ಕರೀನಾ ಕಪೂರ್ ವರ್ತನೆ ಟೀಕಿಸಿದ್ದ ನಾರಾಯಣ ಮೂರ್ತಿ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ ಸುಸೇನ್ ಖಾನ್
ಬಾಲಿವುಡ್ ಸ್ಟಾರ್ ಕರೀನಾ ಕಪೂರ್ ಅವರ ವರ್ತನೆ ಟೀಕಿಸಿದ್ದ ಇನ್ಪೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಬೆಂಬಲಕ್ಕೆ ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಖಾನ್ ನಿಂತಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್ ವರ್ತನೆ ಟೀಕಿಸಿದ್ದ ಇನ್ಪೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಬೆಂಬಲಕ್ಕೆ ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಖಾನ್ ನಿಂತಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ನಾರಾಯಣ ಮೂರ್ತಿ ಕರೀನಾ ಕಪೂರ್ ಬಗ್ಗೆ ಹೇಳಿದ್ದ ಹೇಳಿಕೆ ಇದೀಗ ಮತ್ತೆ ವೈರಲ್ ಆಗಿದೆ. ಕರೀನಾ ಕಪೂರ್ ಅಭಿಮಾನಿಗಳ ಜೊತೆ ಸರಿಯಾಗಿ ಮಾತನಾಡಲ್ಲ ಎಂದು ನಾರಾಯಣ ಮೂರ್ತಿ ಹೇಳಿಕೆ ನೀಡಿದ್ದರು. ಐಐಟಿ-ಕಾನ್ಪುರದಲ್ಲಿ ನಡೆದ ಸಂವಾದಲ್ಲಿ ನಾರಾಯಣ ಮೂರ್ತಿ ಈ ಮಾತನ್ನು ಹೇಳಿದ್ದರು. ಹಳೆಯ ಹೇಳಿಕೆ ಇದೀಗ ಮತ್ತೆ ವೈರಲ್ ಆಗಿದೆ. ಈ ನಡುವೆ ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಖಾನ್ ಪ್ರತಿಕ್ರಿಯೆ ನೀಡಿರುವುದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.
ಸುಸೇನ್ ಖಾನ್ ಕಾಮೆಂಟ್
ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿರುವ ಸುಸೇನ್ ಖಾನ್, 'ಸರಿಯಾಗಿ ಹೇಳಿದ್ದೀರಿ ಮಿಸ್ಟರ್ ಮೂರ್ತಿ' ಎಂದು ಹೇಳಿದ್ದಾರೆ. ಈ ಕಾಮೆಂಟ್ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ.
ನಾರಾಯಣ ಮೂರ್ತಿ ಹೇಳಿದ್ದೇನು?
ನಾನು ಲಂಡನ್‌ನಿಂದ ಬರುತ್ತಿದ್ದೆ. ನನ್ನ ಪಕ್ಕದಲ್ಲಿಯೇ ಕರೀನಾ ಕಪೂರ್ ಕುಳಿತಿದ್ದರು. ಎಷ್ಟೋ ಜನ ಅವಳ ಬಳಿ ಬಂದು ಹಲೋ ಹೇಳಿದರು. ಅವರು ಒಂದು ಪ್ರತಿಕ್ರಿಯೆಯನ್ನು ನೀಡಿಲ್ಲ. ನನಗೆ ಆಶ್ಚರ್ಯವಾಯಿತು. ಯಾರೋ ನನ್ನ ಬಳಿಗೆ ಬಂದು ಮಾತನಾಡಿದರೆ ನಾವು ಎದ್ದುನಿಂತು, ಒಂದು ನಿಮಿಷ ಅಥವಾ ಅರ್ಧ ನಿಮಿಷ ಮಾತನಾಡುತ್ತೇವೆ ಅದೇ ತಾನೆ ಅವರು ಅವರು ನಿರೀಕ್ಷಿಸುುವುದು' ಎಂದು ಹೇಳಿದ್ದರು.
Sudha Murthy: ನಾರಾಯಣ ಮೂರ್ತಿ ಕಾಲೆಳೆಯೋದೇ ಸುಧಾ ಮೂರ್ತಿ ಬ್ಯುಸಿನೆಸ್ಸು!
ಪತಿಯ ಮಾತನ್ನು ಕೇಳಿ ಸುಧಾ ಮೂರ್ತಿ ಕರೀನಾ ಕಪೂರ್ ಅವರ ಬೆಂಬಲಕ್ಕೆ ನಿಂತಿದ್ದರು. 'ಅವರು ಒಂದು ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಸುಸ್ತಾಗಿರಬಹುದು. ಮೂರ್ತಿ, ಸಂಸ್ಥಾಪಕ, ಸಾಫ್ಟ್‌ವೇರ್ ವ್ಯಕ್ತಿ, ಬಹುಶಃ 10,000 ಅಭಿಮಾನಿಗಳನ್ನು ಹೊಂದಿರಬಹುದು, ಆದರೆ ಚಲನಚಿತ್ರ ನಟಿಯರಿಗೆ ಮಿಲಿಯನ್ ಗಟ್ಟಲೆ ಅಭಿಮಾನಿಗಳು ಇರುತ್ತಾರೆ' ಎಂದು ಹೇಳಿದರು. ಆಗ ನಾರಾಯಣ ಮೂರ್ತಿ ಮತ್ತೆ ಮಾತನಾಡಿ, 'ಅದು ಸಮಸ್ಯೆಯಲ್ಲ. ಸಮಸ್ಯೆಯೆಂದರೆ, ಯಾರಾದರೂ ಪ್ರೀತಿಯನ್ನು ತೋರಿಸಿದಾಗ, ನೀವು ಅದನ್ನು ಎಷ್ಟೇ ನಿಗೂಢ ರೀತಿಯಲ್ಲಿ ತೋರಿಸಬಹುದು. ಇದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಇವೆಲ್ಲವೂ ನಿಮ್ಮ ಅಹಂಕಾರವನ್ನು ಕಡಿಮೆ ಮಾಡುವ ಮಾರ್ಗಗಳು, ಅಷ್ಟೆ' ಎಂದು ಹೇಳಿದರು.
ಕರೀನಾರನ್ನು ಟೀಕಿಸಿದ ಇನ್ಫೋಸಿಸ್ ನಾರಾಯಣ ಮೂರ್ತಿ: ನಟಿ ಬೆಂಬಲಕ್ಕೆ ನಿಂತ ಸುಧಾ ಮೂರ್ತಿ!
ಅಂದಹಾಗೆ ಇದೀಗ ಸುಸೇನ್ ಖಾನ್ ಪ್ರತಿಕ್ರಿಯೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಹಿಂದೆ ಹೃತಿಕ್ ಮತ್ತು ಕರೀನಾ ಕಪೂರ್ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಇತ್ತು. ಕರಣ್ ಜೋಹರ್ ಅವರ ಕಭಿ ಖುಷಿ ಕಭಿ ಗಮ್ ಚಿತ್ರದ ಸಮಯದಲ್ಲಿ ಹೃತಿಕ್ ಮತ್ತು ಕರೀನಾ ಪರಸ್ಪರ ಡೇಟಿಂಗ್ ಮಾಡುವ ಬಗ್ಗೆ ವದಂತಿಗಳಿದ್ದವು. ಇದೀಗ ಕರೀನಾ ವಿರುದ್ಧವಾಗಿ ಸುಸೇನ್ ನೀಡಿದ ಹೇಳಿಕೆ ಅನೇಕರಿಗೆ ಶಾಕ್ ನೀಡಿದೆ.