Asianet Suvarna News Asianet Suvarna News

Saami Saami Viral Video: ರಶ್ಮಿಕಾಳ ಸಾಮಿ ಡ್ಯಾನ್ಸ್ ಮಾಡಿದ ಸ್ಪೈಡರ್‌ ಮ್ಯಾನ್..!

  • ಪುಷ್ಪಾ ಸಿನಿಮಾದ ಸಾಮಿ ಸಾಮಿ ಹಾಡು ವೈರಲ್
  • ರಶ್ಮಿಕಾಳನ್ನು ನೋಡಿ ಹೆಜ್ಜೆ ಹಾಕಿದ ಸ್ಪೈಡರ್ ಮ್ಯಾನ್
Spider Man and Santas dancing to Saami Saami from Allu Arjuns Pushpa dpl
Author
Bangalore, First Published Jan 11, 2022, 6:50 PM IST

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ(Rashmika Mandanna) ಅಭಿನಯದ ಪುಷ್ಪಾ ದಿ ರೈಸ್ ಸಿನಿಮಾದ ಯಶಸ್ಸು ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ. ಬಾಲಿವುಡ್(Bollywood) ತಾರೆಗಳಿಂದ ಹಿಡಿದು ಎಲ್ಲರೂ ಸಿನಿಮಾವನ್ನು ಹೊಗಳುತ್ತಿದ್ದಾರೆ. ಉತ್ತಮ ವಿಮರ್ಶೆ ಮಾತ್ರವಲ್ಲ ಸಖತ್ ಕಲೆಕ್ಷನ್ ಕೂಡಾ ಮಾಡಿರೋ ಸಿನಿಮಾ 2021ರ ಹಿಟ್ ಬಾಕ್ಸ್‌ ಆಫೀಸ್ ಸಿನಿಮಾಗಳಲ್ಲಿ ನಂಬರ್ 1 ಸ್ಥಾನದಲ್ಲಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ₹326 ಕೋಟಿ ಗಳಿಸಿದೆ, 2021 ರಲ್ಲಿ ಬಿಡುಗಡೆಯಾದ ಎಲ್ಲಾ ಭಾರತೀಯ ಚಲನಚಿತ್ರಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ಆದರೆ ಇತ್ತೀಚಿನ ವೀಡಿಯೋ ನಂಬುವುದಾದರೆ ಸೂಪರ್ ಹೀರೋಗಳು ಸಹ ಪುಷ್ಪಾ ಕ್ರೇಝ್‌ಗೆ ಒಳಗಾಗಿದ್ದಾರೆ.

ಅಲ್ಲು ಅರ್ಜುನ್ ಅವರ ಕಿರಿಯ ಸಹೋದರ ನಟ ಅಲ್ಲು ಸಿರೀಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಸ್ಪೈಡರ್ ಮ್ಯಾನ್ ವೇಷಧಾರಿ ವ್ಯಕ್ತಿಯೊಬ್ಬರು ಚಿತ್ರದ ಹಿಟ್ ಸಾಂಗ್ ಸಾಮಿ ಸಾಮಿಯಿಂದ ರಶ್ಮಿಕಾ ಅವರ ಹೆಜ್ಜೆ ಹಾಕಿ ಎಂಜಾಯ್ ಮಾಡುವುದನ್ನು ಕಾಣಬಹುದು. ಈ ವಿಡಿಯೋ ಶೂಟ್ ಮಾಡದ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೆಲವು ಜನರು ಮುಂಭಾಗದಲ್ಲಿ ಸಾಂಟಾ ಟೋಪಿಗಳನ್ನು ಧರಿಸಿ, ಸ್ಪೈಡರ್ ಮ್ಯಾನ್ ಜೊತೆಗೆ ನೃತ್ಯ ಮಾಡುವುದನ್ನು ಕಾಣಬಹುದು. ಮಲಯಾಳಂ ಹಾಡನ್ನು ರಾರಾ ಸಾಮಿ ಟ್ಯೂನ್‌ಗೆ ಬರೆದು ಹಾಡಿರುವಂತೆ ಕೇಳಿ ಬರುತ್ತಿದೆ, ಬಹುಶಃ ಇದು ಕೇರಳದ ಯಾವುದಾದರೂ ಭಾಗದಲ್ಲಿ ಕ್ರಿಸ್ಮಸ್ ಥೀಮ್ ಪಾರ್ಟಿಯಾಗಿರುವ ಸಾಧ್ಯತೆಯೂ ಇದೆ. ಆದರೆ ಈ ಬಗ್ಗೆ ಸ್ಪಷ್ಟನೆ ಇಲ್ಲ.

ಶ್ರೀವಲ್ಲಿಯಾಗಿ ಸಾನ್ವಿಯ ಬೋಲ್ಡ್ ಲುಕ್, ಹೇಗಿದೆ ?

ಅಲ್ಲು ಅರ್ಜುನ್ ಮತ್ತು ಸ್ಪೈಡರ್ ಮ್ಯಾನ್ ಇಬ್ಬರ ಅಭಿಮಾನಿಯಾಗಿ ನಾನು ವೀಡಿಯೊವನ್ನು ಆನಂದಿಸಿದ್ದೇನೆ ಎಂದು ಅಲ್ಲು ಸಿರಿಶ್ ಹೇಳಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಾರೆ, ಸ್ಪೈಡರ್‌ಮ್ಯಾನ್ ರಾರಾ ಸಾಮಿಗೆ ಪುಷ್ಪದ ಹಾಡಿನೊಂದಿಗೆ ತನ್ನ ಯಶಸ್ಸನ್ನು ಆಚರಿಸುತ್ತಿದ್ದಾರೆ.  AA & Spidey ಅವರ ಅಭಿಮಾನಿಯಾಗಿ.. ವಾಹ್! ಯೇ ಇಂಡಿಯಾ ಹೇ ಬಾಸ್  @ಸ್ಪೈಡರ್ ಮ್ಯಾನ್ ಒಳ್ಳೆಯ ಕೆಲಸ ಸ್ನೇಹಿತ ಎಂದಿದ್ದಾರೆ.

ಕಳೆದ ವರ್ಷ ಡಿಸೆಂಬರ್ 17 ರಂದು ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಪುಷ್ಪಾ ದಿ ರೈಸ್ ಬಿಡುಗಡೆಯಾಯಿತು. ಪ್ರಾಸಂಗಿಕವಾಗಿ, ಇತ್ತೀಚಿನ ಮಾರ್ವೆಲ್ ಬ್ಲಾಕ್ಬಸ್ಟರ್ ಸ್ಪೈಡರ್ ಮ್ಯಾನ್ ನೋ ವೇ ಹೋಮ್ ಕೂಡ ಅದೇ ವಾರಾಂತ್ಯದಲ್ಲಿ ಬಿಡುಗಡೆಯಾಯಿತು. ಎರಡೂ ಚಿತ್ರಗಳು ಭಾರತ ಮತ್ತು ವಿದೇಶಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದೆ.

ಚಿತ್ರದ ಹಿಂದಿ ಆವೃತ್ತಿಯು ಇಲ್ಲಿಯವರೆಗೆ ಸುಮಾರು ₹ 80 ಕೋಟಿ ಗಳಿಸಿದೆ, ಸಲ್ಮಾನ್ ಖಾನ್ ಅವರ ಆಂಟಿಮ್ ದಿ ಫೈನಲ್ ಟ್ರುತ್ ಗಳಿಕೆಯನ್ನೂ ಮೀರಿಸಿದೆ. ಹಿಂದಿ ಬೆಲ್ಟ್‌ನಲ್ಲಿ ಚಿತ್ರದ ಜನಪ್ರಿಯತೆಯಿಂದಾಗಿ, ಅಲ್ಲು ಅರ್ಜುನ್ ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಬಗ್ಗೆ ಸಾಕಷ್ಟು ಊಹಾಪೋಹಗಳು ಇದ್ದವು. ಅದರ ಬಗ್ಗೆ ಮಾತನಾಡುತ್ತಾ, ನಟ ಇತ್ತೀಚೆಗೆ ಸುದ್ದಿ ಸಂಸ್ಥೆ ಪಿಟಿಐಗೆ ತಾನು ಚಿತ್ರದ ನಾಯಕನಾಗಿದ್ದರೆ ಮಾತ್ರ ಬಾಲಿವುಡ್ ಆಫರ್ ಅನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನನಗೆ ಪ್ರಸ್ತಾಪವಿದೆ ಆದರೆ ಕಾಂಕ್ರೀಟ್ ಅಥವಾ ಉತ್ತೇಜಕ ಏನೂ ಇಲ್ಲ. ಶೀಘ್ರದಲ್ಲೇ ಇದು ನಡೆಯಲಿದೆ ಎಂದಿದ್ದಾರೆ. ನಾವು ಮಾಡುವ ಚಿತ್ರಗಳಲ್ಲಿ ನಾವು ನಾಯಕರಾಗಿರುವಾಗ, ನಮ್ಮ ಬಳಿಗೆ ಬರುವ ಯಾರಾದರೂ ನಾಯಕನಾಗಿ ನಟಿಸುವ ಪ್ರಸ್ತಾಪದೊಂದಿಗೆ ಬರುತ್ತಾರೆ ಎಂದಿದ್ದಾರೆ.

ಬಾಲಿವುಡ್ ನಿರ್ದೇಶಕ  ಕರಣ್ ಜೋಹರ್ (Karan Johar) ದಕ್ಷಿಣ ಭಾರತದ (South India) ಸಿನಿಮಾಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ( Allu Arjun)ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಪುಷ್ಪಾ (Pushpa)ಸಿನಿಮಾದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.' ಕೊರೋನಾ ನಂತರದ ಸಂದರ್ಭದಲ್ಲಿ ಹಿಂದಿ (Bollywood) ಸಿನಿಮಾಗಳೇ ಉತ್ತಮವಾಗಿ ಓಡುತ್ತಿಲ್ಲ. ಆದರೆ ಈ ನಡುವೆ ತೆಲುಗು  ಸಿನಿಮಾಗಳು ಸದ್ದು ಮಾಡುತ್ತಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲು ಅರ್ಜುನ್  ಪುಷ್ಪಾ ಚಿತ್ರದ ಯಶಸ್ಸನ್ನು ಕರಣ್ ಉಲ್ಲೇಖ ಮಾಡಿದರು.  ಕಮರ್ಷಿಯಲ್ ಆಗಿ ತೆಲುಗು ಚಿತ್ರರಂಗ ಸಾಧನೆ  ಮಾಡುತ್ತಿದೆ ಎಂದರು. ವಿಶೇಷ ಪ್ರಮೋಶನ್ ಮಾಡಲಿಲ್ಲ, ಪೋಸ್ಟರ್ ಗಳನ್ನು ಹಂಚಲಿಲ್ಲ ಆದರೂ ಪುಷ್ಪಾ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಕೊಂಡಾಡಿದರು. ಟ್ರೇಲರ್ ಮೂಲಕವೇ  ಚಿತ್ರ ಸದ್ದು ಮಾಡಿತು.  ನೀವು ಈ ಸಿನಾರಿಯೋವನ್ನು ಹಿಂಬಾಲಿಲೇಬೇಕು.  ಇದನ್ನೇ ಪಾನ್ ಇಂಡಿಯಾ ಕ್ರೇಜ್ ಎಂದು ಕರೆಯಬಹುದು ಎಂದಿದ್ದಾರೆ. 
 

Follow Us:
Download App:
  • android
  • ios