ಆಮಿರ್ ಖಾನ್ ಚಿತ್ರ ಸಿತಾರೆ ಜಮೀನ್ ಪರ್ ಕೆಲವೇ ದಿನಗಳಲ್ಲಿ ನಿಮ್ಮ ಟಿವಿಗೆ ಬರಲಿದೆ. ನೀವು ಸಿನಿಮಾವನ್ನು ಯಾವ ಪ್ಲಾಟ್ ಫಾರ್ಮ್ ನಲ್ಲಿ ನೋಡ್ಬಹುದು, ಅದಕ್ಕೆ ಎಷ್ಟು ಹಣ ಪಾವತಿ ಮಾಡ್ಬೇಕು ಎಂಬೆಲ್ಲ ಡಿಟೇಲ್ಸ್ ಇಲ್ಲಿದೆ.
ಬಾಲಿವುಡ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ (Aamir Khan), ಸಿತಾರೆ ಜಮೀನ್ ಪರ್ (Sitare Zameen Par) ಸಿನಿಮಾಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ನಿರ್ಧಾರ ಬಾಲಿವುಡ್ ದಿಕ್ಕನ್ನು ಬದಲಿಸಿದೆ. ಥಿಯೇಟರ್ ಗೆ ಹೋಗಿ ಸಿನಿಮಾ ನೋಡೋಕೆ ಬೇಸರ ಎನ್ನುವವರು ಇಲ್ಲ ಕೆಲ್ಸದಲ್ಲಿ ಬ್ಯುಸಿ ಇರುವವರಿಗೆ ಕಡಿಮೆ ದರದಲ್ಲಿ ಸಿನಿಮಾ ವೀಕ್ಷಣೆ ಮಾಡಲು ಆಮಿರ್ ಖಾನ್ ಅವಕಾಶ ಮಾಡಿಕೊಟ್ಟಿದ್ದಾರೆ. ಆಮಿರ್ ಖಾನ್ ಅಭಿನಯದ ಸಿತಾರೆ ಜಮೀನ್ ಪರ್ ಸಿನಿಮಾ ಯುಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.
ಸಿತಾರೆ ಜಮೀನ್ ಪರ್ ಸಿನಿಮಾ ಯೂಟ್ಯೂಬ್ ನಲ್ಲಿ ಯಾವಾಗ ಬಿಡುಗಡೆ ಆಗಲಿದೆ? : ಸಿತಾರೆ ಜಮೀನ್ ಪರ್ ಸಿನಿಮಾ ಬಗ್ಗೆ ಮಾತನಾಡಿದ ಆಮಿರ್ ಖಾನ್, ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಲ್ಲಿ ಅದನ್ನು ಯೂಟ್ಯೂಬ್ ಗೆ ಬಿಡೋದಾಗಿ ಹೇಳಿದ್ದಾರೆ. ಆಗಸ್ಟ್ ಒಂದರಿಂದ ಸಿನಿಮಾ ಯುಟ್ಯೂಬ್ ನಲ್ಲಿ ಲಭ್ಯವಾಗಲಿದೆ. ಸಿನಿಮಾ ಯಾವುದೇ ಒಟಿಟಿಯಲ್ಲಿ ಬಿಡುಗಡೆ ಆಗ್ತಿಲ್ಲ. ಪ್ರೇಕ್ಷಕರು ಯೂಟ್ಯೂಬ್ ನಲ್ಲಿ ಮಾತ್ರ ಈ ಸಿನಿಮಾ ವೀಕ್ಷಣೆ ಮಾಡುವ ಅವಕಾಶವಿದೆ.
ಯೂಟ್ಯೂಬ್ ನಲ್ಲಿ ಸಿನಿಮಾ ವೀಕ್ಷಣೆ ಮಾಡಲು ಎಷ್ಟು ಹಣ ನೀಡ್ಬೇಕು? : ಸಿತಾರೆ ಜಮೀನ್ ಪರ್ ಸಿನಿಮಾ ವಿಶ್ವದ ಮೂಲೆ ಮೂಲೆಯಲ್ಲಿರುವ ಜನರಿಗೆ ತಲುಪಲಿ ಎನ್ನುವುದು ಅಮೀರ್ ಉದ್ದೇಶ. ಕಡಿಮೆ ಬೆಲೆಗೆ ವೀಕ್ಷಕರು ಸಿನಿಮಾ ನೋಡ್ಲಿ ಎನ್ನುವ ಕಾರಣಕ್ಕೆ ಅಮೀರ್ ಖಾನ್ ಸಿನಿಮಾವನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡ್ತಿದ್ದಾರೆ. ನೀವೂ ಮನೆಯಲ್ಲಿರುವ ಸ್ಮಾರ್ಟ್ ಟಿವಿಯಲ್ಲಿ ಇಲ್ಲ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸಿನಿಮಾ ವೀಕ್ಷಣೆ ಮಾಡ್ಬಹುದು. ಇದಕ್ಕೆ ನೀವು 100 ರೂಪಾಯಿ ಶುಲ್ಕ ಪಾವತಿ ಮಾಡ್ಬೇಕು.
ಸಿತಾರೆ ಜಮೀನ್ ಪರ್ 2025 ರ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆ ನಟಿ ಜೆನೆಲಿಯಾ ದೇಶಮುಖ್ ನಟಿಸಿದ್ದಾರೆ. ಅಲ್ಲದೆ 10 ವಿಕಲಚೇತನರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ಈ ಸಿನಿಮಾವನ್ನು ಅಮೆರಿಕ, ಕೆನಡಾ, ಯುಕೆ, ಆಸ್ಟ್ರೇಲಿಯಾ, ಜರ್ಮನಿ, ಇಂಡೋನೇಷ್ಯಾ, ಫಿಲಿಪೈನ್ಸ್, ಸಿಂಗಾಪುರ ಮತ್ತು ಸ್ಪೇನ್ ಸೇರಿದಂತೆ 38 ದೇಶಗಳ ಜನರು ಯೂಟ್ಯೂಬ್ ನಲ್ಲಿ ವೀಕ್ಷಣೆ ಮಾಡ್ಬಹುದಾಗಿದೆ.
2007ರ ತಾರೆ ಜಮೀನ್ ಪರ್ ಚಿತ್ರ ಬಿಡುಗಡೆಯಾಗಿತ್ತು. ಅದ್ರ ಸಿಕ್ವೆನ್ಸ್ ಇದು ಎನ್ನಲಾಗಿದೆ. ಸಿತಾರೆ ಜಮೀನ್ ಫರ್, ಪ್ರೀತಿ, ನಗು ಸೇರಿದಂತೆ ಭಾವನಾತ್ಮಕ ಕಥೆಯಾಗಿದೆ. ಸಿನಿಮಾ ಸದ್ಯ ಥಿಯೇಟರ್ ನಲ್ಲಿಯೂ ಓಡ್ತಿದೆ. ಇಲ್ಲಿಯವರೆಗೆ ವಿಶ್ವಾದ್ಯಂತ 250 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಮುಂದಿನ ದಿನಗಳಲ್ಲಿ ಆಮಿರ್ ಖಾನ್ ಪ್ರಪ್ರೊಡಕ್ಷನ್ಸ್ನ ಹೆಚ್ಚಿನ ಸಿನಿಮಾಗಳು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಬ್ಬರ ಮಧ್ಯೆ ನಡೆದ ಒಪ್ಪಂದ, ಥಿಯೇಟರ್ ಗೆ ಪರ್ಯಾಯವಾಗಿ ಯೂಟ್ಯೂಬ್ ಬಳಕೆಗೆ ಪ್ರೋತ್ಸಾಹ ನೀಡಲಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಯೂಟ್ಯೂಬ್ ಬಳಕೆದಾರರ ಸಂಖ್ಯೆ ಏರ್ತಾನೆ ಇದೆ. 2024 ರಲ್ಲಿ,ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 5 ಜನರಲ್ಲಿ 4 ಜನರು ಯೂಟ್ಯೂಬ್ ಬಳಸುತ್ತಿದ್ದರು. ಜಾಗತಿಕವಾಗಿ, ಯೂಟ್ಯೂಬ್ನಲ್ಲಿ ಪ್ರತಿದಿನ 7.5 ಶತಕೋಟಿಗೂ ಹೆಚ್ಚು ವಿಡಿಯೋಗಳನ್ನು ವೀಕ್ಷಣೆ ಮಾಡಲಾಗ್ತಿದೆ.
ಕಳೆದ 15 ವರ್ಷಗಳಿಂದ ಥಿಯೇಟರ್ ಗೆ ಬರದ ಜನರಿಗೆ ಏನು ವ್ಯವಸ್ಥೆ ಮಾಡ್ಬೇಕು ಅಂತ ಆಲೋಚನೆ ಮಾಡ್ತಿದ್ದೆ. ಈಗ ಸರ್ಕಾರದ ಯುಪಿಐ, ಡಿಜಿಟಲ್ ಜಗತ್ತು ಎಲ್ಲದಕ್ಕೂ ಪರಿಹಾರ ನೀಡಿದೆ. ಮನೆ ಮನೆಗೆ ಸಿನಿಮಾ ತಲುಪಿಸುವ ಮೂಲಕ ಎಲ್ಲರಿಗೂ ಸಿನಿಮಾ ನೋಡಲು ಅವಕಾಶ ನೀಡುವ ನನ್ನ ಕನಸು ನನಸಾಗ್ತಿದೆ ಎಂದು ಆಮಿರ್ ಖಾನ್ ಹೇಳಿದ್ದಾರೆ.
