ನವೆಂಬರ್ 12ರಂದು ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಿ ನಟ ಸೂರ್ಯ ಸಿನಿಮಾ ಸೂರರೈ ಪೊಟ್ರು ವೀಕ್ಷಕರ ಪ್ರೀತಿ ಗಿಟ್ಟಿಸಿಕೊಂಡಿದೆ. ಕ್ಯಾಪ್ಟನ್ ಗೋಪಿನಾಥ್ ಜೀವನಾಧಾರಿತ ಈ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ರಿಲೀಸ್ ಮಾಡಲಾಗಿತ್ತು. ಕೆಲವು ಮೂಲಗಳ ಪ್ರಕಾರ ಸಿನಿಮಾ ಹಾಕಿರುವ ಬಂಡವಾಳಕ್ಕೂ 3 ಪಟ್ಟು ಹೆಚ್ಚು ಪಡೆದುಕೊಂಡಿದೆ ಎನ್ನಲಾಗಿದೆ. 

'ಸೂರರೈ ಪೋಟ್ರು' ಸಿನಿಮಾ ನೋಡಿ ಸೂರ್ಯಗೆ ಭೇಷ್ ಎಂದ ಕಿಚ್ಚ ಸುದೀಪ್! 

ಸೂರರೈ ಪ್ರೊಟು ಚಿತ್ರಕ್ಕೆ ನಟ ಸೂರ್ಯ 25 ಕೋಟಿ ಸಂಭಾವನೆ ಪಡೆದುಕೊಂಡಿದ್ದರು ಹಾಗೂ ಚಿತ್ರ ನಿರ್ಮಾಣಕ್ಕೆ 20 ಕೋಟಿ ರೂ. ಹಾಕಲಾಗಿತ್ತು. ಒಟ್ಟು 45 ಕೋಟಿ ವೆಚ್ಚದ ಈ ಸಿನಿಮಾ ಈಗಾಗಲೇ ಸನ್‌‌ನೆಟ್‌ವರ್ಕ್‌ ಅವರಿಗೆ ಟಿವಿ ರೈಟ್ಸ್ ಮಾರಾಟ ಮಾಡಿ, 15 ಕೋಟಿ ಹಾಗೂ ಅಮೇಜಾನ್ ಪ್ರೈಮ್‌ಗೆ ಮಾರಾಟ ಮಾಡಿದ 45-50 ಕೋಟಿ ರೂ. ಪಡೆದಿದೆ ಎನ್ನಲಾಗಿದೆ. 

ಗೋಪಿನಾಥ್‌ ಬಯೋಪಿಕ್ 'ಸೂರರೈ ಪೋಟ್ರು' ಚಿತ್ರದ ಬೊಮ್ಮಿ ಯಾರು ಗೊತ್ತಾ? 

ಸಿನಿಮಾ ರಿಲೀಸ್ ಆದ 24 ಗಂಟೆಗಳಲ್ಲಿಯೇ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಚಿತ್ರದಲ್ಲಿ ಸೂರ್ಯ ಜೊತೆ  ಅಪರ್ಣಾ, ಪರೇಶ್ ರಾವತ್, ಊರ್ವಶಿ, ಪ್ರಕಾಶ್ ಬೆಳವಾಡಿ, ಜಾಕಿ ಶ್ರಾಫ್, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ.  ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿರುವ ಕಾರಣ ಚಿತ್ರತಂಡ ಪ್ರತಿಯೊಬ್ಬ ಕಲಾವಿದರಿಗೂ ಹಾಗೂ ವೀಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.