Asianet Suvarna News Asianet Suvarna News

ಮಿಲ್ಖಾ ಸಿಂಗ್ ಸಿನಿಮಾದಲ್ಲಿ 11 ಕೋಟಿ ರಿಜೆಕ್ಟ್ ಮಾಡಿದ ಸೋನಂ: ರೀಸನ್ ?

  • ಭಾಗ್ ಮಿಲ್ಕಾ ಭಾಗ್ ಸಿನಿಮಾದಲ್ಲಿ ನಟಿಸಿದ್ದ ಸೋನಂ ಕಪೂರ್
  • 11 ಕೋಟಿ ಸಂಭಾವನೆ ಆಫರ್ ಮಾಡಿದ್ರು ಬೇಡ ಎಂದಿದ್ದೇಕೆ ಸೋನಂ ?
Sonam Kapoor was offered just Rs 11 for her role in Bhaag Milkha Bhaag dpl
Author
Bangalore, First Published Aug 8, 2021, 4:39 PM IST
  • Facebook
  • Twitter
  • Whatsapp

ಬಾಲಿವುಡ್‌ನ ಬಹಳಷ್ಟು ಸೆಲೆಬ್ರಿಟಿಗಳು ಸಿನಿಮಾ ಮಾಡೋಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಇತ್ತೀಚೆಗಷ್ಟೇ ಕರೀನಾ ಕಪೂರ್, ಸಮಂತಾ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಾಗ ಭಾರೀ ಸುದ್ದಿಯಾಗಿದ್ದರು. ಡಿಮ್ಯಾಂಡ್ ಇಟ್ಟು ಸಂಭಾವನೆ ಪಡೆಯುವಂತಹ ಸ್ಥಿತಿಯಲ್ಲಿದ್ದರೂ ಸೋನಂ ಕಪೂರ್ ಸಿನಿಮಾ ಒಂದಕ್ಕಾಗಿ ಆಫರ್ ಮಾಡಲಾಗಿದ್ದ 11 ಕೋಟಿ ರೂಪಾಯಿಗೆ ನೋ ಹೇಳಿದ್ದಾರೆ. ಸಿನಿಮಾಗಾಗಿ 11 ಕೋಟಿ ನೀಡಲು ಚಿತ್ರತಂಡ ಸಿದ್ಧವಿದ್ದರೂ ಬೇಡ ಎಂದಿದ್ದರು ಸೋನಂ ಕಪೂರ್.

ಸಿನಿ ಇಂಡಸ್ಟ್ರಿಯಲ್ಲಿ ನಟರು ಮತ್ತು ನಟಿಯರು ಡೇಟ್ಸ್ ಫ್ರೀ ಇದ್ದರೂ ಸ್ಟೋರಿ ಇಷ್ಟವಾದರೂ ಸಂಭಾವನೆ ವಿಚಾರದಲ್ಲಿ ಒಪ್ಪಿಗೆಯಾಗದೆ ಸಿನಿಮಾಗೆ ಸೈನ್ ಮಾಡಲು ನಿರಾಕರಿಸಿದ ಉದಾಹರಣೆಗಳಿವೆ. ಸಂಭಾವನೆ ನಿರೀಕ್ಷೆಯಂತೆ ಇರಲಿಲ್ಲ. ಆದರೂ ನಟರು ಸಂತೋಷದಿಂದ ತಮ್ಮ ಸಂಭಾವನೆ ಕಡಿಮೆ ಮಾಡಿದ ಅಥವಾ ಅವರು ನಂಬಿದ ಯೋಜನೆಯನ್ನು ಬೆಂಬಲಿಸಲು ಅಥವಾ ಚಲನಚಿತ್ರ ನಿರ್ಮಾಪಕರೊಂದಿಗಿನ ವೈಯಕ್ತಿಕ ಸಂಬಂಧದಿಂದ ಉಚಿತವಾಗಿ ಕೆಲಸ ಮಾಡಿದ ಉದಾಹರಣೆಗಳೂ ಇವೆ. ರಾಕೀಶ್ ಓಂಪ್ರಕಾಶ್ ಮೆಹ್ರಾ ಅವರು ತಮ್ಮ ಆತ್ಮಚರಿತ್ರೆಯಾದ 'ದಿ ಸ್ಟ್ರೇಂಜರ್ ಇನ್ ದಿ ಮಿರರ್' ನಲ್ಲಿ ಈ ಅಂಶದ ಬಗ್ಗೆ ಮಾತನಾಡಿದ್ದಾರೆ.

ಸೋನಂ ಕಪೂರ್ ಗರ್ಭಿಣಿಯಾ ? ಮತ್ತೆ ಶುಂಠಿ ಟೀ ಕುಡಿದಿದ್ದೇಕೆ ?

ರಾಕೇಶ್ ಅವರು ದೆಹಲಿ -6 (2009) ಅನ್ನು ನಿರ್ದೇಶಿಸಿದ್ದರು. ಇದಕ್ಕಾಗಿ ಸೋನಮ್ ಕಪೂರ್ ಚಿತ್ರದ ಪ್ರಮುಖ ನಟಿಯಾಗಿ ಸಹಿ ಹಾಕಿದ್ದರು. ನಿರ್ಮಾಪಕ ರಾಕೇಶ್ ತನ್ನ ಮುಂದಿನ ಭಾಗ್ ಮಿಲ್ಖಾ ಭಾಗ್ (2013) ಗಾಗಿ ಸೋನಂ ಅವರನ್ನು ಸಂಪರ್ಕಿಸಿದರು. ಅವರು ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮಿಲ್ಖಾ ಸಿಂಗ್ ಅವರ ಕಾಲ್ಪನಿಕ ಗೆಳತಿಯಾಗಿ ಕಾಣಿಸಿದ್ದಾರೆ.

ಸೋನಂ ಕಪೂರ್ ರೂ. 11 ಕ್ಕೆ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡರು. ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರು ಚಿತ್ರದಲ್ಲಿ ಕಾಣಿಸಿಕೊಂಡಾಗಲೆಲ್ಲಾ ಅವರು ಪ್ರೇಕ್ಷಕರ ಹಿಡಿದಿಟ್ಟಿದ್ದಾರೆ. ಸೋನಮ್ ಕೂಡ ಚಿತ್ರದ ಬಗ್ಗೆ ಒಳ್ಳೆಯ ನೆನಪುಗಳನ್ನು ಹೊಂದಿದ್ದಾರೆ ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರಮುಖ ನಟಿಯರು ಅತಿಥಿ ಪಾತ್ರ ಒಪ್ಪುವುದಿಲ್ಲ. ಆದ್ದರಿಂದ ರಾಕೇಶ್ ಅವರು ನಟಿಯನ್ನು ಹೊಗಳಿದ್ದಾರೆ. ಈ ಚಿತ್ರವು ಪ್ರೇಮಕಥೆಯಲ್ಲ ಎಂದು ಸೋನಂ ಅರ್ಥಮಾಡಿಕೊಂಡರು. ಇದು ವಿಭಜನೆ ಸಂದರ್ಭ ಬದುಕುಳಿದವರ ಭಯಾನಕ ಬಾಲ್ಯದ ಚಿತ್ರಣ ತೆರೆದಿಡುವ ಪ್ರಯತ್ನವಾಗಿತ್ತು ಎಂದಿದ್ದಾರೆ.

Follow Us:
Download App:
  • android
  • ios