ಮುಂಬೈ: ಕೊರೋನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಕ್ಲಬ್‌ವೊಂದರಲ್ಲಿ ಮೋಜಿನಲ್ಲಿ ತೊಡಗಿದ್ದ ಕ್ರಿಕೆಟಿಗ ಸುರೇಶ್‌ ರೈನಾ, ಗಾಯಕ ಗುರು ರಾಂಧವಾ ಹಾಗೂ ನಟ ಹೃತಿಕ್‌ ರೋಷನ್‌ ಅವರ ಮಾಜಿ ಪತ್ನಿ ಸುಸಾನ್‌ ಖಾನ್‌ ಸೇರಿದಂತೆ ಒಟ್ಟಾರೆ 34 ಮಂದಿ ಮುಂಬೈ ಪೊಲೀಸರ ಅತಿಥಿಯಾಗಿದ್ದಾರೆ. ಕೊನೆಗೆ ಅವರೆಲ್ಲರನ್ನೂ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

ಕೊರೋನಾ ನಿಯಮಾವಳಿಗಳನ್ನು ಉಲ್ಲಂಘಿಸಿ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಡ್ರಾಗಾನ್‌ಫ್ಲೈ ಎಂಬ ಕ್ಲಬ್‌ನಲ್ಲಿ ಮೋಜು ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಈ ನೈಟ್‌ಕ್ಲಬ್‌ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಬಂಧಿತರಾದವರ ಪೈಕಿ 13 ಮಹಿಳೆಯರು ಹಾಗೂ 7 ಮಂದಿ ಸಿಬ್ಬಂದಿ ಸೇರಿದ್ದಾರೆ. ಅಲ್ಲದೆ ಪಾರ್ಟಿಯಲ್ಲಿ ದಿಲ್ಲಿ, ಪಂಜಾಬ್‌ ಸೇರಿದಂತೆ 19 ಸೆಲಿಬ್ರಿಟಿಗಳು ಭಾಗಿಯಾಗಿದ್ದರು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಸುರೇಶ್ ರೈನಾ ಆರೆಸ್ಟ್‌ ಬಗ್ಗೆ ಕೊನೆಗೂ ಸಿಕ್ತು ಸ್ಪಷ್ಟನೆ..! ಅಷ್ಟಕ್ಕೂ ಆಗಿದ್ದೇನು? 

ಇನ್ನು ರೈನಾ ಬಂಧನದ ಕುರಿತಾಗಿ ಅವರ ಪರ ಹೇಳಿಕೆ ಬಿಡುಗಡೆ ಆಗಿದ್ದು, ‘ಶೂಟ್‌ವೊಂದರ ನಿಮಿತ್ತ ಮುಂಬೈಗೆ ಬಂದಿದ್ದೆ. ಸ್ನೇಹಿತನ ಆಹ್ವಾನದ ಮೇರೆಗೆ ಈ ಪಾರ್ಟಿಗೆ ಬಂದಿದ್ದೆ. ಇಲ್ಲಿನ ನಿಯಮಾವಳಿಗಳ ಬಗ್ಗೆ ಗೊತ್ತಿಲ್ಲ’ ಎಂದು ತಿಳಿಸಲಾಗಿದೆ.