ರಾಜ್‌ ಕುಂದ್ರಾ ಅಶ್ಲೀಲ ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ನಟಿ ಪ್ರಕರಣದಲ್ಲಿ ಕೇಳಿ ಬರುತ್ತಿದೆ ಫ್ಲೋರಾ ಸೈನಿ ಹೆಸರು..!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಜೀವನದಲ್ಲಿ ಬಿರುಗಾಳಿ ಎಬ್ಬಿಸಿರುವ ಅವರ ಪತಿ ರಾಜ್ ಕುಂದ್ರಾ ಅವರ ನೀಲಿ ಚಿತ್ರ ವಿಡಿಯೋ ಸಂಬಂಧ ಈಗಾಗಲೇ 9ಕ್ಕೂ ಹೆಚ್ಚು ಜನರನ್ನು ಬಂಧಿಸಿ ಆಗಿದೆ. ಪೂನಂ ಪಾಂಡೆ ಸೇರಿ ಬಹಳಷ್ಟು ನಟಿಯರ ಹೆಸರು ಘಟನೆಯಲ್ಲಿ ಕೇಳಿ ಬಂದಿದೆ.

ಇದೀಗ ಸ್ಯಾಂಡಲ್‌ವುಡ್ ನಟಿ ಫ್ಲೋರಾ ಸೈನಿ ಹೆಸರು ಈ ಘಟನೆಯಲ್ಲಿ ಕೇಳಿ ಬಂದಿದೆ. ನಮ್ಮಣ್ಣ, ಕೋದಂಡರಾಮ ಸೇರಿ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ ಸೌತ್ ತಾರೆಯ ಹೆಸರು ಪ್ರಕರಣದ ಜೊತೆ ತಳಕು ಹಾಕಿದೆ.

ರೈಡ್ ವೇಳೆ ಪತಿ ಮೇಲೆ ರೇಗಾಡಿದ ಶಿಲ್ಪಾ ಶೆಟ್ಟಿ: ಕುಂದ್ರಾ ದಂಪತಿ ಜಗಳ ಬಿಡಿಸಿದ ಪೊಲೀಸರು

ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ನಟಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಉಮೇಶ್ ಕಾಮತ್ ಮತ್ತು ಕುಂದ್ರ ನಡುವಿನ ಚಾಟ್‌ನಲ್ಲಿ ಸೈನಿ ಹೆಸರು ಚರ್ಚೆಯಾಗಿದ್ದೇ ಈ ಬೆಳವಣಿಗೆಗೆ ಕಾರಣವಾಗಿದೆ. ಅಂತೂ ನಟಿ ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟ ತನಗೆ ಈ ವ್ಯಕ್ತಿಗಳ ಜೊತೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

View post on Instagram
View post on Instagram