ಸೋನಂ ಕಪೂರ್ ಮನೆಯಲ್ಲಿ ಕಳ್ಳತನ; Rs 1.41 ಕೋಟಿ, ಚಿನ್ನಾಭರಣ ಕಳವು

ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ದಂಪತಿ ಮೊದಲ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಸಂತೋಷದಲ್ಲಿದ್ದ ಜೋಡಿಗೆ ಕಳ್ಳಲು ಶಾಕ್ ಮಾಡಿದ್ದಾರೆ. ಸೋನಂ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ.

Sonam Kapoor-Anand Ahuja New Delhi residence robbed cash and jewellery stolen

ಬಾಲಿವುಡ್ ಖ್ಯಾತ ನಟಿ ಸೋನಂ ಕಪೂರ್(Sonam Kapoo) ಮತ್ತು ಆನಂದ್ ಅಹುಜಾ(Anand Ahuja) ಸದ್ಯ ಮೊದಲ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಸೋನಂ ಕಪೂರ್ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿದ್ದರು. ಸೋನಂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಸಹ ಪಡೆದಿದ್ದರು. ಸಂತೋಷದಲ್ಲಿದ್ದ ಜೋಡಿಗೆ ಕಳ್ಳರು ಶಾಕ್ ನೀಡಿದ್ದಾರೆ. ಸೋನಂ- ಆನಂದ್ ದಂಪತಿಯ ದೆಹಲಿ ಮನೆಯನ್ನು ದರೋಡೆ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ದರೋಡೆಕೋರರು ಮನೆಯಲ್ಲಿದ್ದ ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ಹಣ ಕದ್ದು ಪರಾರಿಯಾಗಿದ್ದಾರೆ(Delhi residence robbed cash and jewellery stolen). ಈ ಬಗ್ಗೆ ಸೋನಂ ಕಪೂರ್ ಅವರ ಅತ್ತೆ ತುಘಲಕ್ ರಸ್ತೆಯಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸೋನಂ ಮತ್ತು ಅಹುಜಾ ದಂಪತಿಯ ದೆಹಲಿ ಮನೆಯಲ್ಲಿ 1.41 ಕೋಟಿ ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹೈ ಪ್ರೊಫೈಲ್ ಪ್ರಕರಣವನ್ನು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಕೈಗೆ ತೆಗೆದುಕೊಂಡಿದ್ದು ತನಿಖೆಗೆ ವಿಶೇಷ ತಂಡ ರಚಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ದೆಹಲಿ ಮನೆಯಲ್ಲಿ ಆನಂದ್ ಅಹುಜಾ ತಂದೆ ಹರೀಶ್, ತಾಯಿ ಪ್ರಿಯಾ ಅಹುಜಾ, ಅಜ್ಜಿ ಸರಳಾ ಅಹುಜಾ ವಾಸವಾಗಿದ್ದರು ಎನ್ನಲಾಗಿದೆ. ಸೋನಂ ಕಪೂರ್ ಸದ್ಯ ತನ್ನ ತಂದೆ ಮನೆ ಮುಂಬೈನಲ್ಲಿರುವ ಅನಿಲ್ ಕಪೂರ್ ಮನೆಯಲ್ಲಿದ್ದಾರೆ.

ಈ ಕಾರಣಕ್ಕೆ ಟ್ರೋಲ್‌ ಆದ Sonam Kapoor ಪತಿ Anand Ahuja!

ಸದ್ಯ ಪೊಲೀಸರು ತನಿಖೆ ಪ್ರಾರಂಭಾಡಿದ್ದು, ಆನಂದ್ ಮನೆಯ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಚಾಲಕರು, ತೋಟಗಾರರು ಮತ್ತು ಇತರ ಕಾರ್ಮಿಕರು ಸೇರಿ ಒಟ್ಟು 25 ಮಂದಿಯನ್ನು ವಿಚಾರಣೆ ಮಾಡುತ್ತಿದ್ದಾರೆ. ತನಿಖೆ ಮುಂದುವರೆದಿದ್ದು ಇನ್ನು ಆರೋಪಿಗಳು ಪತ್ತೆಯಾಗಿಲ್ಲ. ಫೆಬ್ರವರಿ 11ರಂದೇ ಕಳ್ಳವಾಗಿದ್ದು ಫೆಬ್ರವರಿ 23ರಂದು ಪ್ರಕರಣ ದಾಖಲಾಗಿದೆ ಎನ್ನುವುದು ಬಹಿರಂಗವಾಗಿದೆ. ಹೈ ಪ್ರೊಫೈಲ್ ಪ್ರಕರಣ ಆಗಿದ್ದರಿಂದ ಮುಚ್ಚಿಡಲಾಗಿತ್ತು ರಹಸ್ಯವಾಗಿ ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಆದರೆ ಇದುವರೆಗೂ ಕಳ್ಳರ ಸುಳಿವು ಸಿಕ್ಕಿಲ್ಲ.

ಬಿಳಿ ಸೀರೆಯಲ್ಲಿ ಮಹಾರಾಣಿ ಆಗಿ ಕಾಣಿಸಿಕೊಂಡ ಗರ್ಭಿಣಿ ಸೋನಂ ಕಪೂರ್!

ಅಂದಹಾಗೆ ಇತ್ತೀಚಿಗಷ್ಟೆ ಸೋನಂ ಕಪೂರ್ ಅವರ ಮಾವ ಹರೀಶ್ ಅಹುಜಾ 27 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಲಾಗಿತ್ತು

ಗರ್ಭಿಣಿ ಸೋನಂ ಕಪೂರ್ ಸೀರೆ ಫೋಟೋಶೂಟ್

ಸೋನಂ ಕಪೂರ್ ಇತ್ತೀಚಿಗಷ್ಟೆ ಸೀರೆಯಲ್ಲಿ ಮಹಾರಾಣಿಯಾಗಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂದಹಾಗೆ ಸೋನಂ ಮತ್ತು ಆನಂದ್ ಇಬ್ಬರು ಪ್ರೀತಿಸಿ ಮದುವೆಯಾದವರು. ನಾಲ್ಕು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಸೋನಂ ಮತ್ತು ಆನಂದ್ ಇಬ್ಬರು 2018ರಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇತ್ತೀಚಿಗಷ್ಟೆ ಅಂದರೆ ಮಾರ್ಚ್ ತಿಂಗಳಲ್ಲಿ ಸೋನಂ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗ ಪಡಿಸಿದ್ದರು. ಸದ್ಯ 5 ತಿಂಗಳ ಗರ್ಭಿಣಿ ಸೋನಂ ಮುಂಬೈನ ತನ್ನ ತವರು ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.

Latest Videos
Follow Us:
Download App:
  • android
  • ios