ಹಿರಿಯ ಸ್ಪಿನ್ನರ್, ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಭಿನಯದ ಸಿನಿಮಾ ಟೀಸರ್ ಔಟ್ | ಹೀರೋ ಆಗಿ ಮಿಂಚಿದ ಮಾಜಿ ಕ್ರಿಕೆಟರ್

ಭಾರತದ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಫ್ರೆಂಡ್ಶಿಪ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಮೂಲಕ ಹಿರಿಯ ಕ್ರಿಕೆಟರ್ ಅಭಿನಯ ನೋಡೋ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗಿದೆ.

ತಮ್ಮ ಸಿನಿಮಾ ಫ್ರೆಂಡ್ಶಿಪ್ ಟೀಸರ್ ಶೇರ್ ಮಾಡಿಕೊಂಡಿದ್ದಾರೆ ಹರ್ಭಜನ್. ಭಾರತದ ಹಿರಿಯ ಕ್ರಿಕೆಟರ್‌ನ ಮೊದಲ ಸಿನಿಮಾ ಇದು. ಮೂರು ಭಾಷೆಯಲ್ಲಿ ಸಿದ್ಧವಾದ ಸಿನಿಮಾದಲ್ಲಿ ಹರ್ಭಜನ್ ಸಿಂಗ್ನನ್ನು ನಟನಾಗಿ ನೋಡಲಿದ್ದಾರೆ ಜನ.

ತಮ್ಮ ಲುಕ್‌ನಿಂದ ಮೊದಲ ಸಲವೇ ರಿಜೆಕ್ಟ್ ಆದ ಟಾಪ್ ನಟಿಯರಿವರು

ಮಾಜಿ ಕ್ರಿಕೆಟರ್ ಸುರೇಶ್ ರೈನ ಟೀಸರ್ ಶೇರ್ ಮಾಡಿ, ಇದು ಎಪಿಕ್ ಭಜ್ಜು. ಪೂರ್ತಿ ಸಿನಿಮಾ ನೋಡಲು ಇನ್ನಷ್ಟು ಕಾಯಲಾರೆ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಹರ್ಭಜನ್ ಪತ್ನಿ ಮತ್ತು ನಟಿ ಗೀತಾ ಬಸ್ರಾ ತಾವೆಂದೂ ಹರ್ಭಜನ್ನ ಈ ಸೈಡ್ ನೋಡಲಿದ್ದೇನೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ. 
ಟೀಸರ್ ಪ್ರಾರಂಭವಾಗುವಲ್ಲಿ ಹರ್ಭಜನ್ ಸಿಂಗ್ ಚಿಕ್ಕ ಪ್ರಾಯದಲ್ಲಿ ಕಾಣಸಿದ್ದು ಕಾಲೇಜು-ಹೋಗುವವನು ಕೊನೆಗೆ ಕ್ರಿಕೆಟ್ ಮೂಲಕ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾನೆ. ಹರ್ಭಜನ್ ಫೈಟ್, ಜೈಲಿನಿಂದ ಬರುವುದನ್ನು ಕಾಣಬಹುದು.

Scroll to load tweet…