ಕೇರಳದಲ್ಲಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರನ್ನು ಕೇರಳ ಪೊಲೀಸರು ಪ್ರಶ್ನಿಸಿ ವಿಚಾರನೆ ನಡೆಸಿದ್ದಾರೆ. ಇವೆಂಟ್‌ನಲ್ಲಿ ಭಾಗವಹಿಸುವುದಾಗಿ 29 ಲಕ್ಷ ಪಡೆದು ವಂಚಿಸಿದ್ದಾರೆ ನಟಿಯ ವಿರುದ್ಧ ಕೇಸು ದಾಖಲಿಸಲಾಗಿದೆ. ಕೊಚ್ಚಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಟಿ ಹಣ ಪಡೆದಿದ್ದರು ಎಂದು ಆರೋಪಿಸಲಾಗಿದೆ.

ಕಳೆದ ಒಂದು ತಿಂಗಳಿನಿಂದ ಕೇರಳದಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿರುವ ಸನ್ನಿ ಲಿಯೋನ್ ಕೊರೋನಾ ವೈರಸ್‌ ಕಾರಣದಿಂದ ತಾನು ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕ್ಯೂಟ್ ಫೇಸ್ ಮಾತ್ರವಲ್ಲ, ನನ್ನಲ್ಲಿ ಸಿಕ್ಕಾಪಟ್ಟೆ ಸ್ಕಿಲ್ಸ್ ಇದೆ ಎಂದ ಸನ್ನಿ

ಪೆರುಂಬಾವೂರ್‌ನ ಆರ್. ರಿಯಾಸ್ ಎಂಬವರು ನಟಿಯ ವಿರುದ್ಧ ಕೇಸು ದಾಖಲಿಸಿದ್ದು, 29 ಲಕ್ಷದ ಕಾಂಟ್ರಾಕ್ಟ್ ಸಹಿ ಮಾಡಿದ್ದಾರೆ ಆರೋಪಿಸಿದ್ದಾರೆ. ಆದರೆ ನಟಿ 12 ಲಕ್ಷದ ಒಪ್ಪಂದ ಸಹಿ ಮಾಡಿದ್ದು, ಹಣ ಮರಳಿಸುವುದಾಗಿ ಭರವಸೆ ನೀಡಿದ್ದಾರೆ.

ಕೊಚ್ಚಿಯ ಈ ಕಾರ್ಯಕ್ರಮ ಐದನೇ ಬಾರಿ ಮುಂದೂಡಲ್ಪಡುತ್ತಿದೆ. ಆಯೋಜಕರಿಂದಲೇ ಈ ಕಾರ್ಯಕ್ರಮದ ವಿಳಂಬಕ್ಕೆ ಕಾರಣ ಎಂದು ಜನ ಹೇಳಿದ್ದು ನಟಿ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.