ರಿಯಾ ಚಕ್ರವರ್ತಿ ಡ್ರಗ್ಸ್ ಖರೀದಿಸಿ ಸುಶಾಂತ್‌ಗೆ ಕೊಡುತ್ತಿದ್ದರು; NCB
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಹೊಂದಿ ಎರಡು ವರ್ಷಗಳಾದರೂ ಸಾವಿನ ಹಿಂದಿನ ನಿಜವಾದ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ. ಇದೀಗ ಎನ್ ಸಿ ಬಿ ಆರೋಪ ಪಟ್ಟಿ ಸಲ್ಲಿಸಿದ್ದು ರಿಯಾ ಚಕ್ರವರ್ತಿ ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ಸೇರಿದಂತೆ ಇನ್ನು ಕೆಲವು ಆರೋಪಿಗಳಿಂದ ಗಾಂಜಾ ಖರೀದಿಸಿ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಹಸ್ತಾಂತರಿಸುತ್ತಿದ್ದರು ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವರದಿ ಮಾಡಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಹೊಂದಿ ಎರಡು ವರ್ಷಗಳಾದರೂ ಸಾವಿನ ಹಿಂದಿನ ನಿಜವಾದ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ. ಸುಶಾಂತ್ ಸಾವಿನ ತನಿಖೆ ವೇಳೆ ಬಾಲಿವುಡ್‌ನ ಡ್ರಗ್ಸ ಜಾಲ ಕೂಡ ಬೆಳಕಿಗೆ ಬಂದಿತ್ತು. ಡ್ರಗ್ಸ್ ಜಾಲದ ಹಿಂದೆ ಬಿದ್ದಿದ್ದ ಪೊಲೀಸರು ಘಟಾನುಘಟಿಗಳ ವಿಚಾರಣೆ ನಡೆಸಿದ್ದರು. ಸುಶಾಂತ್ ಸಿಂಗ್ ಗರ್ಲ್ ಫ್ರೆಂಡ್ ನಟಿ ರಿಯಾ ಚಕ್ರವರ್ತಿ ಕೂಡ ಡ್ರಗ್ಸ್ ಖರೀದಿ ಮಾಡಿ ಸುಶಾಂತ್ ಸಿಂಗ್ ಅವರಿಗೆ ಹಸ್ತಾಂತರಿಸುತ್ತಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಇದೀಗ ಎನ್ ಸಿ ಬಿ ಆರೋಪ ಪಟ್ಟಿ ಸಲ್ಲಿಸಿದೆ. ರಿಯಾ ಚಕ್ರವರ್ತಿ ಅವರ ಸಹೋದರ ಶೋವಿಕ್ ಚಕ್ರವರ್ತಿ ಸೇರಿದಂತೆ ಇನ್ನು ಕೆಲವು ಆರೋಪಿಗಳಿಂದ ಗಾಂಜಾ ಖರೀದಿಸಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಹಸ್ತಾಂತರಿಸುತ್ತಿದ್ದರು ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಹೇಳಿಕೊಂಡಿದೆ.
ಸುಶಾಂತ್ ಸಿಂಗ್ ಸಾವಿಗೆ (SSR Case) ಸಂಬಂಧಿಸಿದಂತೆ ಮಾದಕವಸ್ತು ಪ್ರಕರಣದಲ್ಲಿ 35 ಆರೋಪಿಗಳ ವಿರುದ್ಧ ಎನ್‌ಸಿಬಿ (Narcotics Control Bureau) ನ್ಯಾಯಾಲಯಕ್ಕೆ ಕಳೆದ ತಿಂಗಳು ಆರೋಪ ಪಟ್ಟಿ ಸಲ್ಲಿಸಿತ್ತು, ಅದರ ವಿವರಗಳು ಈಗ ಬಹಿರಂಗಗೊಂಡಿವೆ. ಆರೋಪ ಪಟ್ಟಿಯಲ್ಲಿ ಎಲ್ಲಾ ಆರೋಪಿಗಳು ಮಾರ್ಚ್ 2020 ಡಿಸೆಂಬರ್ ನಡುವೆ ಹೈ ಸೊಸೈಟಿ ಬಾಲಿವುಡ್ ನಲ್ಲಿ ಮಾದಕ ವಸ್ತುಗಳನ್ನು ಖರೀದಿಸಲು, ಮಾರಾಟ ಮಾಡಲು ಮತ್ತು ವಿತರಿಸಲು ಪರಸ್ಪರರು ಕ್ರಿಮಿನಲ್ ಸಂಚು ರೂಪಿಸಿದ್ದಾರೆ ವರದಿ ಮಾಡಿದೆ.
ಸೆಕ್ಷನ್ 27 ಮತ್ತು 27 ಎ (ಅಕ್ರಮ ಕೆಲಸಕ್ಕೆ ಹಣಕಾಸು ಒದಗಿಸುವುದು ಮತ್ತು ಅಪರಾಧಿಗಳಿಗೆ ಆಶ್ರಯ ನೀಡುವುದು) ಸೆಕ್ಷನ್ 28, 29 ಸೇರಿದಂತೆ ಎನ್‌ಡಿಪಿಎಸ್ ಕಾಯಿದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ಮೇಲೆ ಆರೋಪ ಹೊರಿಸಲಾಗಿದೆ ಎಂದು ವರದಿ ಹೇಳುತ್ತದೆ.
Sushant Singh Rajput case - ಮತ್ತೆ ಸಂಕಷ್ಟದಲ್ಲಿ ರಿಯಾ ಚಕ್ರವರ್ತಿ
ರಿಯಾ ಚಕ್ರವರ್ತಿ ಆರೋಪಿ ಸಂಖ್ಯೆ 10 ಎಂದು ಪಟ್ಟಿ ಮಾಡಲಾಗಿದೆ. ರಿಯಾ ಚಕ್ರವರ್ತಿ ಉಳಿದ ಆರೋಪಿಗಳಾದ ಸ್ಯಾಮ್ಯುಯೆಲ್ ಮಿರಾಂಡಾ, ಆಕೆಯ ಸಹೋದರ ಶೋವಿಕ್, ದೀಪೇಶ್ ಸಾವಂತ್ ಮತ್ತು ಇತರರಿಂದ ಅನೇಕ 'ಗಾಂಜಾ' ಪಡೆದು ಸುಶಾಂತ್ ರಜಪೂತ್‌ಗೆ ಹಸ್ತಾಂತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಿಯಾ ಗಾಂಜಾ ಖರೀದಿಸಿ 2020 ಮಾರ್ಚ್ ಮತ್ತು ಸೆಪ್ಟೆಂಬರ್ ನಡುವೆ ಹಣ ಪಾವತಿಸುತ್ತಿದ್ದರು ಎನ್ನಲಾಗಿದೆ.
sushant singh death anniversary; ಮಿಸ್ ಯು...ಎಂದು ಅಪರೂಪದ ಫೋಟೋ ಹಂಚಿಕೊಂಡ ರಿಯಾ
ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಡ್ರಗ್ ಪೆಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಗಾಂಜಾ ಮತ್ತು ಚರಸ್ ಆರ್ಡರ್ ಮಾಡಿ ಕೊಡುತ್ತಿದ್ದರು ಎನ್ನುವ ಆರೋಪವಿದೆ. ಸುಶಾಂತ್ ಸಿಂಗ್ ರಜಪೂತ್ 2020ರ ಜೂನ್ 14 ರಂದು ಅವರ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕವಸ್ತು ಸಂಬಂಧಿತ ಆರೋಪದಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯನ್ನು ಅದೇ ವರ್ಷ ಸೆಪ್ಟೆಂಬರ್ 8 ರಂದು ನಾರ್ಕೋಟಿಕ್ಸ್ ಬ್ಯೂರೋ ಅರೆಸ್ಟಾ ಮಾಡಿತ್ತು. ಮುಂಬೈನ ಬೈಕುಲ್ಲಾ ಜೈಲಿನಲ್ಲಿ ರಿಯಾ ಅವರನ್ನು ಇರಿಸಲಾಗಿತ್ತು. ಒಂದು ತಿಂಗಳ ನಂತರ ರಿಯಾ ಜಾಮೀನಿನ ಮೇಲೆ ಹೊರಬಂದರು.