ಸೂಫಿಯುಂ ಸುಜಾತಾಯುಂ ಸಿನಿಮಾ ನಿರ್ದೇಶಕ ನಾರಣಿಪುಳ ಶಾನವಾಸ್ ಕೊಚ್ಚಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸೂಫಿಯುಂ ಸುಜಾತಯುಂ ನಾಯಕಿ ಅದಿತಿ ರಾವ್ ಹೈದರಿ ನಿರ್ದೇಶಕರನ್ನು ನೆನಪಿಸಿ ಭಾವುಕರಾಗಿದ್ದಾರೆ. ಅದಿತಿ ರಾವ್ ಹೈದರಿ ಅವರು ಇನ್‌ಸ್ಟಾಗ್ರಾಂನಲ್ಲಿ ನಾರಣಿಪುಳ ಶಾನವಾಸ್ ಕುಟುಂಬಕ್ಕೆ ಸಂತಾಪ ಸೂಚಿಸಿ ಭಾವನಾತ್ಮಕ ಮಾತುಗಳನ್ನು ಬರೆದಿದ್ದಾರೆ.

ಭಿನ್ನಬಾದ ಪ್ರಣಯ ಕಥೆಯೊಂದನ್ನು ನಿರ್ದೇಶಿಸಿದ ಶಾನವಾಸ್ ಅವರ ಸೂಫಿಯುಂ ಸುಜಾತಯುಂ ಸಿನಿಮಾ ಅಷ್ಟಾಗಿ ಹಿಟ್ ಆಗದಿದ್ದರೂ ಸಿನಿಮಾದ ಹೆಸರು ಭಾರೀ ವೈರಲ್ ಆಗಿತ್ತು. ಹೆಸರೇ ಸೂಚಿಸುವಂತೆ ಭಿನ್ನ ಧರ್ಮದ ಎರಡು ಮನಸುಗಳ ಪ್ರಣಯ ಕಥೆಯಾಗಿತ್ತದು.

ಮುಂಬೈ ಜನ ಬರೀ ಸುಳ್ ಹೇಳ್ತಾರೆ ಎಂಬ ಬಾಲಿವುಡ್ ಬ್ಯೂಟಿ

ಅವರ ಕಥೆಗಳಂತೆಯೇ ಕರುಣಾಮಯಿ ಮತ್ತು ಸೂಕ್ಷ್ಮ ವ್ಯಕ್ತಿ ಎಂದು ಆರಂಭಿಸಿದ ಆದಿತಿ, ರೆಸ್ಟ್‌ ಇನ್ ಪೀಸ್ ಶಾನವ ಸರ್.. ನಿಮ್ಮ ಸೂಫಿ ಆತ್ಮವು ಸುಫಿಯಮ್ ಸುಜಾತಾಯಂನಲ್ಲಿ ನೀವು ನಮಗಾಗಿ ರಚಿಸಿದಷ್ಟು ಸುಂದರವಾದ ಸ್ಥಳವನ್ನು ಕಂಡುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ತುಂಬಾ ಬೇಗ ಹೋದಿರಿ ಎಂದು ಬರೆದಿದ್ದಾರೆ.