ಸೋನಂ ಕಪೂರ್‌ಗೆ 4 ತಿಂಗಳು ಅದಿಕ್ಕೆ ಎಲ್ಲಿಯೂ ಕಾಣಿಸಿಕೊಂಡಿಲ್ಲ, ಆಪ್ತರಿಂದ ಅಪ್ಡೇಟ್!
ಬೇಬಿ ಬಂಪ್ ಫೇಸ್ ಎಂಜಾಯ್ ಮಾಡುತ್ತಿರುವ ಸೋನಂ. ಇಡೀ ಬಾಲಿವುಡ್‌ಗೆ ಸರ್ಪ್ರೈಸ್ ಕೊಟ್ಟ ಚೆಲುವೆ....
ಬಾಲಿವುಡ್ ನಟಿಯರು ಪ್ರೆಗ್ನೆನ್ಸಿ ವಿಚಾರವನ್ನು ಆರಂಭದಲ್ಲಿ ತುಂಬಾನೇ ಗುಟ್ಟು ಮಾಡುತ್ತಾರೆ. ತಮ್ಮ ಸುತ್ತ ಇರುವ ಪ್ಯಾಪರಾಜಿಗಳನ್ನು ಆದಷ್ಟು ರಿಕ್ವೆಸ್ಟ್ ಮಾಡಿಕೊಳ್ಳುತ್ತಾರೆ, ಪ್ರೈವಸಿ ಬೇಡುತ್ತಾರೆ. ಇನ್ನೂ ಕೆಲವರು ವಿದೇಶದಲ್ಲಿ ಇದ್ದು ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಾರೆ. ಈ ಲಿಸ್ಟ್‌ನಲ್ಲಿರುವ ನಟಿ ಸೋನಂ ಕಪೂರ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರೆಗ್ನೆನ್ಸಿ ವಿಚಾರವನ್ನು ತುಂಬಾನೇ ಡಿಫರೆಂಟ್ ಆಗಿ ರಿವೀಲ್ ಮಾಡಿದ್ದಾರೆ. ಫೋಟೋ ಶೂಟ್ ಯಾಕೆ? ಬಿಕಿನಿ ಧರಿಸಿ ತಾಯಿ ಆಗುತ್ತಿರುವ ಎಂದು ಹೇಳಬಹುದು myth ಬ್ರೇಕ್ ಮಾಡಿದ್ದಾರೆ.
ನಾಲ್ಕು ಕೈಗಳು ಸೇರಿಕೊಂಡು ನಿನಗೆ ಅದ್ಭುತವಾಗ ಜೀವನ ರೂಪಿಸಲು ರೆಡಿಯಾಗಿದೆ. ಎರಡು ಹೃದಯಗಳು ಸೇರಿಕೊಂಡು ನಿನ್ನ ಹೃದಯದ ಬಡಿತವಾಗಲಿದೆ.ಒಂದು ಫ್ಯಾಮಿಲಿ. ನಿನ್ನ ಜೀವನ ಪೂರ್ತಿ ತುಂಬಾನೇ ಪ್ರೀತಿ ಮತ್ತು ಸಪೋರ್ಟ್ ನೀಡುತ್ತದೆ. ನಿನ್ನನ್ನು ಬರ ಮಾಡಿಕೊಳ್ಳಲು ಕಾಯುತ್ತಿರುವೆವು' ಎಂದು ಸೋನಂ ಬರೆದುಕೊಂಡು ಪತಿ ಬೇಬಿ ಬಂಪ್ ಮೇಲೆ ಕೈ ಇಟ್ಟುಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ v ಶೇಪ್ ಬಿಕಿನಿಯಲ್ಲಿ ಸೋನಂ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಲಂಡನ್‌ನಲ್ಲಿ ಇಬ್ಬರು ವಾಸವಿರುವ ಕಾರಣ ಯಾರನ್ನೂ ಭೇಟಿ ಮಾಡಲು ಆಗಿಲ್ಲ ಎಂದು ತಿಳಿದು ಬಂದಿದೆ.
'ಸೋನಂ ಕಪೂರ್ ಈಗ ನಾಲ್ಕು ತಿಂಗಳ ಗರ್ಭಿಣಿ ಬಹುಷಾ ಆಗಸ್ಟ್ ತಿಂಗಳಿನಲ್ಲಿ ಮಗು ಆಗಮನ ಆಗಲಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಹೊರಗಡೆ ಕಾಣಿಸಿಕೊಂಡಿರಲಿಲ್ಲ ಕಾರಣ ಇದೇ ಆಗಿತ್ತು. ಸ್ನೇಹಿತರು ಮತ್ತು ಕೆಲವು ಸಂಬಂಧಿಕರಿಗೆ ಇದರ ಬಗ್ಗೆ ಸಣ್ಣ ಸುಳಿವು ಇತ್ತು ಆದರೆ ಯಾರಿಗೂ ಕನ್ಫರ್ಮ್ ಮಾಡಿರಲಿಲ್ಲ. ಇವತ್ತು ಈ ಫೋಸ್ಟ್ ಮೂಲಕ ಎಲ್ಲರಿಗೂ ಕನ್ಫರ್ಮ್ ಮಾಡಿದ್ದಾರೆ' ಎಂದು ಸೋನಂ ಆಪ್ತರೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ತಾಯಿಯಾಗುತ್ತಿದ್ದಾರೆ ಸೋನಂ ಕಪೂರ್, ಬಿಕಿನಿ ಧರಿಸಿ ಬೇಬಿ ಬಂಪ್ ತೋರಿಸಿದ ನಟಿ!ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಮೇ 18, 2018ರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2015ರಲ್ಲಿ ಪ್ರೇಮ್ ರತನ್ ಧನ್ ಪಾಯೋ ಸಿನಿಮಾ ಪ್ರಚಾರದ ವೇಳೆ ಆನಂದ್‌ನ ಮೊದಲು ಭೇಟಿ ಮಾಡಿದಂತೆ. 'ನನ್ನ ಸ್ನೇಹಿತರು ಸೇರಿಕೊಂಡು ಆನಂದ್ ಬೆಸ್ಟ್ ಫ್ರೆಂಡ್ ಜೊತೆ ಜೋಡಿ ಮಾಡುವುದಕ್ಕೆ ಪ್ಲ್ಯಾನ್ ಮಾಡುತ್ತಿದ್ದರು. ನಾನು ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದೆ ಆಗ ಆನಂದ್‌ನ ಭೇಟಿ ಮಾಡಿದೆ. ನನ್ನ ಸ್ನೇಹಿತರು ತಾಜ್‌ನಲ್ಲಿರುವ ಬಾರ್‌ನಲ್ಲಿ ಭೇಟಿ ಮಾಡುವುದಕ್ಕೆ ಹೇಳಿದ್ದರು. ಆಗ ನನ್ನ ಸ್ನೇಹಿತರು ಆನಂದ್ ಮತ್ತು ಇನ್ನಿಬ್ಬರು ಸ್ನೇಹಿತರನ್ನು ಕರೆದಿದ್ದರು. ಅವರನ್ನು ಭೇಟಿ ಮಾಡುವುದಕ್ಕೆ ಚೂರು ಇಷ್ಟವಿರಲಿಲ್ಲ. ಆಗ ನನಗೆ ಈ ಮದುವೆ ಎಲ್ಲಾ ಇಷ್ಟ ಇರಲಿಲ್ಲ ಪ್ರೀತಿಯಲ್ಲಿ ನಂಬಿಕೆ ಇರಲಿಲ್ಲ' ಎಂದು ಫಿಲ್ಮಂ ಫೇರ್ ಜೊತೆ ಸೋನಂ ತಮ್ಮ ಪ್ರೀತಿ ವಿಚಾರ ಹಂಚಿಕೊಂಡಿದ್ದರು.
ನಟಿ ಸೋನಂ ಕಪೂರ್ ಮಾವನಿಗೆ 27 ಕೋಟಿ ವಂಚನೆ: ರಾಯಚೂರು ವ್ಯಕ್ತಿ ಅರೆಸ್ಟ್'ಆನಂದ್ ಸ್ನೇಹಿತರು ನನ್ನ ರೀತಿ ಎತ್ತರ ಇದ್ದಾರೆ ಹಾಗೇ ಹಿಂದಿ ಸಿನಿಮಾ ಇಷ್ಟ ಪಡುತ್ತಾರೆ. ಅವರನ್ನು ನೋಡಿದರೆ ನನಗೆ ನನ್ನ ಸಹೋದರ ಹರ್ಷ ನೆನಪಾಗುತ್ತಾನೆ ಅದಿಕ್ಕೆ ಇಲ್ಲ ಆಗೋಲ್ಲ ಎಂದು ರಿಜೆಕ್ಟ್ ಮಾಡಿದೆ. ಕೆಲವು ಹೇಳುತ್ತಾರೆ ಇಬ್ಬರಿಗೂ ಒಂದೇ ಗುಣ ಇದ್ದರೆ ಒಟ್ಟಿಗೆ ಜೀವನ ಮಾಡಬಹುದು ಎಂದು ಆದರೆ ಆನಂದ್ ಮತ್ತು ನಾನು ತುಂಬಾನೇ ಡಿಫರೆಂಟ್. ನನ್ನ ತಂದೆ ಅನಿಲ್ ಕಪೂರ್ ಎಂದು ಆತನಿಗೆ ಗೊತ್ತಿರಲಿಲ್ಲ. ನಾನು ಆನಂದ್ ಜೊತೆ ಮಾತನಾಡಲು ಪ್ರಯತ್ನಿಸುತ್ತಿದೆ ಆದರೆ ಆನಂದ್ ಅವರ ಫ್ರೆಂಡ್‌ಗೆ ನನ್ನ ಜೊತೆ ಮಾತನಾಡಲು ಹೇಳುತ್ತಿದ್ದರು' ಎಂದು ಸೋನಂ ಹೇಳಿದ್ದರು.