ಬಾಲಿವುಡ್‌ ನ ಗೆಹ್ರೈಯಾನ್‌ ಸಿನಿಮಾದಲ್ಲಿ ದೀಪಿಕಾ ಜೊತೆ ಅನನ್ಯ ಪಾಂಡೆ, ಸಿದ್ಧಾಂತ್‌ ಚತುರ್ವೇದಿ ನಟಿಸಿದ್ದಾರೆ. ಚಿತ್ರ ಇಂಟಿಮೇಟ್‌ ದೃಶ್ಯಗಳಿಂದ ಹೆಚ್ಚು ಸುದ್ದಿಗೆ ಬಂದಿತ್ತು. ತೆರೆ ಮೇಲೆ ಹಾಟ್ ಆಗಿ ಕಾಣಿಸಿಕೊಂಡಿರುವ ಸಿದ್ಧಾಂತ್‌ ಶೂಟಿಂಗ್‌ ಪಯಣ ಸುಲಭವಾಗಿರಲಿಲ್ಲ. 

ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಜೊತೆ ಹಾಟ್‌ ಸೀನ್‌ ಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ನಟ ಸಿದ್ಧಾಂತ್ ಚತುರ್ವೇದಿ, ಇಂಟಿಮೇಟ್‌ ಸೀನ್‌ ಬಗ್ಗೆ ಇಂಟರೆಸ್ಟಿಂಗ್‌ ವಿಷ್ಯವನ್ನು ಹೊರ ಹಾಕಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಸಿದ್ಧಾಂತ್ ಚತುರ್ವೇದಿ, ಗೆಹ್ರೈಯಾನ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ದೀಪಿಕಾ ಜೊತೆ ಸಾಕಷ್ಟು ಇಂಟಿಮೇಟ್‌ ದೃಶ್ಯಗಳಿದ್ದವು. ಆದ್ರೆ ಚಿತ್ರದ ಕಥೆ ಕೇಳ್ತಿದ್ದಂತೆ ಭಯಗೊಂಡಿದ್ದ ಸಿದ್ಧಾಂತ್ ಚತುರ್ವೇದಿ, ಚಿತ್ರದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದರು. ಅವರ ತಂದೆ ಹಾಗೂ ನಿರ್ದೇಶಕ ಕರಣ್‌ ಜೋಹರ್ ನೆರವಿನಿಂದ ಇಂಟಿಮೇಟ್‌ ದೃಶ್ಯಗಳಲ್ಲಿ ನಟಿಸಿದ ಸಿದ್ಧಾಂತ್ ಚತುರ್ವೇದಿ, ಅಭಿಮಾನಿಗಳನ್ನು ಸೆಳೆದಿದ್ದಾರೆ. 2022ರಲ್ಲಿ ತೆರೆಕಂಡ ಚಿತ್ರ, ಅಮೆಜಾನ್‌ ಫ್ರೈಮ್‌ ನಲ್ಲಿ ಸಾಕಷ್ಟು ಮೆಚ್ಚುಗೆಗಳಿಸಿದ ಚಿತ್ರಗಳಲ್ಲಿ ಒಂದಾಗಿದೆ. 

ಸಂದರ್ಶನ (Interview) ವೊಂದರಲ್ಲಿ ಮಾತನಾಡಿದ ಸಿದ್ಧಾಂತ್ ಚತುರ್ವೇದಿ (Siddhant Chaturvedi), ಚಿತ್ರದ ಬಗ್ಗೆ ತಮಗಿದ್ದ ಭಯವನ್ನು ಬಿಚ್ಚಿಟ್ಟಿದ್ದಾರೆ. ಶಕುನ್ ಬಾತ್ರಾ ನಿರ್ದೇಶಿಸಿದ ಗೆಹ್ರೈಯಾನ್, ಸಂಬಂಧಗಳು, ದಾಂಪತ್ಯ ದ್ರೋಹಕ್ಕೆ ಸಂಬಂಧಿಸಿದ ಚಿತ್ರವಾಗಿದೆ. ಇದ್ರಲ್ಲಿ ಸಿದ್ಧಾಂತ್‌ ಚತುರ್ವೇದಿ, ದೀಪಿಕಾ ಪಡುಕೋಣೆ (Deepika Padukone) ಹಾಗೂ ಅನನ್ಯ ಪಾಂಡೆ (Ananya Pandey) ನಟಿಸಿದ್ದಾರೆ. ಇದು ತ್ರಿಕೋನ್ ಪ್ರೇಮಕಥೆಯಾಗಿದೆ. ಈ ಚಿತ್ರದಲ್ಲಿ ಹಾಟ್‌ ದೃಶ್ಯಗಳಲ್ಲಿ ಕಾಣಿಸಿಕೊಂಡ ಸಿದ್ಧಾಂತ್‌ಗೆ ಚಿತ್ರದ ಶೂಟಿಂಗ್ ಸುಲಭವಾಗಿರಲಿಲ್ಲ.

ಡ್ಯಾನ್ಸ್, ಶೂಟಿಂಗ್ ಬ್ರೇಕ್ ನೀಡಿ ಗೌಡಗೆರೆ ಚಾಮುಂಡೇಶ್ವರಿ ದರ್ಶನ ಪಡೆದ ನಮ್ರತಾ ಗೌಡ

ಫಿಲ್ಮ್‌ಫೇರ್‌ನೊಂದಿಗೆ ಮಾತನಾಡಿದ ಸಿದ್ಧಾಂತ್, ನನ್ನ ತಂದೆ ಹಾಗೂ ಕರಣ್‌ ಜೋಹರ್‌ ಜೊತೆ ನಾನು ಮಾತನಾಡಿದ್ದೆ. ಅವರು ಧೈರ್ಯ ನೀಡಿದ್ದರು. ನಂತ್ರ ಶೂಟಿಂಗ್‌ ಗೆ ಸಿದ್ಧವಾದೆ ಎಂದಿದ್ದಾರೆ. ನನಗೆ ಏನೂ ಮಾಡ್ಬೇಕು ತಿಳಿಯುತ್ತಿಲ್ಲ ಎಂದು ಸಿದ್ಧಾಂತ್ ಚತುರ್ವೇದಿ, ತಂದೆಗೆ ಹೇಳಿದ್ದರು. ಮಗನ ಜೊತೆ ಮಾತನಾಡಿದ ತಂದೆ, ಶೇಕಡಾ 99ರಷ್ಟು ಮಂದಿ ಈ ಅವಕಾಶಗಿಟ್ಟಿಸಿಕೊಳ್ಳಲು ಏನು ಬೇಕಾದ್ರೂ ಮಾಡಲು ಸಿದ್ಧವಿರುತ್ತಾರೆ. ಅವರು ಈ ಬಗ್ಗೆ ಒಂದು ಸೆಕೆಂಡ್‌ ಕೂಡ ಆಲೋಚನೆ ಮಾಡೋದಿಲ್ಲ. ನೀನು ಏನು ಆಲೋಚನೆ ಮಾಡ್ತಿದ್ದೀಯಾ? ಒಬ್ಬ ಮನುಷ್ಯನಾಗು, ವೃತ್ತಿಪರನಾಗು, ನಿನ್ನ ಕೆಲಸವನ್ನು ನೀನು ಮಾಡು ಎಂದಿದ್ದರಂತೆ. ಒಬ್ಬ ನಟನಾಗ್ಬೇಕು ಎಂದಾದ್ರೆ ಧೈರ್ಯವಾಗಿ ಇದನ್ನು ಮಾಡ್ಬೇಕು. ಸಿದ್ಧಾಂತ್, ಇದು ಧರ್ಮ. ದೀಪಿಕಾ ಪಡುಕೋಣೆ, ಶಕುನ್ ಬಾತ್ರಾ, ಮತ್ತು ನೀವು ಅದನ್ನು ಮಾಡಬೇಕು ಎಂದಿದ್ದರಂತೆ.

ಸಂಕೋಚದ ವ್ಯಕ್ತಿತ್ವ ನನಗೆ ಸಮಸ್ಯೆ ಆಗಿತ್ತು ಎಂದ ಸಿದ್ಧಾಂತ್ ಚತುರ್ವೇದಿ, ಈ ಬಗ್ಗೆ ಕರಣ್‌ ಜೋಹರ್‌ ಕೂಡ ಸಹಾಯ ಮಾಡಿದ್ದರು ಎಂದಿದ್ದಾರೆ. ಕರಣ್‌ ಜೋಹರ್‌ ನನಗೆ ಕರೆ ಮಾಡಿದ್ದರು. ಏನು ತೊಂದರೆ ಎಂದು ಕೇಳಿದ್ದರು. ನಾನು ಅವರಿಗೆ ಎಲ್ಲವನ್ನೂ ವಿವರಿಸಿದ್ದೆ. ಡ್ಯೂಡ್‌, ನೀನು ವೃತ್ತಿಪರ, ವೃತ್ತಿಪರನಂತೆ ವ್ಯವಹರಿಸುವ ಎಂದು ಸಲಹೆ ನೀಡಿದ್ದರು ಎನ್ನುತ್ತಾರೆ ಸಿದ್ಧಾಂತ್ ಚತುರ್ವೇದಿ. 

ಶಂಕರ್‌ ನಾಗ್ ಕಂಡ್ರೆ ಡಾ ರಾಜ್‌ಕುಮಾರ್‌ಗೆ ಆಗ್ತಾ ಇರ್ಲಿಲ್ಲ ಅನ್ನೋದು ಶುದ್ಧ ಸುಳ್ಳು, ಇಲ್ಲಿ ನೋಡಿ!

ಇದೇ ಸಂದರ್ಶನದಲ್ಲಿ ಸಿದ್ಧಾಂತ್ ಚತುರ್ವೇದಿ, ಅಪ್ಪನ ನಂತರದ ಪ್ರತಿಕ್ರಿಯೆ ಬಗ್ಗೆಯೂ ಹೇಳಿದ್ದಾರೆ. ಚಿತ್ರ ಬಿಡುಗಡೆಯಾದ್ಮೇಲೆ ಎಲ್ಲರೂ ಒಟ್ಟಿಗೆ ಚಿತ್ರ ವೀಕ್ಷಣೆಗೆ ಹೋಗಿದ್ವಿ. ಆದ್ರೆ ನಾನು ಅಪ್ಪನ ಜೊತೆ ಕುಳಿತಿರಲಿಲ್ಲ. ಮೂಲೆಯಲ್ಲಿ ತಲೆತಗ್ಗಿಸಿ ಕುಳಿತಿದ್ದೆ. ಚಿತ್ರ ಮುಗಿದ್ಮೇಲೆ ಹೇಗಿತ್ತು ಅಂತ ಅಪ್ಪನನ್ನು ಕೇಳಿದ್ದೆ. ನಿನ್ನ ಅಭಿನಯ ಚೆನ್ನಾಗಿತ್ತು, ಆದರೆ ಇಂಟಿಮೇಟ್ ದೃಶ್ಯಗಳು ಸ್ವಲ್ಪ ಜಾಸ್ತಿಯೇ ಇತ್ತು ಎಂದು ಅಪ್ಪ ಹೇಳಿದ್ದರು. ನಾನು ನಿರ್ದೇಶಕರಿಗೆ ಏನು ಬೇಕೋ ಅದನ್ನೇ ಮಾಡುತ್ತಿದ್ದೆ ಎಂದಿದ್ದೆ. ಅಪ್ಪ ಸಿನಿಮಾವನ್ನು ಇಷ್ಟಪಟ್ಟಿದ್ದರು ಎಂದು ಸಿದ್ಧಾಂತ್‌ ಚತುರ್ವೇದಿ ಹೇಳಿದ್ದಾರೆ. ಇನ್ನು ಸಂಬಂಧಿಕರ ಬಗ್ಗೆ ಮಾತನಾಡಿದ ಅವರು, ಸಂಬಂಧಿಕರು ಕೂಡ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಿದ್ಧಾಂತ್‌ ನಟನಾಗ್ತಾನೆ ಎಂದುಕೊಂಡಿದ್ವಿ. ಆದ್ರೆ ಸ್ವಲ್ಪ ಹೆಚ್ಚೇ ಮಾಡಿದ್ದಾನೆ ಎಂದಿದ್ದರಂತೆ.