'ಪುಷ್ಪ' ಚಿತ್ರದ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲಿರುವ ಸನ್ನಿ ಲಿಯೋನಿ.  ಸೊಂಟ ಬಳುಕಿಸಲು ಹೇಳಿದ ಸಂಭಾವನೆ ಎಷ್ಟು ಗೊತ್ತಾ?

ಇಡೀ ಭಾರತೀಯ ಚಿತ್ರರಂಗ ಕಾಯುತ್ತಿರುವುದು 'ಪುಷ್ಪ' ಸಿನಿಮಾ ಬಿಡುಗಡೆಗಾಗಿ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಪುಷ್ಪ ಚಿತ್ರದ ಕೊನೆ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಐಟಂ ಸಾಂಗ್ ಒಂದರಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 

ರಶ್ಮಿಕಾ ಮಂದಣ್ಣಗೆ ದೊಡ್ಡ ಲಾಟರಿ; ಯಾರ ಜೊತೆ?

ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರ ಸ್ಪೆಷಲ್ ಹಾಡಿಗೆ ಸನ್ನಿ ಲಿಯೋನಿ ಸೊಂಟ ಬಳುಕಿಸಲು ಬರುತ್ತಿದ್ದಾರಂತೆ. ಈಗಾಗಲೆ ಸನ್ನಿ ಜೊತೆ ಒಂದು ರೌಂಡ್ ಮಾತುಕತೆ ನಡೆದಿದೆ, ಸಂಭಾವನೆ ವಿಚಾರದ ಬಗ್ಗೆ ಚರ್ಚೆ ಶುರುವಾಗಿದೆ. ಒಂದು ಸಿನಿಮಾ ಮಾಡುವುದಕ್ಕೂ ಒಂದು ಚಿತ್ರದಲ್ಲಿ ಗೆಸ್ಟ್‌ ಆಗಿ ಕಾಣಿಸಿಕೊಳ್ಳುವುದಕ್ಕೆ ಸಂಭಾವನೆ ಮೊತ್ತೆ ಬೇರೆ ಇರುತ್ತದೆ. ಸನ್ನಿ ಕೂಡ ಹಾಡಿಗೆ ಹೆಜ್ಜೆ ಹಾಕಲು 50 ಲಕ್ಷ ರೂಪಾಯಿ ಕೇಳಿದ್ದಾರೆ ಎನ್ನಲಾಗಿದೆ. 

ಕೆಲವು ತಿಂಗಳುಗಳ ಹಿಂದೆ ದಿಶಾ ಪಟಾಣಿ ಅಥವಾ ನೋರಾ ಫತೇಹಿ ಕಾಣಿಸಿಕೊಳ್ಳಬಹುದು ಎನ್ನುತ್ತಿದ್ದರು. ಸಂಭಾವನೆ ವಿಚಾರ ಫೈನಲೈಸ್ ಆದರೆ ಯಾವು ಸೊಂಟ ಬಳುಕಿಸುತ್ತಾರೆ ಎನ್ನುವುದು ಖಚಿತವಾಗುತ್ತದೆ. ಪುಷ್ಪ ಚಿತ್ರದಲ್ಲಿ ಕನ್ನಡದ ನಟಿ ಡಾಲಿ ಧನಂಜಯ್ ಕೂಡ ಅಭಿನಯಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ ಸಮಯದಲ್ಲಿ ಪುಷ್ಪ ಕೂಡ ಬಿಡುಗಡೆ ಮಾಡಲಾಗುತ್ತದೆ ಎಂಬ ಗಾಳಿ ಸುದ್ದಿ ಕೇಳಿ ಬರುತ್ತಿದೆ.