ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟ ವಿಶಾಲ್ ವಿಡಿಯೋ. ಜೊತೆಗಿರುವ ಹುಡುಗಿ ಯಾರು?

ತಮಿಳು ಚಿತ್ರರಂಗದ ಜನಪ್ರಿಯ ನಟ ವಿಶಾಲ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಮದುವೆ, ಡಿವೋರ್ಸ್, ನಿಶ್ಚಿತಾರ್ಥ, ಗರ್ಲ್‌ಫ್ರೆಂಡ್, ಸಮಾಜ ಸೇವೆ.....ಸಿನಿಮಾ ಹೊರತು ಪಡಿಸಿ ಹೀಗೆ ಸಾಕಷ್ಟು ವಿಚಾರಗಳಿಗೆ ಸುದ್ದಿಯದಲ್ಲಿದ್ದಾರೆ. ಈಗ ಮತ್ತೆ ವಿಶಾಲ್ ಬೆನ್ನಿಂದೆ ಬಿದ್ದಿದ್ದಾರೆ ಪ್ಯಾಪರಾಜಿಗಳು. 

ಹೌದು! ಡಿಸೆಂಬರ್ ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಪ್ರಯುಕ್ತ ನಟ ವಿಶಾಲ್ ನ್ಯೂ ಯಾರ್ಕ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಡಿಸೆಂಬರ್‌ ತಿಂಗಳು ಪೂರ್ತಿ ಪ್ರತಿಯೊಂದು ಅಂಗಡಿ ಮತ್ತು ರಸ್ತೆಗಳನ್ನು ಅದ್ಭುತವಾಗಿ ಅಲಂಕಾರ ಮಾಡಿರುತ್ತಾರೆ. ಈ ಅಲಂಕಾರ ನೋಡಿ ಅದೆಷ್ಟೋ ಮಂದಿ ಟ್ರಿಪ್ ಮಾಡುತ್ತಾರೆ. ಹೀಗೆ ನಟ ವಿಶಾಲ್ ಕೂಡ ಗೆಳತಿ ಜೊತೆ ನೈಟ್ ವಾಕ್ ಮಾಡಿದ್ದಾರೆ. ಕೆಂಪು ಬಣ್ಣದ ಸ್ವೆಟರ್‌ನಲ್ಲಿ ವಿಶಾಲ್ ಮತ್ತು ಕೆಂಪು ಬಣ್ಣದ ಸ್ವೆಟರ್‌ನಲ್ಲಿ ಗೆಳತಿ ಕಾಣಿಸಿಕೊಂಡಿದ್ದಾರೆ. 

ದೊಡ್ಡ ಅವಘಡದಿಂದ ಪಾರಾದ ನಟ ವಿಶಾಲ್; ಟೆಕ್ನಿಕಲ್ ಸಮಸ್ಯೆಯಿಂದ ಟ್ರಕ್ ಕಂಟ್ರೋಲ್ ತಪ್ಪಿತ್ತುಎಂದ ತಂಡ

ಫುಟ್‌ಪಾತ್‌ ಮೇಲೆ ವಿಶಾಲ್ ವಾಕಿಂಗ್ ಮಾಡಿಕೊಂಡು ಬರುವಾಗ ಪಾದಾಚಾರಿಯೊಬ್ಬ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಕ್ಯಾಮೆರಾ ನೋಡುತ್ತಿದ್ದಂತೆ ವಿಶಾಲ್ ತಮ್ಮ ಮುಖ ಮಾತ್ರವಲ್ಲದೆ ಆ ಗೆಳತಿ ಮುಖ ಕೂಡ ಮುಚ್ಚಿಕೊಂಡು ಓಡಿ ಹೋಗಿದ್ದಾರೆ. ಓಡುವ ಬರದಲ್ಲಿ ಒಮ್ಮೆ ಬಿದ್ದುಬಿಡುತ್ತಿದ್ದರು. ಇದನ್ನು ನೋಡಿ ಗಾಬರಿ ಆದ ವ್ಯಕ್ತಿ ವಿಡಿಯೋ ಮಾಡುವುದನ್ನು ನಿಲ್ಲಿಸಿದ್ದಾರೆ. ವಿಶಾಲ್ ಜೊತೆ ಇರುವ ಆ ಗೆಳತಿ ಯಾರು? ಯಾಕೆ ಮುಖ ಮುಚ್ಚಿಕೊಂಡರು? ಯಾವ ಸಂಬಂಧ ಇಲ್ಲ ಅಂದ್ಮೇಲೆ ಯಾಕೆ ಓಡಿ ಹೋಗಬೇಕಿತ್ತು? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ನೆಟ್ಟಿಗರು. ವಿಶಾಲ್ ಅಭಿಮಾನಿಗಳು ಇದು ಫೇಕ್ ವಿಡಿಯೋ ಎನ್ನುತ್ತಾರೆ. 

ಇತ್ತೀಚಿಗೆ ವಿಶಾಲ್ ನಟಿಸಿದ ಮಾರ್ಕ್ ಆಂಟನಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿತ್ತು. ಆದರೆ CBFC ಬಗ್ಗೆ ವಿಶಾಲ್ ಗಂಭೀರ ಆರೋಪ ಮಾಡಿದ್ದರು. ತಮ್ಮ ಮಾರ್ಟ್‌ ಆಂಟನಿ ಚಿತ್ರದ ಹಿಂದ ವರ್ಷನ್ ಸೆನ್ಸಾರ್ ಕಾಪಿ ಪಡೆಯಲು ಸೆನ್ಸರ್ ಮಂಡಳಿ ಲಂಚ ನೀಡಿದ್ದಾಗಿ ವಿಶಾಲ್‌ ಹೇಳಿದ್ದರು. ಬಹಿರಂಗವಾಗಿ ತಮ್ಮ ಚಿತ್ರಕ್ಕೆ 6.5 ಲಕ್ಷ ರೂಪಾಯಿ ಲಂಚ ನೀಡಿರುವುದಾಗಿ ಹೇಳಿದ್ದರು.

Scroll to load tweet…