Asianet Suvarna News Asianet Suvarna News

ಸುಶಾಂತ್ ಸಾವು ಸಿಬಿಐ ತನಿಖೆಯಾಗಲಿ, ಮೋದಿಗೆ ಅಭಿಪ್ರಾಯ ತಿಳಿಸಿದ ಸ್ವಾಮಿ

ಸುಶಾಂತ್ ಸಿಂಗ್ ಸಾವಿನ ಪ್ರಕರಣ/ ಸಿಬಿಐ ತನಿಖೆಯಾಗಲಿ ಎಂದ ಸುಬ್ರಮಣಿಯನ್ ಸ್ವಾಮಿ/ ತನಿಖೆ ಬೇಕೆ ಬೇಡವೇ ಎಂದು ಅಭಿಪ್ರಾಯ ಸಲ್ಲಿಸಲು ಹೇಳಿದ್ದ ಸರ್ಕಾರ/ 

Subramanian Swamy writes to PM Narendra Modi requesting CBI enquiry in Sushant Singh Rajput case
Author
Bengaluru, First Published Jul 16, 2020, 7:33 PM IST

ಮುಂಬೈ(ಜೂ.  16) ಬಾಲಿವುಡ್ ನಟ ಸುಶಾಂತ್ ಸಿಂಗ್ ಚಿತ್ರರಂಗ ಅಗಲಿ ತಿಂಗಳೂ ಕಳೆದಿದೆ.  ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆ ಅಲ್ಲ, ಇದೊಂದು ಕೊಲೆ ಎಂದು ಅಭಿಮಾನಿಗಳು ಮತ್ತು ಸುಶಾಂತ್ ಕುಟುಂಬದವರು ಹೇಳಿಕೊಂಡೆ ಬಂದಿದ್ದರು. ಸುಶಾಂತ್ ಸಾವಿನ ತನಿಖೆ ಸಿಬಿಐನಿಂದ ಆಗಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

ಈ ಕಾರಣಕ್ಕೆ ಹಿರಿಯ ವಕೀಲ ಸುಬ್ರಮಣಿಯನ್ ಸ್ವಾಮಿ ಅವರಿಗೆ ಈ ಸಾವಿನ ತನಿಖೆ ಸಿಬಿಐಗೆ ನೀಡಬೇಕೆ ಅಥವಾ ಬೇಡವೇ ಎಂದು ತಿಳಿಸಲು ಹೇಳಲಾಗಿತ್ತು.  ಇದೀಗ ಸ್ವಾಮಿ ತಮ್ಮ ಅಭಿಪ್ರಾಯ ಸಲ್ಲಿಸಿದ್ದಾರೆ. ಸುಶಾಂತ್ ಸಿಂಗ್ ಸಾವು ಸಿಬಿಐ ತನಿಖೆಯಾಗಲಿ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಸುಶಾಂತ್ ಸಾವು; ಸಲ್ಮಾನ್, ಕರಣ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ

ಜನರಿಂದ ಸಿಬಿಐ ತನಿಖೆ ಒತ್ತಾಯ ಕೇಳಿಬಂದಿತ್ತು. ಸುಶಾಂತ್ ಸಾವಿಗೆ ಸಿಬಿಐ ತನಿಖೆ ಅಗತ್ಯವಿದೆಯೇ ಎಂಬ ವಿಚಾರಕ್ಕೆ ಸಂಬಂಧಿಸಿ ತನಿಖೆ ಮುಂದುವರಿಸಲು ಸುಬ್ರಮಣಿಯನ್ ಸ್ವಾಮಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತ್ತು.

ಮುಂಬೈನ ತಮ್ಮ ನಿವಾಸದಲ್ಲಿ ಸುಶಾಂತ್ ಸಿಂಗ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರು ಇದನ್ನು ಆತ್ಮಹತ್ಯೆ ಎಂದು ತಿಳಿಸಿದ್ದರು. 

 

Follow Us:
Download App:
  • android
  • ios