ಸ ರಿ ಗ ಮ ಪ... ಸೋನು ನಿಗಮ್ ದನಿಯ ಮೋಡಿಯಲ್ಲಿ ಕಂದಮ್ಮ: ಕ್ಯೂಟ್ ವಿಡಿಯೋ ವೈರಲ್
ಪುಟಾಣಿ ಕಂದಮ್ಮನನ್ನು ಕೈಯಲ್ಲಿ ಹಿಡಿದು ಸ ರಿ ಗ ಮ ಪ ಸಂಗೀತ ಸ್ವರ ಸೋನು ನಿಗಮ್ ಹಾಡುತ್ತಿದ್ದಂತೆಯೇ ಭಾವಪರವಶವಾದ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ...
ಭಾರತೀಯ ಶಾಸ್ತ್ರೀಯ ಸಂಗೀತ ಲೋಕವೇ ವಿಶಿಷ್ಟವಾದದ್ದು. ಇದು ಕೇವಲ ಶ್ರೋತೃಗಳ ಹೃನ್ಮನ ತಣಿಸುವುದು ಮಾತ್ರವಲ್ಲದೇ, ಪ್ರಾಚೀನ ಕಾಲದಿಂದಲೂ ದೇಹ ಮತ್ತು ಮನಸ್ಸಿನ ಹಲವು ಕಾಯಿಲೆಗಳನ್ನು ವಾಸಿ ಮಾಡುವ ಚಿಕಿತ್ಸಕ ಶಕ್ತಿ ಇದಕ್ಕಿದೆ. ಕೆಲವು ರಾಗಗಳನ್ನು ಹಾಡುವ ಮೂಲಕ ಎಷ್ಟೋ ಕಾಯಿಲೆಗಳನ್ನು ವಾಸಿ ಮಾಡಿರುವ ಉದಾಹರಣೆಗಳೂ ಇವೆ. ಗಿಡಗಳ ಬೆಳವಣಿಗೆಯಲ್ಲಿಯೂ ಶಾಸ್ತ್ರೀಯ ಸಂಗೀತಕ್ಕೆ ಇರುವ ಶಕ್ತಿಯ ಬಗ್ಗೆ ಇದಾದಲೇ ಸಾಕಷ್ಟು ಅಧ್ಯಯನಗಳೂ ನಡೆದಿವೆ. ಸಂಗೀತ ಚಿಕಿತ್ಸೆ ಎನ್ನುವುದು ಕೂಡ ಸಾಕಷ್ಟು ಹೆಸರುವಾಸಿಯಾಗಿದೆ. ಮೇಘಮಲ್ಹಾರ್ನಂಥ ರಾಗಗಳನ್ನು ಹಾಡುವ ಮೂಲಕ ಮಳೆಯನ್ನು ತರಿಸುವ ಶಕ್ತಿಯೂ ಶಾಸ್ತ್ರೀಯ ಸಂಗೀತಕ್ಕೆ ಇದೆ ಎಂದರೆ ಅದರ ವಿಶೇಷತೆಗಳ ಬಗ್ಗೆ ಹೇಳಬೇಕಾಗಿಲ್ಲ.
ಶಾಸ್ತ್ರೀಯ ರಾಗಗಳ ಭಾವಪೂರ್ಣ, ಲಯಬದ್ಧ ರಾಗಗಳು ಮೆದುಳು, ಹೃದಯ, ನರಮಂಡಲ, ರಕ್ತ ಪರಿಚಲನೆ, ಚಯಾಪಚಯ ಮತ್ತು ಮನಸ್ಸಿನ ಸ್ಥಿತಿಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ, ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಒಂದಿಲ್ಲೊಂದು ಸಂಗೀತವನ್ನು ಸವಿಯುವವರೇ. ಚಿಕ್ಕಮಕ್ಕಳನ್ನು ನಿದ್ದೆ ಮಾಡಿಸುವಾಗಲೂ ಲಾಲಿ ಹಾಡು ಹಾಡುವುದು ಅದಕ್ಕೇ ಅಲ್ಲವೆ? ಸಂಗೀತ ಕಲೆ ಎಲ್ಲರಿಗೂ ಒಲಿದು ಬರುವುದಿಲ್ಲ. ಕಲಾ ಸರಸ್ವತಿಯನ್ನು ಒಲಿಸಿಕೊಳ್ಳುವುದೂ ಸುಲಭದ ಮಾತಲ್ಲ. ಆದರೆ ಕೆಲವರಿಗೆ ಇದು ಹುಟ್ಟಿನಿಂದಲೇ ಬಂದಿರುತ್ತದೆ. ರಕ್ತಗತವಾಗಿಯೂ ಸಂಗೀತ ಕಲೆ ಒಲಿಯುವುದು ಸಹಜ ಎನ್ನುವುದಕ್ಕೆ ಈಗ ವೈರಲ್ ಆಗುತ್ತಿರುವ ಒಂದು ಕ್ಯೂಟ್ ವಿಡಿಯೋನೇ ಕಾರಣ.
ಮಿಸ್ ವರ್ಲ್ಡ್ ಟಾಪ್ 8ಗೆ ಏರಿದ ಕನ್ನಡತಿ ಸಿನಿ ಶೆಟ್ಟಿಗೆ ಆತ್ಮೀಯ ಸ್ವಾಗತ: ಜಸ್ಟ್ ಮಿಸ್ಗೆ ಕಣ್ಣೀರಾದ ಸುಂದರಿ
ಹೌದು. ಈ ವಿಡಿಯೋದಲ್ಲಿ ಸಂಗೀತ ಮಾಂತ್ರಿಕ ಸೋನು ನಿಗಮ್ ಅವರ ಕುಟುಂಬ ಅತ್ಯಂತ ಕಿರಿಯ ಸದಸ್ಯ ಎಂದೇ ಎನಿಸಿಕೊಂಡಿರುವ ಅವ್ಯಾನ್ ಯಾದವ್ ವಿಡಿಯೋ ಸಕತ್ ಸೌಂಡ್ ಮಾಡುತ್ತಿದೆ. ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡಿ ಜನಮನ ಗೆದ್ದಿರುವ ಸೋನು ನಿಗಮ್ ಅವರ ಬಗ್ಗೆ ಬೇರೆ ಹೇಳಬೇಕಾಗಿಯೇ ಇಲ್ಲ. ಇವರು ಹಾಡಿದ ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು ಹಾಡಾಗಲೀ, ರಾಮ್ ಚಿತ್ರದ ನೀನೆಂದರೆ ನನಗೆ ಇಷ್ಟ ಕಣೋ ಹಾಡಾಗಲೀ, ಮೊಗ್ಗಿನ ಮನಸ್ಸು ಚಿತ್ರದ ಐ ಲವ್ ಯೂ ಹಾಡಾಗಲೀ... ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.
ಇದೀಗ ಸೋನು ನಿಗಮ್ ಅವರು ಪುಟಾಣಿ ಅವ್ಯಾನ್ ಯಾದವ್ನನ್ನು ಕೈಯಲ್ಲಿ ಹಿಡಿದುಕೊಂಡು ಸ ರಿ ಗ ಮ ಪ ಸಂಗೀತ ಸ್ವರ ಹೇಳಿದ್ದಾರೆ. ಸಂಗೀತ ಕುಟುಂಬದ ಕುಡಿಯಾಗಿರುವ ಈ ಪುಟಾಣಿಗೆ ಅದ್ಯಾವ ಪರಿಯಲ್ಲಿ ಸರಿಗಮಪ ಮೋಡಿ ಮಾಡಿದೆ ಎನ್ನುವುದು ಆ ಮಗುವಿನ ಭಾವನೆ, ಅದರ ಹಾವಭಾವ ನೋಡಿಯೇ ಆನಂದಿಸಬೇಕು. ಸ ರಿ ಗ ಮ ಪ ಸಂಗೀತ ಸ್ವರಕ್ಕೆ ಮಗುವಿನ ಪ್ರತಿಕ್ರಿಯೆಯನ್ನು ರೆಕಾರ್ಡ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ ಸೋನು ನಿಗಮ್. ಅಂದಹಾಗೆ ಸೋನು ನಿಗಮ್ ಕೂಡ ಬಾಲ್ಯದಿಂದಲೇ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟವರು. ಅವರ ಈ ಯಶಸ್ಸಿನ ಹಾದಿಯೂ ಸುಲಭವೇನೂ ಆಗಿರಲಿಲ್ಲ. ಕಠಿಣ ಪರಿಶ್ರಮ ಮತ್ತು ಹೋರಾಟದ ಫಲವಾಗಿ ಇಂದು ಅವರು ಈ ಸ್ಥಾನಕ್ಕೇರಿದ್ದಾರೆ. ಸೋನು ನಿಗಮ್ ಅವರ ತಂದೆ 'ಕ್ಯಾ ಹುವಾ ತೇರಾ ವಾದ' ಹಾಡನ್ನು ವೇದಿಕೆಯಲ್ಲಿ ಹಾಡುತ್ತಿದ್ದರು. ಹೇಳಿದ್ದರು. ಆಗ ಅವರನ್ನು ನೋಡಿ ನಾನೂ ಹಾಡುತ್ತೇನೆ ಎಂದು ಸೋನು ಅಳಲು ತೋಡಿಕೊಂಡರು. ಆಗ ತಂದೆ ಸೋನುವಿನ ತಾಯಿಗೆ ಕಣ್ಣು ತೋರಿಸಿ ಬಾಯಿ ಮುಚ್ಚುವಂತೆ ಕೇಳಿದರು.ಆಗ ಜನರು ಅವನು ಮಗು, ಅವನು ಹಾಡಲಿ ಎಂದು ಹೇಳಿದರು. ಇದಾದ ನಂತರ ಸೋನು ಸ್ಟೇಜ್ ಮೇಲೆ ಹೋಗಿ ತಂದೆಯೊಂದಿಗೆ ಹಾಡನ್ನು ಹಾಡಿದ್ದು ಎಲ್ಲರಿಗೂ ತುಂಬಾ ಇಷ್ಟವಾಗಿತ್ತು. ಅಪ್ಪ-ಅಮ್ಮ ಗುರುತಿಸಿದ ಟ್ಯಾಲೆಂಟ್ ತಮ್ಮಲ್ಲಿ ಎಳವೆಯಲ್ಲಿಯೇ ಇದ್ದ ಬಗ್ಗೆ ಸಂದರ್ಶನವೊಂದರಲ್ಲಿ ಸೋನು ನಿಗಮ್ ಹೇಳಿಕೊಂಡಿದ್ದರು.
ಈ ಬಾರಿಯೂ ಆಸ್ಕರ್ ವೇದಿಕೆ ಮೇಲೆ ಮಿಂಚಿದ ನಾಟು ನಾಟು! RRRಗೆ ಸಂದಿತು ವಿಶೇಷ ಗೌರವ