200ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿರುವ ಬಹುಭಾಷಾ ನಟ ಆನಂದ್‌ ರಾಜ್‌ ಜೀವನದಲ್ಲಿ ಎಂದೂ ಊಹಿಸಿಕೊಳ್ಳಲಾಗದ ದುರ್ಘಟನೆಯೊಂದು ನಡೆದಿದೆ. 

ಹೌದು! ಅನಂದರ್‌ ರಾಜ್‌ ಸಹೋದರ ಕನಗಸಭೈ ಮಾರ್ಚ್‌ 5ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಪಕ್ಕದಲ್ಲೇ ಇದ್ದ ಕಾರಣ ಪೊಲೀಸರು ಆತ್ಮಹತ್ಯೆ ಎಂದೇ ಪ್ರಕರಣ ದಾಖಲಿಸಿಕೊಂಡಿದ್ದರು.

ಕನಗಸಭೈ ಮೂಲತಃ ಚೆನ್ನೈ ನಿವಾಸಿಯಾದರೂ, ಪಾಂಡಿಚೇರಿಯಲ್ಲಿದ್ದರು. ವಿವಾಹವಾಗದೇ ಕನಗಸಭೈ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿದ್ದರು. ಚಿಟ್‌ ಫಂಡ್‌ ಸಹ ನಡೆಸುತ್ತಿದ್ದರು. ಹೆಚ್ಚು ಹಣ-ಕಾಸಿನ ವಹಿವಾಟು ನಡೆಸುತ್ತಿದ್ದರು. ಸಹೋದರ ಆನಂದ್‌ ರಾಜ್‌ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಅವರ ಸಹಾಯದಿಂದ ಅನೇಕ ಸಿನಿ ತಾರೆಯರ ಸಂಪರ್ಕವೂ ಇತ್ತು. 

ರಾಜಪ್ರಭುತ್ವಕ್ಕೆ ಗುಡ್‌ಬೈ: ಹ್ಯಾರಿ ದಂಪತಿ ಕೊನೆಯ ಬಾರಿ ಕಾಣಿಸಿಕೊಂಡಿದ್ದು ಹೀಗೆ!

ಕನಗಸಭೈ ಆತ್ಮಹತ್ಯೆಗೆ ಕಾರಣವೇನು?

ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಕನಗಸಭೈ ಪತ್ರವೊಂದನ್ನು ಬರೆದಿದ್ದರು. ಅದನ್ನು ಪೊಲೀಸರು ಡೆತ್ ನೋಟ್ ಎಂದು ಪರಿಗಣಿಸಿದ್ದಾರೆ. ಅದರಲ್ಲಿ ಕನಗಸಭೈ ಸುಮಾರು 50 ಕೋಟಿ ರು. ಸಾಲ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಚಿಟ್‌ ಫಂಡ್‌ನಲ್ಲಿ ಮೋಸ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ ಮತ್ತೊಬ್ಬ ಸಹೋದರ ಭಾಸ್ಕರ್‌ ಮತ್ತು ಅವರ ಮಗ ಶಿವಚಂದ್ರನ್‌ ಎಂದೇ ಹೇಳಲಾಗುತ್ತಿದೆ. 

ಆದರೆ ಕನಗಸಭೈ ಯಾರ ಯಾರ ಜೊತೆ ಹಣಕಾಸು ವ್ಯವಹಾರ ನಡೆಸುತ್ತಿದ್ದರು ಎಂಬುದಿನ್ನೂ ಬಹಿರಂಗಗೊಳಿಸಿಲ್ಲ. ಸದ್ಯ ವಿಚಾರಣೆ ನಡೆಯುತ್ತಿದ್ದು, ಆತ್ಮಹತ್ಯೆ ಪ್ರಕರಣ ಒಂದೊಂದೇ ತಿರುವು ಪಡೆದುಕೊಳ್ಳುತ್ತಿದೆ.