Asianet Suvarna News Asianet Suvarna News

Tamannaah Bhatia ಮಿಲ್ಕ್‌ ಬ್ಯೂಟಿಗೆ ಕಂಕಣ ಭಾಗ್ಯ; ಕೈ ಹಿಡಿಯುತ್ತಿರುವ ಬ್ಯುಸಿನೆಸ್‌ ಮ್ಯಾನ್ ಯಾರು?

ಮಿಲ್ಕ್‌ ಬ್ಯೂಟಿ ತಮನ್ನಾ ಭಾಟಿಯಾ ಮದುವೆ. ಮುಂಬೈ ಉದ್ಯಮಿ ಎಂದವರಿಗೆ ಕ್ಲಾರಿಟಿ ಕೊಟ್ಟ ನಟಿ...ಫೋಟೋ ನೋಡಿ ನೆಟ್ಟಿಗರು ಶಾಕ್....

Tamannaah Bhatia response to wedding rumours with businessman vcs
Author
First Published Nov 17, 2022, 12:14 PM IST

ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ಮಿಲ್ಕ್‌ ಬ್ಯೂಟಿ ತಮನ್ನಾ ಭಾಟಿಯಾ ಮದುವೆ ವಿಚಾರ ಸದ್ಯಕ್ಕೆ ಸುದ್ದಿಯಲ್ಲಿದೆ. ಹಸಿರು ಬಣ್ಣದ ಸೀರೆ ಧರಿಸಿ ಕಂಗೊಳಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ತಮನ್ನಾ ಪ್ರತಿಕ್ರಿಯೆ ನೀಡಿದ್ದಾರೆ ಅಲ್ಲದೆ ತಮ್ಮ ಭಾವಿ ಪತಿ ನೋಡಲು ಹೇಗಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ. 

ಮುಂಬೈನ ಜನಪ್ರಿಯ ಪ್ಯಾಪರಾಜಿ ಒಬ್ಬರು ತಮನ್ನಾ ಮದುವೆ ಆಗುತ್ತಿದ್ದಾರೆ ಎಂದು ಬರೆದುಕೊಂಡು ಹಸಿರು ಬಣ್ಣದ ಸೀರೆ ಧರಿಸಿರುವ ವಿಡಿಯೋ ಅಪ್ಲೋಡ್ ಮಾಡಿದ್ದರು. ಕ್ಯಾಮೆರಾ ನೋಡುತ್ತಿದ್ದಂತೆ ತಮನ್ನಾ ಓಡಿ ಬಾಗಿಲು ಮುಚ್ಚುತ್ತಾರೆ. ಕೆಲವು ನಿಮಿಷಗಳ ನಂತರ ಹುಡುಗನೊಬ್ಬ ಹಸಿರು ಬಣ್ಣದ ಸೂಟ್‌ ಧರಿಸಿ ಪೋಸ್‌ ಕೊಟ್ಟು ಮತ್ತೆ ಬಾಗಿಲು ಮುಚ್ಚಿಕೊಳ್ಳುತ್ತಾರೆ. ಇದನ್ನು ನೋಡಿ ನೆಟ್ಟಿಗರು ಕೊಂಡ ಶಾಕ್ ಆಗಿದ್ದಾರೆ.

Tamannaah Bhatia response to wedding rumours with businessman vcs

'ಸೀರಿಯಸ್‌ ಅಗಿ ಹೇಳಿ ಯಾಕೆ ಈ ರೀತಿ ಮಾಡುತ್ತೀರಾ?' ಎಂದು ವೈರಲ್ ವಿಡಿಯೋಗೆ ತಮನ್ನಾ ಪ್ರಶ್ನೆ ಮಾಡಿದ್ದಾರೆ. ಹಸಿರು ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದು ತಮನ್ನಾನೇ. ಹೌದು! ಸೀರೆ ಬದಲಾಯಿಸಿ ಹುಡುಗನಂತೆ ವೇಷ ಧರಿಸಿದ ತಮನ್ನಾ 'ನನ್ನ ಭಾವಿ ಪತಿಯನ್ನು ಪರಿಚಯ ಮಾಡಿಕೊಡುತ್ತಿರುವ ಖ್ಯಾತ ಉದ್ಯಮಿ. ಮದುವೆ ಗಾಳಿ ಮಾತುಗಳು. ಪ್ರತಿಯೊಬ್ಬರು ನನ್ನ ಜೀವನ ಕಥೆಯನ್ನು ಬರೆಯುತ್ತಿದ್ದಾರೆ ನನ್ನ ಬಿಟ್ಟು' ಎಂದು ತಮನ್ನಾ ಬರೆದುಕೊಳ್ಳುವ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ.

ಮುಂದಿನ ವರ್ಷ ಮುಂಬೈ ಉದ್ಯಮಿಯನ್ನು ತಮನ್ನಾ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು ಹೀಗಾಗಿ ಪ್ರತಿ ಸಲ ಸೀರೆಯಲ್ಲಿ ತಮನ್ನಾಳನ್ನು ನೋಡಿದ್ದಾಗ ನೆಟ್ಟಿಗರು ಮದುವೆ ಅಂದುಕೊಳ್ಳುತ್ತಾರೆ. 'ಮದುವೆಯಾಗುವ ಮೂಡ್‌ನಲ್ಲಿ ನಾನಿಲ್ಲ ಏಕೆಂದರೆ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವೆ ಜೀವನ ಚೆನ್ನಾಗಿ ನಡೆಯುತ್ತಿದೆ ಹೀಗಾಗಿ ವೃತ್ತಿ ಬದುಕಿನ ಮೇಲೆ ಗಮನ ಹರಿಸುತ್ತಿರುವೆ' ಎಂದು ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದರು. 

ದೀಪಾವಳಿ ಸಂಭ್ರಮದಲ್ಲಿ ತಮನ್ನಾ; ಡೀಪ್ ನೆಕ್ ಬ್ಲೌಸ್ ಸೀರೆಯಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ

ಕನ್ನಡಿಗರನ್ನು ಮೆಚ್ಚಿಕೊಂಡ ಬ್ಯೂಟಿ:

ತಮನ್ನಾ ಬಾಟಿಯಾ ‘ಜಾಗ್ವಾರ್’ ಮತ್ತು ‘ಕೆಜಿಎಫ್’ ಚಿತ್ರದಲ್ಲಿ ಡಾನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಜೊತೆಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಪುನೀತ್ ಜೊತೆಗೆ ನಟಿಸುವ ಅವಕಾಶ ಸಿಕ್ಕರೆ ಖಂಡಿತ ಕನ್ನಡಕ್ಕೆ ಬರುತ್ತೇನೆ ಎಂದೂ ಹೇಳಿದ್ದರು. ಆದರೆ ಆ ಕನಸು ಹಾಗೆ ಉಳಿಯಿತ್ತು. ' ನನಗೆ ಕನ್ನಡದಲ್ಲಿ ನಟಿಸಬೇಕು ಎನ್ನುವ ಆಸೆ ಇದೆ. ಅದಕ್ಕೆ ಕಾಲ ಕೂಡಿ ಬರಬೇಕು. ಒಳ್ಳೆಯ ಕತೆ, ಒಳ್ಳೆಯ ತಂಡ ಸಿಕ್ಕಬೇಕು.ಪುನೀತ್ ಅವರು ದೊಡ್ಡ ಸ್ಟಾರ್ ನಟರು. ಅವರೊಂದಿಗೆ ನಟಿಸಬೇಕು ಎನ್ನುವ ಆಸೆ ನನಗಿದೆ. ಅದೆಲ್ಲಕ್ಕೂ ಕಾಲ ಕೂಡಿ ಬರಬೇಕು.ಗಾಗಲೇ ಹಲವಾರು ದೊಡ್ಡ ದೊಡ್ಡ ನಿರ್ಮಾಪಕರು ಕನ್ನಡಕ್ಕೆ ಬರುವಂತೆ ಆಫರ್ ನೀಡಿದ್ದಾರೆ. ನಾನು ಎಲ್ಲವನ್ನೂ ನೋಡಿ ಖಂಡಿತ ಕನ್ನಡಕ್ಕೆ ಬರುವೆ' ಎಂದು 2018ರಲ್ಲಿ ತಮನ್ನಾ ಹೇಳಿದ್ದರು.

ಗೋಲ್ಡ್ ಅಂಡ್ ಸಿಲ್ವರ್ ಡ್ರೆಸ್‌ನಲ್ಲಿ ಮಿರಮಿರ ಮಿಂಚಿದ ತಮನ್ನಾ; ಮಿಲ್ಕಿ ಬ್ಯೂಟಿಯ ಹಾಟ್ ಫೋಟೋ ವೈರಲ್

ಪಾಕ್ ಸೊಸೆ ಹೌದಾ?

'ಬಾಹುಬಲಿ-2' ಚಿತ್ರದ ನಂತರ ತಮನ್ನಾ ಮದುವೆ ವಿಚಾರ ತುಂಬಾನೇ ಸುದ್ದಿಯಲ್ಲಿದೆ ಇದಕ್ಕೆ ಕಾರಣ ಪಾಕ್‌ ಕ್ರಿಕೆಟಿಗ ಅಬ್ದುಲ್ ರಜಾಕ್‌ ಜೊತೆ ಕಾಣಿಸಿಕೊಂಡ ಫೋಟೋ. ವೈರಲ್ ಆಗುತ್ತಿರುವ ಫೋಟೋದಲ್ಲಿ ತಮನ್ನಾ ಹಾಗೂ ಅಬ್ದುಲ್ ಆಭರಣದ ಅಂಗಡಿಯಲ್ಲಿದ್ದಾರೆ. ಕೆಲವರು ಇದು ಜಾಹಿರಾತು ಪೋಟೋ ಎಂದರೆ ಇನ್ನು ಕೆಲವರು ಅವರು ಸೈಲೆಂಟ್‌ ಮದುವೆ ತಯಾರಿಯಲ್ಲಿದ್ದಾರೆ  ಎನ್ನುತ್ತಿದ್ದಾರೆ.ಈ ಫೋಟೋ ವೈರಲ್ ಆಗುತ್ತಿದಂತೆ ನಟಿ ತಮನ್ನಾ ಪ್ರತಿಕ್ರಿಯಿಸಿದ್ದಾರೆ. 'ಈ ಫೋಟೋ ತುಂಬಾನೇ ಹಳೆಯದು. ನಾನು ಅಬ್ದುಲ್  ಆಭರಣದ ಅಂಗಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಸೆರೆ ಹಿಡಿಯಲಾಗಿತ್ತು. ಏನೂ ಸುದ್ದಿ ಇಲ್ಲದ ಕಾರಣ ಈಗ ಇದನ್ನು ವೈರಲ್ ಮಾಡುತ್ತಿದ್ದಾರೆ' ಎಂದು ಸ್ಪಷ್ಟನೆ ನೀಡಿದ್ದಾರೆ.

Follow Us:
Download App:
  • android
  • ios