ನಟಿ ಸನ್ನಿ ಲಿಯೋನ್ ಮತ್ತು ನಟ ಇಮ್ರಾನ್ ಹಶ್ಮಿ ಉತ್ತರ ಬಿಹಾರದವರಾಗಿದ್ದು, ಇಬ್ಬರೂ ಮದುವೆಯಾಗಿ 20 ವರ್ಷದ ಮಗ ಕಾಲೇಜಿನಲ್ಲಿ ಕಲಿಯುತ್ತಿದ್ದಾನೆ ಎಂದರೆ ನೀವು ನಂಬುತ್ತೀರಾ..? ನೀವೇನು, ಯಾರೂ ನಂಬಲ್ಲ ಬಿಡಿ.

ಇಲ್ಲೊಬ್ಬ 20 ವರ್ಷದ ಕಾಲೇಜು ವಿದ್ಯಾರ್ಥಿ ಎಕ್ಸಾಮ್ ಹಾಲ್‌ಟಿಕೆಟ್‌ನಲ್ಲಿ ಅಪ್ಪ ಅಮ್ಮನ ಹೆಸರಿನ ಜಾಗದಲ್ಲಿ ಸನ್ನಿ ಮತ್ತು ಇಮ್ರಾನ್ ಹೆಸರು ಬರೆದಿಟ್ಟಿದ್ದಾನೆ. ಭೀಮ್ ರಾವ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾನಿಲಯದ ಬಿಎ ಎರಡನೇ ವರ್ಷದ ವಿದ್ಯಾರ್ಥಿಯ ಹಾಲ್‌ಟಿಕೆಟ್‌ನಲ್ಲಿ ಈ ರೀತಿ ಬರೆಯಲಾಗಿದೆ.

'ಇಷ್ಟೊಂದ್ ಕಮ್ಮಿ ಅಲ್ಲ': 5 BHK ಮನೆಯ ಬೆಲೆ ರಿವೀಲ್ ಮಾಡಿದ ನವ ವರ

ಇದೀಗ ಹಾಲ್‌ಟಿಕೆಟ್ ಸೋಷಿಯಲ್ ಮೀಡಿಯಾ ತುಂಬಾ ವೈರಲ್ ಆಗಿದೆ. ವಿದ್ಯಾರ್ಥಿ ಕುಂದನ್ ಕುಮಾರ್ ಈ ರೀತಿ ಮಾಡಿದ ಯುವಕ. ರೆಡ್‌ಲೈಟ್ ಏರಿಯಾ ಆಗಿರುವ ಛತುರ್ಭುಜ ಸ್ಥಾನ್‌ ಅನ್ನು ವಿಳಾಸದಲ್ಲಿ ಬರೆದು ಪುಂಡಾಟ ಮಾಡಿದ್ದಾನೆ ವಿದ್ಯಾರ್ಥಿ.

ನಾವು ತನಿಖೆಗೆ ಆದೇಶಿಸಿದ್ದೇವೆ. ಇದು ನಿಸ್ಸಂಶಯವಾಗಿ ಒಂದು ಕಿಡಿಗೇಡಿತನ. ವಿಚಾರಣೆಯ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ರಾಮ್ ಕೃಷ್ಣ ಠಾಕೂರ್ ತಿಳಿಸಿದ್ದಾರೆ.