಎನ್ನುವ ಹಾಗೆ ಸಾಗುತ್ತಾರಂತೆ. ಈ ಬಗ್ಗೆ 'ಮದುವೆ ಯಾವಾಗ ಸಂಭವಿಸುತ್ತೋ ಆಗ ಆಗುತ್ತೆ. ಅದು ವಿಧಿ ಮತ್ತು ನಾನು ಗೋ ವಿತ್ ಫ್ಲೋ ಹೋಗುತ್ತೀನಿ. ನಾನು ಅಂತಹ ಯಶಸ್ವಿ ನಟನಾಗುತ್ತೇನೆ ಮತ್ತು ನಂತರ ನಿರ್ಮಾಪಕನಾಗುತ್ತೇನೆ ಎಂದು ನನಗೆ ತಿಳಿದಿರಲಿಲ್ಲ' ಹಾಗೆ ಎಂದು ಹೇಳಿದ್ದಾರೆ. 

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ನಟ ವಿಶಾಲ್; ಆಶ್ಲೇಷ ಬಲಿ ಪೂಜೆ ನೆರವೇರಿಸಿದ ತಮಿಳು ಸ್ಟಾರ್

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ವಿಶಾಲ್​ ಮದುವೆ ಆಗಬೇಕಿತ್ತು. ಹೈದರಾಬಾದ್​ ಯುವತಿ ಜೊತೆ ವಿಶಾಲ್ ಮದುವೆ ಫಿಕ್ಸ್ ಆಗಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ಸಂಬಂಧ ಮುರಿದು ಬಿತ್ತು. ಬಳಿಕ ವಿಶಾಲ್ ಮದುವೆ ವಿಚಾರ ಆಗಾಗ ಸದ್ದು ಮಾಡತ್ತಲೇ ಇರುತ್ತೆ.  ಅಂದಹಾಗೆ ವಿಶಾಲ್   ಯುವತಿಯೊಬ್ಬರ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಮಾತಿದೆ. ಯಾರು, ಯಾವಾಗ ಮದುವೆ ಎನ್ನುವ ಬಗ್ಗೆ ಸದ್ಯದಲ್ಲೇ ಬಹಿರಂಗ ಪಡಿಸುವ ಸಾಧ್ಯತೆ ಇದೆ. 

ನಟ ವಿಶಾಲ್ ಮನೆ ಮೇಲೆ ಕಲ್ಲು ತೂರಾಟ; ಕಿಟಕಿ ಗಾಜು ಪುಡಿ ಪುಡಿ

ಇತ್ತೀಚಿಗಷ್ಟೆ ನಟ ವಿಶಾಲ್ ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಸ್ನೇಹಿತರ ಜೊತೆ ವಿಶಾಲ್ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟಿದ್ದರು. ಜಾತಕದಲ್ಲಿ ನಾಗದೋಷ ಇರುವ ಹಿನ್ನೆಲೆ ಆಶ್ಲೇಷ ಬಲಿ ಪೂಜೆ ನೆರವೇರಿಸಿದ್ದರು ವಿಶಾಲ್.  ವಿಶಾಲ್ ದೇವಸ್ಥಾನಕ್ಕೆ ಭೇಟಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತು. ಅದಕ್ಕೂ ಮೊದಲು  ವಿಶಾಲ್ ಮೈಸೂರಿನ ಶಕ್ತಿದಾಮಕ್ಕೆ ಭೇಟಿ ನೀಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ನಿಧನದ ಬಳಿಕ ರಾಜು ಕುಟುಂಬ ಅವಕಾಶ ಕೊಟ್ಟರೆ ಶಕ್ತಿದಾಮದ ಮಕ್ಕಳನ್ನು ನೋಡಿಕೊಳ್ಳುವುದಾಗಿ ವಿಶಾಲ್ ಹೇಳಿದ್ದರು.

Follow Us:
Download App:
  • android
  • ios