ಭಾರತದ ಖ್ಯಾತ ಗಾಯಕ ಸೋನು ನಿಗಮ್ ಮೊದಲ ಬಾರಿಗೆ ಖಾಸಗಿ ಸಂದರ್ಶನದಲ್ಲಿ ತಮ್ಮ ಪುತ್ರ ನೀವನ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆತನ ಭವಿಷ್ಯ ಭಾರತದಲ್ಲಿ ಬೇಡ ಎಂದು ಕಟ್ಟುನಿಟ್ಟಾಗಿ ನಿರ್ಧರಿಸಿದ್ದಾರೆ.

ಕನ್ನಡ, ಮರಾಠಿ, ಬೆಂಗಾಲಿ, ಹಿಂದಿ, ತಮಿಳು, ಗುಜರಾತಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಸೋನು ನಿಗಮ್ ಸದ್ಯ ಮುಂಬೈನಲ್ಲಿ 'ಈಶ್ವರ್ ಕಾ ವೋ ಸಚ್ಚಾ ಬಂಡಾ' ಚಿತ್ರ ಪ್ರಮೋಷನ್ ಮಾಡುತ್ತಿದ್ದಾರೆ.

ಪಬ್ಲಿಕ್‌ನಲ್ಲಿ ಲಿಪ್‌ಲಾಕ್‌ ಮಾಡಿ ಟ್ರೋಲ್‌ ಆದ ಮುಂಗಾರು ಮಳೆ ಗಾಯಕ 

ಸೋನು ಮಾತು:
'ಈಶ್ವರ್ ಕಾ ವೋ ಸಚ್ಚಾ ಬಂಡಾ' ಚಿತ್ರದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಪಾಸಿಟಿವಿಟಿ ನೀಡುವ ಹಾಡುಗಳನ್ನು ಜನರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಾಡಿಗಿರುವ ಕಾನ್ಸೆಪ್ಟ್‌, ನಾನು ನಂಬುವ ಕಾನ್ಸೆಪ್ಟ್‌ ಎರಡೂ ಒಂದೇ' ಎಂದು ಹೇಳಿದ್ದಾರೆ.

ಪುತ್ರ ಭಾರತದಲ್ಲಿಲ್ಲ, ದುಬೈನಲ್ಲಿದ್ದಾರೆ: 

'ನಿಜ ಹೇಳಬೇಕೆಂದರೆ ನನ್ನ ಪುತ್ರ ನೀವನ್ ಗಾಯಕನಾಗುವುದು ಬೇಡ, ಒಂದು ವೇಳೆ ಗಾಯಕನಾದರೂ ಭಾರತದಲ್ಲಂತು ಬೇಡವೇ ಬೇಡ.  ಹೇಗಿದ್ದರೂ ಅವನು ಭಾರತದಲ್ಲಿಲ್ಲ ನಾನು ಅವನನ್ನು ದುಬೈಗೆ ಕರೆದುಕೊಂಡು ಹೋಗಿರುವೆ. ಅವನು ದುಬೈನಲ್ಲೇ ನೆಲೆಸುತ್ತಾನೆ. ನೀವನ್ ಹುಟ್ಟುತ್ತಲೇ ಗಾಯಕ ಆದರೆ ಅವನಿಗೆ ಬೇರೆ ಬೇರೆ ಆಸಕ್ತಿಗಳು ಇರುತ್ತದೆ. ಅವನು UAEನಲ್ಲಿ ಈಗಾಗಲೇ ಟಾಪ್‌ ಗೇಮರ್‌ ಆಗಿ ಗುರುತಿಸಿಕೊಂಡಿದ್ದಾನೆ. ಫಾರ್ಟ್‌ನೈಟ್‌ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾನೆ.  ಅವನು ತುಂಬಾನೇ ಟ್ಯಾಲೆಂಟೆಡ್‌ ನಾವು ಏನು ಹೇಳುವುದು ಬೇಡ ಅವನೇ ನಿರ್ಧರಿಸುತ್ತಾನೆ' ಎಂದು ಸೋನು ಮಾತನಾಡಿದ್ದಾರೆ.

ಬಾಲಿವುಡ್ ನೆಪೊಟಿಸಂ: ಕ್ವೀನ್ ಕಂಗನಾ ಸಪೋರ್ಟ್‌ಗೆ ನಿಂತ ಸೋನು..! 

ಜನರ ಮಾತಿಗೆ ಬೆಲೆ ಇದ್ಯಾ:

'ನನ್ನ ಗಾಯನ ಜನರಿಗೆ ಇಷ್ಟವಾಗುತ್ತೋ ಇಲ್ವೋ ಎಂಬುದು ಪ್ರಶ್ನೆಯಾಗಬಾರದು ಬದಲಿಗೆ ನಿಮ್ಮ ಸಾಧನೆ ಹೇಗಿದೆ ಎಂದು ಕೇಳಬೇಕು.ಪ್ರಾಮಾಣಿಕವಾಗಿ ಮಿಲಿಯನ್ ವೀಕ್ಷಣೆ ಪಡೆಯುವುದಕ್ಕೂ ಹಣ ಕೊಟ್ಟಿ ವೀಕ್ಷಣೆ ಪಡೆಯುವುದಕ್ಕೂ ವ್ಯತ್ಯಾಸವಿದೆ. ಹೀಗೆಲ್ಲಾ ಮಾಡಿದರೆ ನಿಜಕ್ಕೂ ನಿದ್ದೆ ಬರುತ್ತಾ? ಜನರಿಗೆ ಮೋಸ ಮಾಡಬಹುದು ಆದರೆ ದೇವರಿಗೆ ಮೋಸ ಮಾಡುವುದಕ್ಕೆ ಆಗುತ್ತಾ? ನನ್ನ ಶ್ರಮಕ್ಕೆ ಜನರು ನನ್ನನ್ನು ಗುರುತಿಸುತ್ತಿರುವುದು' ಎಂದು ಸೋನು ಮಾತನಾಡಿದ್ದಾರೆ.