ಸೋನು ಸೂದ್‌ಗೆ ಸೈಫ್ ಅಲಿ ಖಾನ್ ಮಗಳ ಸಪೋರ್ಟ್ | ಕೊರೋನಾ ವಿರುದ್ಧ ಕೈಜೋಡಿಸಿದ ನಟಿ

COVID 19 ಮಧ್ಯೆ, ಸಾರಾ ಅಲಿ ಖಾನ್ ತನ್ನ ಸೋಷಿಯಲ್ ಮೀಡಿಯಾ ಬಳಸಿ ಸಹಾಯಕ್ಕಾಗಿ ಕರೆ ನೀಡುತ್ತಿದ್ದಾರೆ. ಸೋನು ಸೂದ್ ಅವರನ್ನು ತನ್ನ ಪೋಸ್ಟ್‌ಗಳಲ್ಲಿ ಟ್ಯಾಗ್ ಮಾಡುತ್ತಿದ್ದಾರೆ. ಈಗ ಸೋನು ಕಷ್ಟದ ಸಮಯದ ಮಧ್ಯೆ ತನ್ನ ಫೌಂಡೇಷನ್‌ಗೆ ಸಾರಾ ನೀಡಿದ ಕೊಡುಗೆಗಾಗಿ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ, ಸಾರಾ ಅಲಿ ಖಾನ್ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ COVID 19 ಎರಡನೇ ಅಲೆಯ ನಡುವೆ ಸಹಾಯಕ್ಕಾಗಿ ಸಕ್ರಿಯವಾಗಿ ಕರೆಕೊಡುತ್ತಿದ್ದಾರೆ. ಎಲ್ಲದರಲ್ಲೂ ಸೋನು ಸೂದ್ ಅವರನ್ನು ಟ್ಯಾಗ್ ಮಾಡುತ್ತಿದ್ದಾರೆ.

ಒಂದೇ ದಿನದಲ್ಲಿ 3ವರೆ ಕೋಟಿಗೂ ಹೆಚ್ಚು ಸಂಗ್ರಹಿಸಿದ ವಿರುಷ್ಕಾ

ಸಿಂಬಾ ನಟಿ ತನ್ನ ಸಾಮಾಜಿಕ ಮಾಧ್ಯಮ ವ್ಯಾಪ್ತಿಯನ್ನು ಬಳಸಿಕೊಂಡು ಭಾರತದಲ್ಲಿ ಪ್ರಸ್ತುತ ಕೊರೋನಾ ಎರಡನೇ ಅಲೆಯ ಮಧ್ಯೆ ಸಂಪನ್ಮೂಲಗಳ ಅಗತ್ಯವಿರುವವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸೋನು ಯುವ ನಟಿ ತನ್ನ ಫೌಂಡೇಷನ್‌ಗೆ ನೀಡಿದ ಕೊಡುಗೆಗಾಗಿ ವಿಶೇಷ ಧನ್ಯವಾದ ಹೇಳಿದ್ದಾರೆ.

Scroll to load tweet…

ಸೋನು ಸಾರಾಗೆ ಥ್ಯಾಂಕ್ಸ್ ಹೇಳಿ, ಸೂದ್ ಫೌಂಡೇಶನ್‌ಗೆ ನೀವು ನೀಡಿದ ಕೊಡುಗೆಗಾಗಿ ನನ್ನ ಪ್ರೀತಿಯ ಸಾರಾ ಅಲಿ ಖಾನ್‌ಗೆ ಧನ್ಯವಾದಗಳು! ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ. ಒಳ್ಳೆಯ ಕೆಲಸವನ್ನು ಮಾಡುತ್ತಲೇ ಇರಿ. ಈ ಕಷ್ಟದ ಸಮಯದಲ್ಲಿ ರಾಷ್ಟ್ರದ ಯುವಕರು ಮುಂದೆ ಬಂದು ಸಹಾಯ ಮಾಡಲು ನೀವು ಪ್ರೇರೇಪಿಸಿದ್ದೀರಿ. ನೀವು ಹೀರೋ ಎಂದು ಬರೆದಿದ್ದಾರೆ.