ನಟಿ ಪ್ರಿಯಾಂಕಾ ಚೋಪ್ರಾ ಅವರ ನ್ಯೂಯಾರ್ಕ್ ರೆಸ್ಟೋರೆಂಟ್ ಸೋನಾ ಸ್ನೇಹಿತರು ಮತ್ತು ಕುಟುಂಬದಿಂದ ವಿಮರ್ಶೆಗಳನ್ನು ಪಡೆಯುತ್ತಿದ್ದಾರೆ. ರೆಸ್ಟೋರೆಂಟ್‌ನ ಒಳಾಂಗಣಗಳು ಮತ್ತು ಸೂಕ್ಷ್ಮವಾದ ಆಹಾರದ ಹೊಸ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ.

ಪ್ರಿಯಾಂಕಾ ತನ್ನ ಸ್ನೇಹಿತ ಮನೀಶ್ ಗೋಯಲ್ ಅವರೊಂದಿಗೆ ರೆಸ್ಟೋರೆಂಟ್ ಪ್ರಾರಂಭಿಸಿದ್ದಾರೆ. ಪ್ರಿಯಾಂಕಾ ಅವರ ಅತ್ತಿಗೆ, ಡೇನಿಯಲ್ ಜೊನಾಸ್ ಮತ್ತು ಅವರ ಸಹೋದರಿ ದಿನಾ ಡೆಲಿಯಾಸಾ-ಗೊನ್ಸಾರ್ ಸಹ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ.

ಅರ್ಜುನ್‌ ರೆಡ್ಡಿಯ ರೊಮ್ಯಾಂಟಿಕ್ ನಟನಿಗೆ ವಯಸ್ಸಾದಂತೆ ಅನಿಸ್ತಿದ್ಯಂತೆ: ಕಾರಣ ?

ಇಬ್ಬರ ಫೋಟೋವನ್ನು ಶೇರ್ ಮಾಡಿದ ದಿನಾ, ಪ್ರಿಯಾಂಕಾ ಚೋಪ್ರಾ ಅವರಿಗೆ ಚೀರ್ಸ್ ಮತ್ತು ನಿಜವಾದ ರುಚಿಕರವಾದ ಹೊಸ ಸಾಹಸ ಎಂದು ಬರೆದಿದ್ದಾರೆ.

ಇಬ್ಬರು ತಮ್ಮ ಪಾನೀಯಗಳನ್ನು ಹಿಡಿದುಕೊಂಡು ರುಚಿಕರವಾದ ಆಹಾರವನ್ನು ತೋರಿಸುತ್ತಿದ್ದಾರೆ. ರೆಸ್ಟೋರೆಂಟ್‌ನ ಮೆನುವಿನಲ್ಲಿರುವ ಆಹಾರದ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಪಿಗ್ಗಿ ಧರಿಸಿದ ಒಂದೇ ತೋಳಿನ ಡ್ರೆಸ್‌ ಬೆಲೆಗೆ ಗೇಮಿಂಗ್ ಲ್ಯಾಪ್‌ಟಾಪ್ ಸಿಗ್ಬೋದು

ಮಾವಿನ ಪ್ಯಾಶನ್ ಪಾನಕ, ಸೋನಾ ಚಾಕೊಲೇಟ್ ಗೇಟಾಕ್ಸ್, ಟಕಿಲಾ ತುಂಬಿದ ಗೋಲ್ ಗಪ್ಪಾಸ್, ಏಡಿ ಪುರಿ ಮತ್ತು ಕ್ಯಾವಿಯರ್, ಅರಿಶಿನ ಎಡಮಾಮೆ ಮ್ಯಾಶ್ ಮತ್ತು ತೆಂಗಿನಕಾಯಿ ಚಟ್ನಿ ಮತ್ತು ಚೆಡ್ಡಾರ್ ದೋಸೆ ಮತ್ತು ಹೆಚ್ಚಿನವುಗಳಿವೆ.

ಪ್ರಿಯಾಂಕಾ ಅವರ ಅನೇಕ ಉದ್ಯಮಗಳಲ್ಲಿ ರೆಸ್ಟೋರೆಂಟ್ ಒಂದಾಗಿದೆ. ಅವರು ಪರ್ಪಲ್ ಪೆಬಲ್ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ ಅನ್ನು ಹೊಂದಿದ್ದಾರೆ. ಅನೋಮಲಿ ಎಂಬ ಹೇರ್‌ಕೇರ್ ಪ್ರಾಡಕ್ಟ್ ಬ್ರಾಂಡ್ ಹೊಂದಿದ್ದಾರೆ. ಇತ್ತೀಚೆಗೆ ತನ್ನ ಪುಸ್ತಕ ಅನ್ಫಿನಿಶ್ಡ್ ಕೂಡಾ ಬಿಡುಗಡೆ ಮಾಡಿದ್ದಾರೆ. ಡೇಟಿಂಗ್ ಅಪ್ಲಿಕೇಶನ್ ಬಂಬಲ್ನದಲ್ಲಿಯೂ ಪಾಲುದಾರಿಕೆ ಇದೆ.